ನ್ಯೂಯಾರ್ಕ್( ಅಮೆರಿಕ):ಪಶ್ಚಿಮ ನ್ಯೂಯಾರ್ಕ್ ನಗರದ ಲಾಕ್‌ಪೋರ್ಟ್‌ನ ಕೆಳಗಿರುವ ಎರಿ ಕಾಲುವೆಯಿಂದ ನೀರನ್ನು ಸಾಗಿಸಲು ನಿರ್ಮಿಸಲಾದ ಐತಿಹಾಸಿಕ ಭೂಗತ ಗುಹೆಯ ವ್ಯವಸ್ಥೆಯ ಪ್ರವಾಸದ ಸಮಯದಲ್ಲಿ ದೋಣಿ ಮಗುಚಿ ಬಿದ್ದಿದೆ. ಘಟನೆಯಲ್ಲಿ ದೋಣಿ ಕೆಳಗೆ ಸಿಕ್ಕಿಬಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಪೋರ್ಟ್ ಕೇವ್ ಟೂರ್ಸ್ ನಿರ್ವಹಿಸುತ್ತಿದ್ದ ಫ್ಲಾಟ್-ಬಾಟಮ್ ಬೋಟ್‌ನಲ್ಲಿದ್ದ ಸುಮಾರು 29 ಜನರು 300 - ಅಡಿ ಮಾರ್ಗದ ಕೊನೆಯಲ್ಲಿ ಕ್ರಾಫ್ಟ್ ತುದಿಗೆ ತಿರುಗಿದಾಗ ಐದರಿಂದ ಆರು ಅಡಿ ಆಳದ ನೀರಿನಲ್ಲಿ ಮುಳುಗಿದ್ದರು. ಪ್ರವಾಸಿಗರನ್ನು ಒರಟಾದ ಸುರಂಗದ ಮೂಲಕ ಭೂಗತ ದೋಣಿ ವಿಹಾರಕ್ಕೆ ಕರೆದೊಯ್ಯಲಾಗುತ್ತದೆ. ಇದನ್ನು 19ನೇ ಶತಮಾನದಲ್ಲಿ ಕೈಗಾರಿಕಾ ಶಕ್ತಿಯ ಮೂಲವಾಗಿ ಕಾಲುವೆ ನೀರನ್ನು ಸಾಗಿಸಲು ಸ್ಫೋಟಿಸಲಾಯಿತ್ತು.
ನೀರಿನಲ್ಲಿ ಮುಳುಗಿದ ಕೆಲವು ಪ್ರಯಾಣಿಕರು ತಾವಾಗಿಯೇ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಗಾಳಿ ತುಂಬಬಹುದಾದ ದೋಣಿಯನ್ನು ಬಳಸಿ ರಕ್ಷಣಾ ಸಿಬ್ಬಂದಿ ಸುಮಾರು 16 ಜನರನ್ನು ರಕ್ಷಿಸಿದ್ದಾರೆ ಎಂದು ಲಾಕ್‌ಪೋರ್ಟ್ ಅಗ್ನಿಶಾಮಕ ಮುಖ್ಯಸ್ಥ ಲುಕಾ ಕ್ವಾಗ್ಲಿಯಾನೊ ಹೇಳಿದ್ದಾರೆ. ರಕ್ಷಣಾ ಕಾರ್ಯಕರ್ತರು ದೋಣಿಯನ್ನು ತಲುಪಿದಾಗ, ಕೆಲವು ಪ್ರಯಾಣಿಕರು ಅದರ ತಲೆಕೆಳಗಾದ ಹಲ್ ಮೇಲೆ ಹತ್ತಿದ್ದರು ಎಂದು ಕ್ವಾಗ್ಲಿಯಾನೊ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಮೃತ ವ್ಯಕ್ತಿಯ ಹೆಸರನ್ನು ಅಧಿಕಾರಿಗಳು ತಕ್ಷಣ ಬಿಡುಗಡೆ ಮಾಡಿಲ್ಲ. ಅವರ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಟ್ಟು 11 ಜನರನ್ನು ಆಸ್ಪತ್ರೆಗಳಿಗೆ ಕರೆತರಲಾಗಿದ್ದು, ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಗ್ನಿಶಾಮಕ ಮುಖ್ಯಸ್ಥರು ತಿಳಿಸಿದ್ದಾರೆ.