ಕರ್ನಾಟಕ

karnataka

ETV Bharat / international

ನ್ಯೂಜಿಲ್ಯಾಂಡ್​​ನ ನೋಟರಿ ಪಬ್ಲಿಕ್ ಆಗಿ ಅಶಿಮಾ ಸಿಂಗ್ ನೇಮಕ: ಈ ಹುದ್ದೆಗೇರಿದ ಮೊದಲ ಭಾರತೀಯ ಮಹಿಳೆ - etv bharat kannada

2011ರಲ್ಲಿ ಆಕ್ಲೆಂಡ್ ವಿಶ್ವವಿದ್ಯಾಲಯದಿಂದ ಭಾರತ ಮೂಲದ ಅಶಿಮಾ ಸಿಂಗ್ ಕಾನೂನು ಪದವಿಯನ್ನು ಪಡೆದು ನಂತರ ನ್ಯೂಜಿಲ್ಯಾಂಡ್​​ನ ಹೈಕೋರ್ಟ್‌ಗೆ ಪ್ರವೇಶಿಸಿದ್ದರು.

nz-gets-its-first-indian-origin-woman-notary-public
ನ್ಯೂಜಿಲೆಂಡ್​ನ ನೋಟರಿ ಪಬ್ಲಿಕ್ ಆಗಿ ಅಶಿಮಾ ಸಿಂಗ್ ನೇಮಕ: ಈ ಹುದ್ದೆಗೇರಿದ ಮೊದಲ ಭಾರತೀಯ ಮಹಿಳೆ

By

Published : Oct 4, 2022, 9:18 PM IST

ಆಕ್ಲೆಂಡ್ (ನ್ಯೂಜಿಲ್ಯಾಂಡ್​ ): ನ್ಯೂಜಿಲ್ಯಾಂಡ್​​ನಲ್ಲಿ ನೋಟರಿ ಪಬ್ಲಿಕ್ ಆಗಿ ಭಾರತೀಯ ಮೂಲದ ಅಶಿಮಾ ಸಿಂಗ್ ನೇಮಕಗೊಂಡಿದ್ದಾರೆ. ಈ ಮೂಲಕ ಹುದ್ದೆಗೆ ಏರಿದ ಮೊದಲ ಭಾರತದ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ.

ಅಶಿಮಾ ಸಿಂಗ್ ಆಕ್ಲೆಂಡ್ ಮೂಲದ ಲೀಗಲ್ ಅಸೋಸಿಯೇಟ್ಸ್‌ನಲ್ಲಿ ಬ್ಯಾರಿಸ್ಟರ್ ಮತ್ತು ಸಾಲಿಸಿಟರ್ ಆಗಿದ್ದಾರೆ. ಲೀಗಲ್ ಅಸೋಸಿಯೇಟ್ಸ್‌ನಲ್ಲಿ ಸಹ ಸಂಸ್ಥಾಪಕಿರಾಗಿರುವ ಅವರು 2011ರಲ್ಲಿ ಆಕ್ಲೆಂಡ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದು ನಂತರ ನ್ಯೂಜಿಲ್ಯಾಂಡ್​ ಹೈಕೋರ್ಟ್‌ಗೆ ಪ್ರವೇಶಿಸಿದ್ದರು. ಇದಕ್ಕೂ ಮುನ್ನ 2000ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು.

ಸಾಗರೋತ್ತರ ಬಳಕೆಗಾಗಿ ಡಾಕ್ಯುಮೆಂಟ್‌ನ ಸಿಂಧುತ್ವವನ್ನು ಪರಿಶೀಲನೆಗೆ ನೋಟರಿ ಅಗತ್ಯವಾಗಿದೆ. ಸರ್ಕಾರಿ ಏಜೆನ್ಸಿಗಳು, ನ್ಯಾಯಾಲಯಗಳು ಮತ್ತು ವಾಣಿಜ್ಯ ಒಪ್ಪಂದಗಳಂತಹ ಸಾಗರೋತ್ತರ ಬಳಕೆಗಾಗಿ ಜನರನ್ನು ಒದಗಿಸಲು ಕೇಳಲಾಗುವ ದಾಖಲೆಗಳಿಗೆ ಅಶಿಮಾ ಸಿಂಗ್ ಅವರು ಸಹಿ ಮತ್ತು ಮುದ್ರೆ ಬೇಕಾಗುತ್ತದೆ.

ಇನ್ನು, ಇದೇ ವರ್ಷ ಆಕ್ಲೆಂಡ್‌ನಲ್ಲಿ ನಡೆದ 'ವುಮೆನ್ ಫಾರ್ ವುಮೆನ್ ಎಥ್ನಿಕ್ ವುಮೆನ್ ಅವಾರ್ಡ್ಸ್​​ನಲ್ಲಿ ಅಶಿಮಾ ಸಿಂಗ್ ಅವರನ್ನು ಸ್ಫೂರ್ತಿದಾಯಕ ಎಥ್ನಿಕ್ ಬ್ಯುಸಿನೆಸ್ ವುಮನ್ 2022ರ ವಿಜೇತರಾಗಿ ಘೋಷಿಸಲಾಗಿತ್ತು. ಅಲ್ಲದೆ, ಭಾರತೀಯ ವ್ಯಾಪಾರ ಪ್ರಶಸ್ತಿಗಳಲ್ಲಿ 2016ರ ಸಾಲಿನ ಉದ್ಯಮಿ ಪ್ರಶಸ್ತಿಗೂ ಅಶಿಮಾ ಸಿಂಗ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ:ಭಾರತೀಯ ವೈದ್ಯರನ್ನು ಸೆಳೆಯಲು ಮುಂದಾದ ಸಿಂಗಾಪುರ..

ABOUT THE AUTHOR

...view details