ನವದೆಹಲಿ:ಈಶಾನ್ಯ ಪ್ರದೇಶವು ನವದೆಹಲಿ ಮತ್ತು ಟೋಕಿಯೊ ನಡುವಿನ ಸಹಕಾರದ ಪ್ರಮುಖ ಅಂಶವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಅವರು ಈ ವಾರದ ಆರಂಭದಲ್ಲಿ ಜಪಾನ್ ವಿದೇಶಾಂಗ ಸಚಿವ ಹಯಾಶಿ ಯೋಶಿಮಾಶಾ ಅವರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಎರಡನೇ ಭಾರತ-ಜಪಾನ್ ಫೋರಂ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಭಾರತದ ಈಶಾನ್ಯ ಪ್ರದೇಶದ ಅಭಿವೃದ್ಧಿ ಮತ್ತು ಬಂಗಾಳ ಕೊಲ್ಲಿ ಪ್ರದೇಶದಲ್ಲಿನ ಪ್ರಯತ್ನಗಳು ಮತ್ತು ಈಶಾನ್ಯ ಭಾರತದಲ್ಲಿನ ಉಪಕ್ರಮಗಳ ನಡುವಿನ ಸಹಕಾರವನ್ನು ಉಲ್ಲೇಖಿಸಿದರು. "ಜಪಾನ್ ಭಾರತದಲ್ಲಿನ ಉತ್ಪಾದನಾ ವಲಯದ ಮೇಲೆ ಅತ್ಯಂತ ಶಕ್ತಿಯುತವಾದ ಪ್ರಭಾವವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ನಗರೀಕರಣ ಪ್ರಕ್ರಿಯೆ, ಈ ದೇಶದಲ್ಲಿ ಲಾಜಿಸ್ಟಿಕ್ಸ್ ಸಂಘಟನೆ ಮತ್ತು ಸಚಿವ ಹಯಾಶಿ ಅವರು ಸೂಚಿಸಿದಂತೆ, ಈಶಾನ್ಯ ಪ್ರದೇಶದಲ್ಲಿ ಬೆಂಬಲದ ಮೂಲವಾಗಿದೆ ಮತ್ತು ಈಶಾನ್ಯ ಪ್ರದೇಶವು ನೆರೆಯ ದೇಶಗಳಿಗೆ ಇದು ಕೇವಲ ಒಂದು ಕ್ಷೇತ್ರವಾಗಿದೇ ಅದನ್ನು ಮೀರಿರುವಂತಹದ್ದು ಆಗಿದೆ'' ಎಂದು ಜೈಶಂಕರ್ ಬಣ್ಣಿಸಿದರು.
ಭಾರತ-ಜಪಾನ್ ಫೋರಮ್ ಅನ್ನು ಸಹಕಾರ ಬಲಪಡಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಅವಕಾಶಗಳನ್ನು ಬಳಸಿಕೊಳ್ಳುವುದು, ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವುದು, ಪರಸ್ಪರ ನಂಬಿಕೆಯನ್ನು ಬೆಳೆಸುವುದು. ನವದೆಹಲಿ ಮತ್ತು ಟೋಕಿಯೊ ನಡುವಿನ ಭವಿಷ್ಯದ ಸಹಕಾರಕ್ಕಾಗಿ ಜಂಟಿ ಕಾರ್ಯಸೂಚಿಯನ್ನು ಅಭಿವೃದ್ಧಿಪಡಿಸುದಾಗಿದೆ ಎಂದು ಜೈ ಶಂಕರ್ ಪ್ರತಿಪಾದಿಸಿದರು.