ಕರ್ನಾಟಕ

karnataka

ETV Bharat / international

ದಕ್ಷಿಣ ಕೊರಿಯಾ - ಅಮೆರಿಕದ ಸಮರಾಭ್ಯಾಸದ ಬೆನ್ನಲ್ಲೆ, ಉತ್ತರ ಕೊರಿಯಾ ಯುದ್ಧ ತಾಲೀಮು ಜೋರು.. - ಪ್ರತಿದಾಳಿಗೆ ಸಿದ್ಧವಾಗಿ ದಕ್ಷಿಣ ಕೊರಿಯಾದಿಂದ ತಾಲೀಮು

ದಕ್ಷಿಣ ಕೊರಿಯಾ- ಅಮೆರಿಕದ ಸಮರಾಭ್ಯಾಸಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ಯುದ್ಧ ತಾಲೀಮು ಜೋರಾಗಿಯೇ ನಡೆಸಿದೆ. ದಕ್ಷಿಣ ಕೊರಿಯಾ - ಅಮೆರಿಕ ಮಿಲಿಟರಿ ವ್ಯಾಯಾಮಕ್ಕೆ ಉತ್ತರ ಕೊರಿಯಾ ಬೆದರಿಕೆ ಹಾಕಿದೆ.

North Korea says it simulated nuclear attacks on South Korea and rehearsed occupation of its rivals
ದಕ್ಷಿಣ ಕೊರಿಯಾ- ಅಮೆರಿಕದ ಸಮರಾಭ್ಯಾಸದ ಬೆನ್ನಲ್ಲೆ, ಉತ್ತರ ಕೊರಿಯಾ ಯುದ್ಧ ತಾಲೀಮು ಜೋರು..

By ETV Bharat Karnataka Team

Published : Aug 31, 2023, 12:13 PM IST

ಸಿಯೋಲ್:ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಜಂಟಿ ಸಮರಾಭ್ಯಾಸ ನಡೆಸಿರುವುದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾವು ದಕ್ಷಿಣ ಕೊರಿಯಾದ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಮಿಲಿಟರಿ ಕಮಾಂಡ್ ತಾಲೀಮು ಜೋರಾಗಿಯೇ ನಡೆಸಿದೆ.

ಆಕ್ರಮಣಕಾರಿ ಪರಮಾಣು ಸಿದ್ಧಾಂತ:ಪ್ಯೊಂಗ್ಯಾಂಗ್ ಈ ಹಿಂದೆ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಪರೀಕ್ಷಿಸಿತ್ತು. ಜೊತೆಗೆ ದಕ್ಷಿಣ ಕೊರಿಯಾ ಮತ್ತು ಯುಎಸ್ ಜೊತೆಗಿನ ಸಂಭಾವ್ಯ ಯುದ್ಧಗಳಲ್ಲಿ ಅದನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿವರಿಸಿದೆ. ಆದರೆ, ಉತ್ತರ ಕೊರಿಯಾ ಯುದ್ಧ ಯೋಜನೆಗಳ ಬಹಿರಂಗಪಡಿಸುವಿಕೆಯು ಅದರ ವಿರೋಧಿಗಳನ್ನು ಬೆದರಿಸಲು ಅದರ ಆಕ್ರಮಣಕಾರಿ ಪರಮಾಣು ಸಿದ್ಧಾಂತವನ್ನು ಪುನರುಚ್ಚರಿಸಿದೆ. ಏಕೆಂದರೆ, ನಡೆಯುತ್ತಿರುವ ದಕ್ಷಿಣ ಕೊರಿಯಾ - ಅಮೆರಿಕ ಮಿಲಿಟರಿ ವ್ಯಾಯಾಮಕ್ಕೆ ಇದು ಪ್ರಮುಖ ಭದ್ರತಾ ಬೆದರಿಕೆ ಎಂದು ಪರಿಗಣಿಸುತ್ತದೆ ಎಂದು ವೀಕ್ಷಕರು ಹೇಳುತ್ತಾರೆ.

ಪ್ರತಿದಾಳಿಗೆ ಸಿದ್ಧವಾಗಿ ದಕ್ಷಿಣ ಕೊರಿಯಾದಿಂದ ತಾಲೀಮು:ಅಧಿಕೃತ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆ ಪ್ರಕಾರ, ದಕ್ಷಿಣ ಕೊರಿಯಾದ ಪ್ರಮುಖ ಕಮಾಂಡ್ ಸೆಂಟರ್‌ಗಳು ಮತ್ತು ಕಾರ್ಯಾಚರಣೆಯ ವಾಯುನೆಲೆಗಳಲ್ಲಿ ಶತ್ರುಗಳ ಹಠಾತ್ ಸಶಸ್ತ್ರ ಆಕ್ರಮಣವನ್ನು ಹಿಮ್ಮೆಟ್ಟಿಸುವುದು ಆಗಿದೆ. ಪ್ರತಿದಾಳಿಗೆ ಸಿದ್ಧವಾಗಿ ದಕ್ಷಿಣ ಕೊರಿಯಾ ಅರ್ಧದಷ್ಟು ಪ್ರದೇಶವನ್ನು ಆಕ್ರಮಿಸಿಕೊಳ್ಳುವುದು ಈ ತಾಲೀಮು ಉದ್ದೇಶವಾಗಿದೆ. ಬುಧವಾರ ರಾತ್ರಿ ರಾಜಧಾನಿಯಿಂದ ಎರಡು ಯುದ್ಧತಂತ್ರದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಉತ್ತರ ಕೊರಿಯಾದ ಮಿಲಿಟರಿ ಹೇಳಿದೆ.

ಕೊರಿಯನ್ ಪೀಪಲ್ಸ್ ಆರ್ಮಿ ಜನರಲ್ ಸ್ಟಾಫ್ ಮಾಹಿತಿ:ಯುನೈಟೆಡ್ ಸ್ಟೇಟ್ಸ್‌-ದಕ್ಷಿಣ ಕೊರಿಯಾ ಜಂಟಿ ವೈಮಾನಿಕ ತರಬೇತಿಗೆ ಪ್ರತಿಕ್ರಿಯೆಯಾಗಿ, ಉತ್ತರ ಕೊರಿಯಾ ತನ್ನ ಕ್ಷಿಪಣಿ ಪರೀಕ್ಷೆಗಳನ್ನು ನಡೆಸಿದೆ. ಉತ್ತರ ಕೊರಿಯಾದಲ್ಲಿ ಪೂರ್ವಭಾವಿ ಪರಮಾಣು ದಾಳಿಯ ಎದುರಿಸುವ ಮುನ್ನವೇ ಗಂಭೀರ ಬೆದರಿಕೆಯಾಗಿದೆ ಎಂದು ಕೊರಿಯನ್ ಪೀಪಲ್ಸ್ ಆರ್ಮಿ ಜನರಲ್ ಸ್ಟಾಫ್ ಹೇಳಿದ್ದಾರೆ.

ಉತ್ತರ ಕೊರಿಯಾವು ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಜೊತೆಗೆ ಸಂಭಾವ್ಯ ಸಂಘರ್ಷಗಳಲ್ಲಿ ಬಳಕೆ ಮಾಡವುದಾಗಿ ಬಹಿರಂಗವಾಗಿಯೇ ಬೆದರಿಕೆ ಹಾಕಿದೆ. ಏಕೆಂದರೆ, ಅದು ಕಳೆದ ವರ್ಷ ಹೊಸ ಕಾನೂನು ಅಳವಡಿಸಿಕೊಂಡಿದೆ. ಮುಂಬರುವ ಸಂಕಷ್ಟದ ಸಂದರ್ಭಗಳಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಪೂರ್ವಭಾವಿಯಾಗಿ ಬಳುವುದನ್ನು ಅಧಿಕೃತಗೊಳಿಸಿದೆ.

ಈ ಹಿಂದೆ, ಪತ್ತೇದಾರಿ ಉಪಗ್ರಹದ ಉಡಾವಣೆ:ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ವಿಸ್ತರಿಸಲು ಮತ್ತು ಆಧುನೀಕರಿಸುವ ನಿಟ್ಟಿನಲ್ಲಿ ಕಿಮ್ ಅವರು ಶ್ರಮವಹಿಸಿದ್ದಾರೆ. ಪತ್ತೇದಾರಿ ಉಪಗ್ರಹದ ಉಡಾವಣೆಯ 2ನೇ ಪ್ರಯತ್ನವು ಕಳೆದ ವಾರ ವಿಫಲವಾಗಿದೆ. ಆದರೆ, ಅದು ಅಕ್ಟೋಬರ್‌ನಲ್ಲಿ 3ನೇ ಪ್ರಯತ್ನ ನಡೆಸಲು ಸಮಯ ನಿಗದಿ ಪಡಿಸಲಾಗಿದೆ. ರಾಜತಾಂತ್ರಿಕತೆ ಮತ್ತೆ ಆರಂಭಗೊಂಡಾಗ ರಿಯಾಯಿತಿಗಳನ್ನು ನೀಡುವಂತೆ ಅಮೆರಿಕವನ್ನು ಒತ್ತಾಯಿಸಲು ಕಿಮ್, ಕೊನೆಯದಾಗಿ ತನ್ನ ವಿಸ್ತರಿಸಿದ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಲು ಬಯಸಿದ್ದಾರೆ ಎಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ರಷ್ಯಾದ ವಿಮಾನ ನಿಲ್ದಾಣದ ಮೇಲೆ ಉಕ್ರೇನ್​ ಡ್ರೋನ್ ದಾಳಿ: 4 ವಿಮಾನಗಳಿಗೆ ಹಾನಿ

ABOUT THE AUTHOR

...view details