ಕರ್ನಾಟಕ

karnataka

ETV Bharat / international

ಮಾನವ ಹಕ್ಕುಗಳ ವಕೀಲ ಅಲೆಸ್ ಬಿಲಿಯಾಟ್ಸ್ಕಿಗೆ ನೊಬೆಲ್​ ಶಾಂತಿ ಪ್ರಶಸ್ತಿ - ಅಲೆಸ್ ಬಿಲಿಯಾಟ್ಸ್ಕಿ

ಪ್ರತಿಷ್ಠಿತ ನೊಬೆಲ್​ ಶಾಂತಿ ಪ್ರಶಸ್ತಿ ಪ್ರಕಟವಾಗಿದ್ದು, ಓರ್ವ ವ್ಯಕ್ತಿ ಹಾಗೂ ಎರಡು ಸಂಘಟನೆಗಳು ಪ್ರಶಸ್ತಿಗೆ ಭಾಜನವಾಗಿದೆ.

nobel-peace-prize-to-human-rights-advocate-ales-bialiatski-from-belarus
ನೊಬೆಲ್​ ಶಾಂತಿ ಪ್ರಶಸ್ತಿ ಪ್ರಕಟ

By

Published : Oct 7, 2022, 2:48 PM IST

Updated : Oct 7, 2022, 4:00 PM IST

ಸ್ಟಾಕ್‌ಹೋಮ್ (ಸ್ವೀಡನ್): 2022ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಬೆಲಾರಸ್‌ನ ಮಾನವ ಹಕ್ಕುಗಳ ವಕೀಲ ಅಲೆಸ್ ಬಿಲಿಯಾಟ್ಸ್ಕಿ ಮತ್ತು ರಷ್ಯಾ ಹಾಗೂ ಉಕ್ರೇನ್​ನ ಸಂಸ್ಥೆಗೆ ನೀಡಲಾಗಿದೆ.

ಅಲೆಸ್ ಬಿಲಿಯಾಟ್ಸ್ಕಿ ಅವರೊಂದಿಗೆ ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಸ್ಮಾರಕ ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆಯು ನೊಬೆಲ್​ ಪ್ರಶಸ್ತಿಗೆ ಪಾತ್ರವಾಗಿದೆ. ಯುದ್ಧಾಪರಾಧಗಳು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಅಧಿಕಾರದ ದುರುಪಯೋಗವನ್ನು ದಾಖಲಿಸುವಲ್ಲಿ ಅತ್ಯುತ್ತಮ ಪ್ರಯತ್ನವನ್ನು ಪ್ರಶಸ್ತಿ ವಿಜೇತರು ಮಾಡುತ್ತಿದ್ದಾರೆ ಎಂದು ನೊಬೆಲ್ ಸಮಿತಿ ತಿಳಿಸಿದೆ.

ಇದನ್ನೂ ಓದಿ:ಫ್ರೆಂಚ್ ಲೇಖಕಿ ಅನ್ನಿ ಎರ್ನಾಕ್ಸ್ ಗೆ ನೊಬೆಲ್ ಸಾಹಿತ್ಯ​ ಪ್ರಶಸ್ತಿ

ಜೊತೆಗೆ ಶಾಂತಿ ಮತ್ತು ಪ್ರಜಾಪ್ರಭುತ್ವಕ್ಕಾಗಿ ನಾಗರಿಕ ಸಮಾಜದ ಮಹತ್ವವನ್ನು ಪ್ರದರ್ಶಿಸುತ್ತಾರೆ. ಅನೇಕ ವರ್ಷಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಟೀಕಿಸುವ ಅಧಿಕಾರ ಮತ್ತು ನಾಗರಿಕರ ಮೂಲ ಹಕ್ಕುಗಳನ್ನು ರಕ್ಷಿಸುವ ಹಕ್ಕನ್ನು ಉತ್ತೇಜಿಸಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿದೆ.

ಇದನ್ನೂ ಓದಿ:ನೊಬೆಲ್ ಪ್ರಶಸ್ತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಕುತೂಹಲಕಾರಿ ಮಾಹಿತಿ

Last Updated : Oct 7, 2022, 4:00 PM IST

ABOUT THE AUTHOR

...view details