ಬೌಲ್ಡರ್ ಸಿಟಿ (ಯುಎಸ್): ದೇಶದ ಅತಿ ದೊಡ್ಡ ಜಲವಿದ್ಯುತ್ ಸ್ಥಾವರಗಳಲ್ಲಿ ಒಂದಾದ ಹೂವರ್ ಅಣೆಕಟ್ಟಿನ ಟ್ರಾನ್ಸ್ಫಾರ್ಮರ್ನಲ್ಲಿ ಮಂಗಳವಾರ ಸ್ಫೋಟ ಉಂಟಾಗಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅರ್ಧ ಗಂಟೆಯ ಬಳಿಕ ನಂದಿಸಲಾಗಿದೆ. ವಿದ್ಯುತ್ ಗ್ರಿಡ್‌ಗೆ ಯಾವುದೇ ಅಪಾಯವಿಲ್ಲ, ವಿದ್ಯುತ್ ಉತ್ಪಾದಿಸಲಾಗುತ್ತಿದೆ ಎಂದು ಲೋವರ್ ಕೊಲೊರಾಡೋ ಪ್ರದೇಶದ ಫೆಡರಲ್ ಬ್ಯೂರೋ ಆಫ್ ರಿಕ್ಲಮೇಶನ್ ಪ್ರಾದೇಶಿಕ ನಿರ್ದೇಶಕ ಜಾಕ್ಲಿನ್ ಎಲ್. ಗೌಲ್ಡ್ ಮಾಹಿತಿ ನೀಡಿದ್ದಾರೆ.