ನ್ಯೂಯಾರ್ಕ್: ದೆಹಲಿಯ ವಾಯು ಗುಣಮಟ್ಟ ಕುಸಿತಗೊಂಡ ವಿಚಾರ ಅನೇಕ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಬಿತ್ತರವಾಗಿದೆ. ಚಳಿಗಾಲಾರಂಭದಲ್ಲಿ ಇಲ್ಲಿನ ಗಾಳಿ ಗುಣಮುಟ್ಟ ಸಂಪೂರ್ಣ ಕುಸಿಯುವುದು ವಿಶೇಷ ಕಾಳಜಿಯ ವಿಚಾರವಾಗಿತ್ತು. ಇದೀಗ ದೆಹಲಿ ವಾಯು ಗುಣಮಟ್ಟದಷ್ಟೇ ಕೆಟ್ಟ ವಾತಾವಾರಣ ಅಮೆರಿಕದ ವ್ಯಾವಹಾರಿಕ ರಾಜಧಾನಿ ನ್ಯೂಯಾರ್ಕ್ನಲ್ಲೂ ದಾಖಲಾಗಿದ್ದು, ಪರಿಸ್ಥಿತಿ ವಿಭಿನ್ನವಾಗಿಲ್ಲ. ವಿಶ್ವದ ಅತ್ಯಂತ ಕಳಪೆ ವಾಯು ಗುಣಮಟ್ಟದಲ್ಲಿ ದೆಹಲಿ ಜೊತೆಗೆ ನ್ಯೂಯಾರ್ಕ್ ಕೂಡ ಸ್ಥಾನ ಪಡೆದಿದೆ. ನ್ಯೂಯಾರ್ಕ್ ಮೇಯರ್ ಎರಿಡ್ ಆ್ಯಂಡ್ ಕೂಡ ಜನರಿಗೆ ಎಚ್ಚರಿಕೆ ನೀಡಿದ್ದು, ಹೊರಾಂಗಣ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ.
ಸಂಪೂರ್ಣ ಹೊಗೆ ಕವಿದ ವಾತಾವರಣ: ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅಂಕಿ ಅಂಶ 218ಕ್ಕೆ ಮುಟ್ಟಿದೆ. ಇದಕ್ಕೆ ಕಾರಣ ಕೆನಡಾದ ಅರಣ್ಯ ಬೆಂಕಿಯ ಹೊಗೆ. ಇದೇ ವೇಳೆ ದೆಹಲಿಯ ಎಕ್ಯೂಐ 190ರ ಆಸುಪಾಸಿನಲ್ಲಿದೆ. ನಗರದ ವಾಯು ಗುಣಮಟ್ಟ ಕುಸಿದು ಸಂಪೂರ್ಣವಾಗಿ ಹೊಗೆಯಿಂದ ಆವರಿಸಿದ್ದು, ಮೋಡ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗಿದೆ. ಭಾರತದ ವಾಯ ಗುಣಮಟ್ಟವನ್ನು ಉಲ್ಲೇಖ ಮಾಡುವ ಮೂಲಕ ನ್ಯೂಯಾರ್ಕ್ ಕೂಡ ಮೊದಲ ಬಾರಿಗೆ ಈ ರೀತಿ ಪರಿಸರಾತ್ಮಕ ಸಮಸ್ಯೆ ಅನುಭವಿಸುತ್ತಿದೆ ನ್ಯೂಯಾರ್ಕ್ ಮಾಧ್ಯಮ ಮತ್ತು ಅಮೆರಿಕ ಸರ್ಕಾರ ಇದೇ ವೇಳೆ ಎಂದಿದ್ದಾರೆ.
ಈ ಕುರಿತು ವರದಿ ಬಿತ್ತರಿಸಿರುವ ನ್ಯೂಯಾರ್ಕ್ ಟೈಮ್ಸ್, ತಮ್ಮ ನಗರದ ಕಳಪೆ ವಾಯು ಗುಣಮಟ್ಟಕ್ಕೆ ದೆಹಲಿಯನ್ನು ಉದಾಹರಣೆಯಾಗಿರಿಸಿ ಮುಖ್ಯಾಂಶಗಳನ್ನು ಬಿತ್ತರಿಸಿದೆ. ಉದಾ: ಗಾಳಿಯು ವಿಷಕ್ಕೆ ತಿರುಗಿದಾಗ ಭಾರತ ಹೇಗಿರುತ್ತದೆ. ನವದೆಹಲಿಯ ಗಾಳಿ ಉಸಿರುಗಟ್ಟುಸುತ್ತಿದೆ ಎಂಬ ರೂಪಕವನ್ನು ಬಳಸಿ ತಮ್ಮ ನಗರದ ವಾಯುಗುಣಟ್ಟದ ಬಗ್ಗೆ ವರದಿ ಮಾಡಿದೆ.