ಲಂಡನ್: ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ನ ಮೊದಲ ಏಷ್ಯನ್ ಮತ್ತು ಹಿಂದೂ ಪ್ರಧಾನಿಯಾಗಿದ್ದಾರೆ. ಎರಡು ವರ್ಷಗಳ ಹಿಂದೆ ಅವರು ಹಣಕಾಸು ಸಚಿವರಾಗಿದ್ದಾಗ 11 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ದೀಪಾವಳಿಯನ್ನು ಆಚರಿಸಿದ್ದರು. ಈ ಬಾರಿಯ ದೀಪಾವಳಿ ಅವರಿಗೆ ಬಹಳ ವಿಶೇಷವಾಗಿತ್ತು.
ದೀಪಾವಳಿ ಹಬ್ಬವನ್ನು ಬ್ರಿಟಿಷ್ ಪ್ರಧಾನಿಯ ಅಧಿಕೃತ ನಿವಾಸವಾದ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ಆಚರಿಸಲಾಯಿತು. ಸುನಕ್ ಇಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಿದರು. ಈ ವೇಳೆ ಮಾತನಾಡಿದ ಅವರು ನಮ್ಮ ಮಕ್ಕಳು ಮತ್ತು ನಮ್ಮ ಮೊಮ್ಮಕ್ಕಳು ತಮ್ಮ ದಿಯಾಗಳನ್ನು ಬೆಳಗಿಸುವ ಮತ್ತು ಭವಿಷ್ಯವನ್ನು ಭರವಸೆಯಿಂದ ನೋಡುವಂತಹ ಬ್ರಿಟನ್ ನಿರ್ಮಿಸಲು ನಾವು ಬದ್ಧವಾಗಿದ್ದೇವೆ ಎಂದು ಸುನಕ್ ಹೇಳಿದ್ದಾರೆ.
ಸುನಕ್ನಿಂದ ದೀಪಾವಳಿ ಉಡುಗೊರೆ: ಲಿಜ್ ಟ್ರಸ್ ನಂತರ 10 ಡೌನಿಂಗ್ ಸ್ಟ್ರೀಟ್ ತಲುಪಿದ ಸುನಕ್ ಬುಧವಾರ ರಾತ್ರಿ ದೀಪಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅದರ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸುನಕ್ ಅವರು, 'ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ದೀಪಾವಳಿ ಆಚರಿಸಲಾಗಿತ್ತು:ಎರಡು ವರ್ಷಗಳ ಹಿಂದೆ ಸುನಕ್ ಸಚಿವರಾಗಿದ್ದಾಗ 11 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ತಮ್ಮ ಅಧಿಕೃತ ನಿವಾಸದ ಬಾಗಿಲಿಗೆ ದೀಪಗಳನ್ನು ಇಡುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿದ್ದರು. ಕೋವಿಡ್ ನಿರ್ಬಂಧಗಳು ಜಾರಿಯಲ್ಲಿದ್ದ ಸಮಯ ಅದು. ದೀಪಾವಳಿಯಂದು ಡೌನಿಂಗ್ ಸ್ಟ್ರೀಟ್‌ನ ಬಾಗಿಲಲ್ಲಿ ದೀಪ ಹಚ್ಚುವ ಅವಕಾಶ ಸಿಕ್ಕಿದ್ದು ನನಗೆ ಹೆಮ್ಮೆಯ ವಿಷಯ ಎಂದು ಸುನಕ್ ಅಂದು ಹೇಳಿದ್ದರು. ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್‌ನ ಮೊದಲ ಏಷ್ಯನ್ ಮತ್ತು ಹಿಂದೂ ಪ್ರಧಾನಿಯಾಗಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಸುನಕ್ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
ನನ್ನ ಧರ್ಮವು ನನಗೆ ಶಕ್ತಿ:ಸುನಕ್ ತಾನು ಹಿಂದೂ ಎಂದು ಹೆಮ್ಮೆಪಡುತ್ತೇನೆ. ಅವರು ಒಮ್ಮೆ ಸಂದರ್ಶನವೊಂದರಲ್ಲಿ ನನ್ನ ಧರ್ಮವು ನನಗೆ ಶಕ್ತಿಯನ್ನು ನೀಡುತ್ತದೆ. ಇದು ನನಗೆ ಜೀವನವನ್ನು ಹೇಗೆ ಸಾಗಿಸಬೇಕು ಎಂಬ ಉದ್ದೇಶವನ್ನು ನೀಡುತ್ತದೆ ಎಂದಿದ್ದರು. 2017ರಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಾಗ ಭಗವದ್ಗೀತೆಯ ಮೇಲೆ ಕೈಯಿಟ್ಟು ಸಂಸದನಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.