ಕರ್ನಾಟಕ

karnataka

ETV Bharat / international

ವೇಗವಾಗಿ ಹರಡುತ್ತಿರುವ ಕೋವಿಡ್​ ಹೊಸ ರೂಪಾಂತರ EG.5.1.. ಏನಿದರ ಗುಣಲಕ್ಷಣ? - ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ

ಕೊರೊನಾ ಹೊಸ ರೂಪಾಂತರ EG.5.1 ಇಂಗ್ಲೆಂಡ್​ನಲ್ಲಿ ತ್ವರಿತವಾಗಿ ಹರಡುತ್ತಿದೆ ಎಂದು ಯುನೈಟೆಡ್​ ಕಿಂಗ್ಡಮ್​​ನ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಮಾಹಿತಿ ನೀಡಿದೆ.

covid

By

Published : Aug 5, 2023, 7:17 AM IST

ಲಂಡನ್( ಇಂಗ್ಲೆಂಡ್​) : ಕೋವಿಡ್​ 19 ಮಹಾಮಾರಿ ಇನ್ನೇನು ಹೋಯಿತು ಎನ್ನುವಷ್ಟರಲ್ಲಿ ಅದರ ಹೊಸ ರೂಪಾಂತರವೊಂದು ಬ್ರಿಟನ್​​ನಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ತಿಂಗಳು ಮೊದಲ ಬಾರಿಗೆ ಇಂಗ್ಲೆಂಡ್​ನಲ್ಲಿ ಪತ್ತೆಯಾದ ಓಮಿಕ್ರಾನ್‌ ರೂಪಾಂತರವೊಂದು ವೇಗವಾಗಿ ಹರಡುತ್ತಿದೆ ಎಂದು ಇಂಗ್ಲೆಂಡ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬ್ರಿಟನ್​ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (ಯುಕೆಎಚ್‌ಎಸ್‌ಎ) ನೀಡಿದ ಮಾಹಿತಿ ಪ್ರಕಾರ, 7 ಹೊಸ ಕೊರೊನಾ ಪ್ರಕರಣಗಳಲ್ಲಿ EG.5.1 ಎಂದು ಅಡ್ಡಹೆಸರಿನಿಂದ ಕರೆಯಲ್ಪಡುವ EG.5.1 ರೂಪಾಂತರದ ಒಂದು ಕೇಸ್​ಗಳು ದೃಢಪಡುತ್ತಿವೆ ಎಂದು ವರದಿಯಾಗಿದೆ.

ಯುಕೆಎಚ್‌ಎಸ್‌ಎ ನೀಡಿದ ಮಾಹಿತಿ ಪ್ರಕಾರ, ಅಂತಾರಾಷ್ಟ್ರೀಯವಾಗಿ ಅದರಲ್ಲೂ ಏಷ್ಯಾದಲ್ಲಿ ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಇದನ್ನು ಜುಲೈ 31 ರಂದು, ಮತ್ತೊಂದು ರೂಪಾಂತರ ಎಂದು ವರ್ಗೀಕರಿಸಲಾಯಿತು. ಜುಲೈ 3, 2023 ರಂದು EG.5.1ಅನ್ನು ಮೊದಲ ಬಾರಿಗೆ ಸಂಕೇತವಾಗಿ ಸಂಗ್ರಹಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇಸ್​ಗಳು ಅಧಿಕವಾಗುತ್ತಿರುವುದರಿಂದ ಮತ್ತು ಹೆಚ್ಚುತ್ತಿರುವ ಜಿನೋಮ್‌ಗಳ ಕಾರಣದಿಂದ ಈ ವಂಶಾವಳಿಯನ್ನು ರೂಪಾಂತರವೆಂದು ಘೋಷಿಸಲಾಗಿದೆ ಎಂದು ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಜನರಿಗೆ ಲಸಿಕೆಗಳು ಲಭ್ಯವಾಗಬೇಕು ಮತ್ತು ಸೋಂಕಿನಿಂದ ರಕ್ಷಿಸಬೇಕೆಂದು ಕರೆ ನೀಡಿದ ಬಳಿಕ, ಈ ಕುರಿತಾದ ಪ್ರಯೋಗ ಪ್ರಾರಂಭಿಸಲಾಯಿತು. ಕೇವಲ ಎರಡು ವಾರಗಳ ಹಿಂದಷ್ಟೇ ಡಬ್ಲ್ಯೂಹೆಚ್​ ಒ EG.5.1 ರೂಪಾಂತರವನ್ನ ಪತ್ತೆಹಚ್ಚಲು ಪ್ರಾರಂಭಿಸಿತ್ತು.

ಇತ್ತೀಚಿಗಿನ ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ದತ್ತಾಂಶವನ್ನು ಗಮನಿಸಿದಾಗ, ದೇಶದಲ್ಲಿನ ಎಲ್ಲ ಕೊರೊನಾ ಪ್ರಕರಣಗಳಲ್ಲಿ ಇವು 14.6 ಪ್ರತಿಶತದಷ್ಟಿದೆ ಎಂದು ಸೂಚಿಸುತ್ತದೆ. ಆದ್ದರಿಂದ ಹೊಸ ರೂಪಾಂತರವು ಹೆಚ್ಚು ಗಂಭೀರವಾಗಿದೆ ಎಂಬ ಸೂಚನೆಗಳಿಲ್ಲ, ಆದರೂ ಕೋವಿಡ್​ 19 ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಲೇ ಇರುವುದಿಂದ ಜಾಗ್ರತೆ ವಹಿಸುವುದು ಅಗತ್ಯವಾಗಿದೆ.

ಇದನ್ನೂ ಓದಿ :Covid-19: ಕೊರೊನಾವೈರಸ್​ ಚೀನಾದ ಜೈವಿಕ ಅಸ್ತ್ರ: ಸ್ಫೋಟಕ ಮಾಹಿತಿ ಬಹಿರಂಗ!

"ನಾವು ಕೋವಿಡ್​ 19 ಪ್ರಕರಣಗಳಲ್ಲಿ ಏರಿಕೆಯನ್ನ ಕಾಣುತ್ತಿದ್ದೇವೆ. ಅದರಲ್ಲೂ ಈ ವಾರದಲ್ಲಿ ಅಧಿಕ ಕೇಸ್​ಗಳು ವರದಿಯಾಗಿವೆ. ವಿಶೇಷವಾಗಿ ವಯಸ್ಸಾದವರು ಆಸ್ಪತ್ರೆಗೆ ದಾಖಲಾಗುತ್ತಿರುವುದು ಸಣ್ಣ ಪ್ರಮಾಣದಲ್ಲಿ ಏರಿಕೆಯಾಗಿದೆ. ಪ್ರಸ್ತುತ ಐಸಿಯು ಗೆ ದಾಖಲಾಗುವವರ ಸಂಖ್ಯೆ ಇಳಿಮುಖವಾಗಿದೆ. ಈ ಕುರಿತು ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಸೋಂಕಿನ ಲಕ್ಷಣಗಳು ಕಂಡು ಬಂದರೆ ಆಗಾಗ ಕೈ ತೊಳೆಯುವುದನ್ನು ಮಾಡುತ್ತಿರಬೇಕು. ಇದರಿಂದಾಗಿ ವೈರಸ್‌ ನಿಮ್ಮ ದೇಹವನ್ನು ಪ್ರವೇಶಿಸುವುದಿಲ್ಲ. ಸ್ಯಾನಿಟೈಸರ್​ ಬಳಕೆ ಮಾಡುವ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಸಹಾಯ. ಉಸಿರಾಟ ಸಂಬಂಧಿ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದರೆ ಸಾಧ್ಯವಾದಷ್ಟು ಬೇರೆಯವರಿಂದ ಅಂತರವನ್ನು ಕಾಪಾಡಿಕೊಳ್ಳಲು ಶಿಫಾರಸು ಮಾಡುತ್ತೇವೆ" ಎಂದು UKHSA ಯ ಮುಖ್ಯಸ್ಥರಾದ ಡಾ ಮೇರಿ ರಾಮ್ಸೆ ಹೇಳಿದ್ದಾರೆ.

ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯು ಫ್ಲೂ (ಜ್ವರ) ಮತ್ತು ಕೊರೊನಾ ಕೇಸ್​ಗಳಿಗೆ ಸಂಬಂಧಿಸಿದ ಕಾರ್ಯ ನಿರ್ವಹಿಸುತ್ತಿದೆ. ಹೊಸ ಉದಯೋನ್ಮುಖ ರೂಪಾಂತರಗಳನ್ನು ಪತ್ತೆ ಹಚ್ಚುತ್ತಿದೆ. (Arcturus XBB.1.16 variant) ಆರ್ಕ್ಟುರಸ್ ಎಕ್ಸ್‌ಬಿಬಿ.1.16 ರೂಪಾಂತರವು ಒಮಿಕ್ರಾನ್‌ನ ವಂಶವಾಗಿದ್ದು, ಇಂಗ್ಲೆಂಡ್​ನಲ್ಲಿ​ ವ್ಯಾಪಕವಾಗಿದೆ.

ABOUT THE AUTHOR

...view details