ಕರ್ನಾಟಕ

karnataka

ETV Bharat / international

ಇಸ್ರೇಲ್​​ನಲ್ಲಿ ಮತ್ತೆ ಹೊಸ ಸರ್ಕಾರ ರಚಿಸಲು ಸನ್ನದ್ಧವಾದ ನೆತನ್ಯಾಹು

ನಿನ್ನೆ ಮಧ್ಯರಾತ್ರಿಯ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಗೆ ದೂರವಾಣಿ ಕರೆ ಮಾಡುವಾಗ ನೆತನ್ಯಾಹು ಈ ಘೋಷಣೆ ಮಾಡಿದ್ದಾರೆ. ಸರ್ಕಾರ ರಚನೆಯ ಎಲ್ಲ ಪ್ರಕ್ರಿಯೆಗಳನ್ನು ಮುಂದಿನ ವಾರದೊಳಗೆ ಪೂರ್ಣಗೊಳಿಸುವುದಾಗಿ ಅವರು ಘೋಷಿಸಿದ್ದಾರೆ

Netanyahu forms new government in Israel
ಇಸ್ರೇಲ್​​ನಲ್ಲಿ ಮತ್ತೆ ಹೊಸ ಸರ್ಕಾರ ರಚಿಸಿದ ನೆತನ್ಯಾಹು

By

Published : Dec 22, 2022, 6:53 AM IST

Updated : Dec 22, 2022, 7:04 AM IST

ಟೆಲ್ ಅವಿವ್​(ಇಸ್ರೇಲ್​):ಇಸ್ರೇಲ್ ಪ್ರಧಾನಿ ಆಗಿ ಮತ್ತೆ ಬೆಂಜಮಿನ್​ ನೆತನ್ಯಾಹು ಆಯ್ಕೆ ಆಗಿದ್ದಾರೆ. 38 ದಿನಗಳ ಮಾತುಕತೆ ಬಳಿಕ ನೆತನ್ಯಾಹು ಸಮ್ಮುಶ್ರ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಎಂದಿಗೂ ಬಲಪಂಥೀಯ ಇಸ್ರೇಲಿ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರಕ್ಕೆ ಮರಳಲು ಖುಷಿಯಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಜನರು ನೀಡಿದ ಬೆಂಬಲಕ್ಕೆ ಧನ್ಯವಾದಗಳು. ಈ ಮೂಲಕ ಇಸ್ರೇಲಿಗಳ ಅಭಿವೃದ್ಧಿಗೆ ಕೆಲಸ ಮಾಡುವ ಸರ್ಕಾರ ರಚನೆ ಮಾಡಲು ಸಾಧ್ಯವಾಗಿದೆ ಎಂದು ನೆತನ್ಯಾಹು ಟ್ವೀಟ್​ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ನಿನ್ನೆ ಮಧ್ಯರಾತ್ರಿಯ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಗೆ ದೂರವಾಣಿ ಕರೆ ಮಾಡುವಾಗ ನೆತನ್ಯಾಹು ಈ ಘೋಷಣೆ ಮಾಡಿದ್ದಾರೆ. ಸರ್ಕಾರ ರಚನೆಯ ಎಲ್ಲ ಪ್ರಕ್ರಿಯೆಗಳನ್ನು ಮುಂದಿನ ವಾರದೊಳಗೆ ಪೂರ್ಣಗೊಳಿಸುವುದಾಗಿ ಅವರು ಘೋಷಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಲಿಕುಡ್ ಪಕ್ಷ ತನ್ನ ಐದು ಪಾಲುದಾರರಲ್ಲಿ ನಾಲ್ವರ ಜೊತೆ ಮಾತುಕತೆ ನಡೆಸಿದೆ. ಮೂರು ಬಲಪಂಥೀಯ ಪಕ್ಷಗಳು ಮತ್ತು ಎರಡು ಯಹೂದಿ ಅಲ್ಟ್ರಾ-ಆರ್ಥೊಡಾಕ್ಸ್ ಪಕ್ಷಗಳೊಂದಿಗೆ ಅಂತಿಮ ಸಮ್ಮಿಶ್ರ ಒಪ್ಪಂದಗಳಿಗೆ ಬಂದಿದೆ ಆದರೆ ಇನ್ನೂ ಅಂತಿಮ ಸಹಿ ಹಾಕಿಲ್ಲ. ಇಸ್ರೇಲಿ ಕಾನೂನಿನ ಪ್ರಕಾರ ಜನವರಿ 2, 2023 ರೊಳಗೆ ಹೊಸ ಸರ್ಕಾರವು ಪ್ರಮಾಣ ವಚನ ಸ್ವೀಕರಿಸಬೇಕಾಗಿದೆ.

ನೆತನ್ಯಾಹು ತಮ್ಮ ಸಮ್ಮಿಶ್ರ ಪಾಲುದಾರರು ನೀಡಿರುವ ಬೆಂಬಲಕ್ಕೆ ಬದಲಾಗಿ ಅವರು ಮುಂದಿಟ್ಟಿರುವ ಬೇಡಿಕೆಗಳನ್ನು ಪೂರೈಸಲು ಕಳೆದ ಕೆಲ ವಾರಗಳಿಂದ ಹೆಣಗಾಡುತ್ತಿದ್ದಾರೆ.

ನವೆಂಬರ್ 1 ರಂದು ನಡೆದ ದೇಶದ ಐದನೇ ಚುನಾವಣೆಯಲ್ಲಿ ನೆತನ್ಯಾಹು ಅವರ ಬಣವು ಇಸ್ರೇಲಿ ಸಂಸತ್ತಿನ 120 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಇದನ್ನು ಓದಿ:ಪಾಕ್​ ಮಾಜಿ ಪಿಎಂ ಇಮ್ರಾನ್​ ಖಾನ್​ ಸೆಕ್ಸ್​ ಟಾಕ್​ ಆಡಿಯೋ ಸೋರಿಕೆ... ಸುಳ್ಳೆಂದ ಪಿಟಿಐ ಪಕ್ಷ

Last Updated : Dec 22, 2022, 7:04 AM IST

ABOUT THE AUTHOR

...view details