ಕೇಪ್ ಕೆನವೆರಲ್: ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತೊಂದು ಹೊಸ ಅಧ್ಯಯನವನ್ನು ಪ್ರಾರಂಭಿಸುವುದಾಗಿ ಗುರುವಾರ ಘೋಷಿಸಿದೆ. ವೈಜ್ಞಾನಿಕ ದೃಷ್ಟಿಕೋನದಿಂದ ಡೇಟಾ ಸಂಗ್ರಹಿಸುವ ಕೆಲಸಕ್ಕೆ ಮುಂದಾಗಿದೆ. ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳನ್ನು ಪರೀಕ್ಷಿಸಲು ಪ್ರಮುಖ ವಿಜ್ಞಾನಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ನಾಸಾದ ವಿಜ್ಞಾನ ಮಿಷನ್ ಮುಖ್ಯಸ್ಥ ಥಾಮಸ್ ಜುರ್ಬುಚೆನ್ , ಯುಎಪಿಗಳು ಅಥವಾ ಗುರುತಿಸಲಾಗದ ವೈಮಾನಿಕ ವಿದ್ಯಮಾನಗಳು ಎಂದು ಕರೆಯಲ್ಪಡುವ ಆಕಾಶದಲ್ಲಿ ಕಂಡು ಬರುವ ನಿಗೂಢ ದೃಶ್ಯಗಳನ್ನು ವಿವರಿಸಲು ಇದು ಮೊದಲ ಹೆಜ್ಜೆ ಎಂದು ನಾಸಾ ಪರಿಗಣಿಸುತ್ತದೆ ಎಂದು ಅವರು ತಿಳಿಸಿದ್ದಾರೆ.