ನೈಪಿಡಾವ್(ಮ್ಯಾನ್ಮಾರ್):ಪಾಕಿಸ್ತಾನದಿಂದ ಮ್ಯಾನ್ಮಾರ್‌ಗೆ ಸರಬರಾಜು ಮಾಡಲಾದ ಬಹುಪಾತ್ರ ಯುದ್ಧ ವಿಮಾನ JF17 ಥಂಡರ್ಗಳು ಅನರ್ಹವೆಂದು ಘೋಷಿಸಲಾಗಿದೆ. ಅಷ್ಟೇ ಅಲ್ಲ, ಈ ಅವ್ಯವಸ್ಥೆಗೆ ಉತ್ತರಿಸಲು ಮಿಲಿಟರಿ ಆಡಳಿತವು ಇಸ್ಲಾಮಾಬಾದ್‌ಗೆ ಕಠಿಣ ಸಂದೇಶ ರವಾನಿಸಿದೆ ಎಂದು ಮ್ಯಾನ್ಮಾರ್‌ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನವು 2019 ಮತ್ತು 2021 ರ ನಡುವೆ ಮ್ಯಾನ್ಮಾರ್‌ಗೆ ಅನೇಕ JF17 ಥಂಡರ್ ಯುದ್ಧ ವಿಮಾನಗಳನ್ನು ಪೂರೈಸಿದೆ. ಆದ್ರೆ ಈ ಎಲ್ಲ ವಿಮಾನಗಳು "ಕಾರ್ಯಾಚರಣೆಗೆ ಅನರ್ಹ" ಎಂದು ಘೋಷಿಸಲಾಗಿದೆ. ವಿತರಿಸಲಾದ ವಿಮಾನಗಳು ಪಾಕಿಸ್ತಾನದ ಏರೋನಾಟಿಕಲ್ ಕಾಂಪ್ಲೆಕ್ಸ್ ಮತ್ತು ಚೀನಾದ ಚೆಂಗ್ಡು ಏರ್‌ಕ್ರಾಫ್ಟ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಜಂಟಿಯಾಗಿ ಉತ್ಪಾದಿಸಲ್ಪಟ್ಟಿವೆ. JF-17 ವಿಮಾನಗಳನ್ನು ಖರೀದಿಸಲು 2016 ರಲ್ಲಿ ಬರ್ಮೀಸ್ ಮಿಲಿಟರಿ ಸಹಿ ಮಾಡಿದ ಒಪ್ಪಂದದ ಭಾಗವಾಗಿದೆ. ಆದರೆ ವಿಮಾನದ ವಿತರಣೆಯ ನಂತರ ಅಸಮರ್ಪಕ ಕಾರ್ಯಗಳು ಮತ್ತು ರಚನಾತ್ಮಕ ದೋಷಗಳು ಪತ್ತೆಯಾದ ಕಾರಣ ಬರ್ಮಾದ ವಾಯುಪಡೆಯು ವಿಮಾನಗಳನ್ನು ಉಪಯೋಗಿಸದಂತೆ ನಿರ್ಧಾರ ಕೈಗೊಂಡಿದೆ.
JF-17 ನ ವೈಫಲ್ಯವು ಇಸ್ಲಾಮಾಬಾದ್ ಮತ್ತು ನೈಪಿಡಾವ್ ನಡುವಿನ ಉದ್ವಿಗ್ನತೆ ಹೆಚ್ಚಾಗುವಂತೆ ತೋರುತ್ತಿದೆ ಮತ್ತು ಹೇಗಾದರೂ ಚೀನಾವನ್ನು ಮಧ್ಯಪ್ರವೇಶಿಸುವಂತೆ ಒತ್ತಾಯಿಸುತ್ತಿದೆ. ನೈಪಿಡಾವ್ಗೆ ಮ್ಯಾನ್ಮಾರ್‌ನ ಚೀನಿ ರಾಯಭಾರಿ ಇತ್ತೀಚೆಗೆ ಭೇಟಿ ನೀಡಿದ್ದು, ಮಾಧ್ಯಮಗಳ ಪ್ರಕಾರ CCP ಯ ಉನ್ನತ ನಾಯಕತ್ವದಿಂದ ಜನರಲ್ ಮಿನ್ ಆಂಗ್ ಹ್ಲೈಂಗ್‌ಗೆ ಸಂದೇಶವನ್ನು ರವಾನಿಸಲಾಗಿದೆ ಎಂದು ಹೇಳಲಾಗುತ್ತದೆ.