ವಾಷಿಂಗ್ಟನ್(ಅಮೆರಿಕ):ಐದು ಬಾರಿಯ ಗ್ರ್ಯಾಮಿ ಪ್ರಶಸ್ತಿ ವಿಜೇತ ಜನಪ್ರಿಯ ಗಾಯಕಿ ನವೋಮಿ ಜುಡ್ ಶನಿವಾರ ನಿಧನರಾದರು. ಈ ವಿಚಾರವನ್ನು ಪುತ್ರಿ ಆಶ್ಲೇ ಜುಡ್ ಖಚಿತಪಡಿಸಿದ್ದಾರೆ. 'ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಾಯಿ ನಿಧನರಾಗಿದ್ದಾರೆ. ಅವರ ಸಾವು ನಮಗೆ ತೀವ್ರ ನೋವುಂಟು ಮಾಡಿದೆ' ಎಂದು ಟ್ವೀಟ್ ಮಾಡಿದ್ದಾರೆ.
5 ಬಾರಿಯ ಗ್ರ್ಯಾಮಿ ವಿಜೇತ ಶ್ರೇಷ್ಠ ಗಾಯಕಿ ನವೋಮಿ ಜುಡ್ ವಿಧಿವಶ - ಗ್ರ್ಯಾಮಿ ಪ್ರಶಸ್ತಿ ವಿಜೇತ ಶ್ರೇಷ್ಠ ಗಾಯಕಿ ನವೋಮಿ ಜುಡ್
ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಗಾಯಕಿ ನವೋಮಿ ಜುಡ್ ತಮ್ಮ 76 ನೇ ವಯಸ್ಸಿನಲ್ಲಿ ಮೃತಪಟ್ಟರು.
![5 ಬಾರಿಯ ಗ್ರ್ಯಾಮಿ ವಿಜೇತ ಶ್ರೇಷ್ಠ ಗಾಯಕಿ ನವೋಮಿ ಜುಡ್ ವಿಧಿವಶ Naomi Judd](https://etvbharatimages.akamaized.net/etvbharat/prod-images/768-512-15162631-thumbnail-3x2-news.jpg)
ನವೋಮಿ ಮತ್ತು ಮಗಳು 1980ರ ದಶಕದ ಆರಂಭದಲ್ಲಿ ವೃತ್ತಿಪರರಾಗಿ ಒಟ್ಟಿಗೆ ಹಾಡಲು ಪ್ರಾರಂಭಿಸಿದ್ದರು. ಅಂತಿಮವಾಗಿ "ಮಾಮಾ ಹಿಸ್ ಕ್ರೇಜಿ" ಮತ್ತು "ಲವ್ ಕ್ಯಾನ್ ಬಿಲ್ಡ್ ಎ ಬ್ರಿಡ್ಜ್" ಸೇರಿದಂತೆ ಪ್ರಮುಖ ಹಿಟ್ ಸರಣಿಯನ್ನು ನಿರ್ಮಿಸಿ 20 ಮಿಲಿಯನ್‌ಗಿಂತಲೂ ಹೆಚ್ಚು ರೆಕಾರ್ಡ್‌ಗಳನ್ನು ಮಾರಾಟ ಮಾಡಿದರು. 1984ರಲ್ಲಿ ನವೋಮಿ ಮೊದಲ ಗ್ರ್ಯಾಮಿ ಪ್ರಶಸ್ತಿ ಗೆದ್ದುಕೊಂಡರು. ಬಳಿಕ ಏಳು ವರ್ಷಗಳ ಅವಧಿಯಲ್ಲಿ, ಕಂಟ್ರಿ ಮ್ಯೂಸಿಕ್ ಹಾಲ್ ಆಫ್ ಫೇಮ್ ಪ್ರಕಾರ, ಅವರು ಐದು ಬಾರಿ ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದಿದ್ದರು.
ಇದನ್ನೂ ಓದಿ:ಗ್ರ್ಯಾಮಿ ಅವಾರ್ಡ್- 2021: 'ನೋ ಟೈಮ್ ಟು ಡೈ' ಸಾಂಗ್ಗಾಗಿ ಗಾಯಕಿ ಬಿಲ್ಲಿ ಎಲಿಶ್ಗೆ ಗ್ರ್ಯಾಮಿ ಪ್ರಶಸ್ತಿ