ಸುಡಾನ್: ಸುಡಾನ್‌ನ ಪಶ್ಚಿಮ ಡಾರ್ಫರ್ನ ಅರ್ದಮಾಟಾದಲ್ಲಿ ಸಶಸ್ತ್ರ ದಂಗೆಯಿಂದಾಗಿ ಕಳೆದ ಆರು ತಿಂಗಳಲ್ಲಿ 800ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 4.8 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ ಕಚೇರಿ ಮಾಹಿತಿ ನೀಡಿದೆ.
"ಸುಡಾನ್‌ನ ಡಾರ್ಫರ್ ಪ್ರದೇಶದಾದ್ಯಂತ ಹೆಚ್ಚುತ್ತಿರುವ ಹಿಂಸಾಚಾರವು ಎರಡು ದಶಕಗಳ ಹಿಂದೆ ಮಾಡಿದ ದುಷ್ಕೃತ್ಯಗಳು ಪುನರಾವರ್ತನೆಯಾಗಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ. ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗೆ ಅರ್ದಮಾಟಾ ಶಿಬಿರವನ್ನು ತೆರೆಯಲಾಗಿತ್ತು. ಸುಮಾರು 100 ಶೆಲ್ಟರ್‌ಗಳನ್ನು ನೆಲಸಮಗೊಳಿಸಲಾಗಿದ್ದು, ಯುಎನ್‌ಎಚ್‌ಸಿಆರ್ ಪರಿಹಾರ ವಸ್ತುಗಳು ಸೇರಿದಂತೆ ವ್ಯಾಪಕ ಲೂಟಿ ಕೂಡ ನಡೆದಿದೆ" ಅಂತ ವಿಶ್ವಸಂಸ್ಥೆಯು ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದೆ.
ಈ ಮಧ್ಯೆ, ಎರಡು ದಶಕಗಳ ಹಿಂದೆ ಡಾರ್ಫೂರ್‌ನಾದ್ಯಂತ ಸಾವಿರಾರು ಜನರು ಕೊಲ್ಲಲ್ಪಟ್ಟರು ಮತ್ತು ಜಂಜಾವೀಡ್ ಎಂದು ಕರೆಯಲ್ಪಡುವ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸುಡಾನ್ ಸರ್ಕಾರಿ ಪಡೆಗಳು ಹಾಗೂ ಪದಚ್ಯುತಗೊಂಡ ಅಧ್ಯಕ್ಷ ಒಮರ್ ಅಲ್-ಬಶೀರ್ ಅವರ ನಿರಂಕುಶ ಆಡಳಿತವನ್ನು ವಿರೋಧಿಸುವ ಬಂಡಾಯ ಗುಂಪುಗಳು 2019ರಲ್ಲಿ ಸ್ಥಳಾಂತರಗೊಂಡವು. ಈ ವೇಳೆ ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ ಎಂದು ತಿಳಿಸಿದೆ.