ಕರ್ನಾಟಕ

karnataka

ETV Bharat / international

ಶೀತಗಾಳಿಯ ಅಬ್ಬರ..2200ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು - ಅಮೆರಿಕದಲ್ಲಿ ಭಾರಿ ಹಿಮಪಾತ ಹಾಗೂ ತಾಪಮಾನ ಕುಸಿತ

ಫ್ಲೈಟ್ ಟ್ರ್ಯಾಕಿಂಗ್ ಸೈಟ್ ಫ್ಲೈಟ್‌ಅವೇರ್ ಪ್ರಕಾರ, 2,270 ಅಮೆರಿಕದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ ಮತ್ತು ಶುಕ್ರವಾರ ಸುಮಾರು 1,000 ವಿಮಾನಗಳನ್ನು ಪೂರ್ವಭಾವಿಯಾಗಿ ರದ್ದುಗೊಳಿಸಿದೆ.

More than 2000 flights cancelled in US due to heavy snow
ಶೀತಗಾಳಿಯ ಅಬ್ಬರ..2200ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

By

Published : Dec 23, 2022, 7:11 AM IST

ವಾಷಿಂಗ್ಟನ್ (ಅಮೆರಿಕ):ಅಮೆರಿಕದಲ್ಲಿ ಭಾರಿ ಹಿಮಪಾತ ಹಾಗೂ ತಾಪಮಾನ ಕುಸಿತವಾಗಿದೆ. ಪರಿಣಾಮ ಜನ, ಜಾನುವಾರುಗಳು ಹಾಗೂ ವ್ಯಾಪಾರ - ವಹಿವಾಟು ಮತ್ತು ಪ್ರಯಾಣಕ್ಕೆ ತೀವ್ರ ತೊಂದರೆ ಆಗಿದೆ.

ಇನ್ನೊಂದರೆ ಭಾರಿ ಹಿಮಪಾತ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ 2,270 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಅಲ್ಲಿನ ಪ್ರಮುಖ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಹಿಮ, ಮಳೆ, ಮಂಜುಗಡ್ಡೆ, ಗಾಳಿ ಮತ್ತು ಶೀತಗಾಳಿ ಅಮೆರಿಕದಲ್ಲಿ ಭಾರಿ ವ್ಯತಿರಿಕ್ತ ಪರಿಣಾಮ ಬೀರಿದ್ದು, ಬಸ್​, ರೈಲುಗಳು ಹಾಗೂ ವಿಮಾನ ಪ್ರಯಾಣದಲ್ಲಿ ತೊಂದರೆ ಆಗಿದೆ.

ಫ್ಲೈಟ್ ಟ್ರ್ಯಾಕಿಂಗ್ ಸೈಟ್ ಫ್ಲೈಟ್‌ಅವೇರ್ ಪ್ರಕಾರ, 2,270 ಅಮೆರಿಕದ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ ಮತ್ತು ಶುಕ್ರವಾರ ಸುಮಾರು 1,000 ವಿಮಾನಗಳನ್ನು ಪೂರ್ವಭಾವಿಯಾಗಿ ರದ್ದುಗೊಳಿಸಿದೆ.

ಶನಿವಾರದವರೆಗೆ ಎಂಬತ್ತೈದು ವಿಮಾನಗಳನ್ನು ಈಗಾಗಲೇ ರದ್ದುಗೊಳಿಸಿ ಆದೇಶಿಸಲಾಗಿದೆ. ಗುರುವಾರ ಸಂಜೆ 7 ಗಂಟೆವರೆಗೆ 7,400 ಕ್ಕಿಂತ ಹೆಚ್ಚು ವಿಮಾನಗಳ ಹಾರಾಟ ಬಂದ್​ ಆಗಿದೆ ಅಲ್ಲಿನ ಸಿಎನ್​ಎನ್​ ವರದಿ ಮಾಡಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಸಶಸ್ತ್ರ ಪಡೆಗಳ ಯುದ್ಧ ಸಾಮರ್ಥ್ಯ ಹೆಚ್ಚಿಸುವತ್ತ ರಷ್ಯಾ ಚಿತ್ತ: ಪುಟಿನ್​

ABOUT THE AUTHOR

...view details