ಬರ್ಲಿನ್(ಜರ್ಮನಿ):ಜರ್ಮನಿಯ ಬರ್ಲಿನ್ನಲ್ಲಿ ನಡೆದ ಅನಿವಾಸಿ ಭಾರತೀಯರ ಕಾರ್ಯಕ್ರವೊಂದರಲ್ಲಿ 'ಮೋದಿ ಓನ್ಸ್ ಮೋರ್' ಎಂಬ ಘೋಷಣೆ ಕೇಳಿ ಬಂದಿದೆ. ಈ ಮೂಲಕ 2024ರ ಲೋಕಸಭೆ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಆಸೆಯನ್ನ ಅಲ್ಲಿನ ಭಾರತೀಯರು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮೋದಿ.. ಮೋದಿ, ಭಾರತ್ ಮಾತಾ ಕೀ ಜೈ, ಮೋದಿ ಹೈ ತೋ ಮುಮ್ಕಿನ್ ಹೈ, ಮೋದಿ ಒನ್ಸ್ ಮೋರ್ ಎಂಬೆಲ್ಲ ಘೋಷವಾಕ್ಯಗಳು ಕೇಳಿ ಬಂದವು.
ಭಾರತೀಯ ಸಮುದಾಯದ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಲು ನಮೋ ಆಗಮಿಸುತ್ತಿದ್ದಂತೆ ಮೋದಿ ಒನ್ಸ್ ಮೋರ್ ಎಂಬ ಘೊಷಣೆ ಕೇಳಿ ಬಂದಿದೆ. ಈ ವೇಳೆ, ಭಾರತದ ತ್ರಿವರ್ಣ ಧ್ವಜ ಸಹ ಹಾರಿಸಲಾಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಜರ್ಮನಿಯಲ್ಲಿ ಭಾರತೀಯರನ್ನ ಭೇಟಿಯಾಗುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನನ್ನೊಂದಿಗೆ ಭೇಟಿಯಾಗಲು ವಿವಿಧ ನಗರಗಳಿಂದ ನೀವೂ ಇಲ್ಲಿಗೆ ಆಗಮಿಸಿದ್ದು, ನನಗೆ ಸಂತೋಷವಾಗಿದೆ ಎಂದರು.
ಇದನ್ನೂ ಓದಿ:ಮಗುವಿನೊಂದಿಗೆ ಮಗುವಾದ ನಮೋ.. ಜರ್ಮನಿಯಲ್ಲಿ ಪುಟಾಣಿ ಜೊತೆ ತುಂಟಾಟ!
ಬರ್ಲಿನ್ನ ಪಾಟ್ಸ್ಡ್ಯಾಮರ್ ಪ್ಲಾಟ್ಜ್ನಲ್ಲಿರುವ ಥಿಯೇಟರ್ನಲ್ಲಿ ನಮೋ ಭಾರತೀಯರನ್ನುದ್ದೇಶಿಸಿ ಮಾತನಾಡಿದ್ದರು. ಕಾರ್ಯಕ್ರಮ ಆಯೋಜನೆಗೊಂಡಿದ್ದ ಸ್ಥಳಕ್ಕೆ ನಮೋ ಆಗಮಿಸುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.