ಹೈದರಾಬಾದ್: ಭವಿಷ್ಯದಲ್ಲಿ ಎದುರಾಗುವ ಭೀಕರ ಸಮಸ್ಯೆಗಳಲ್ಲಿ ನೀರಿನ ಅಭಾವ ಒಂದಾಗಿರಲಿದೆ. ಈ ಕುರಿತು ಇನ್ನೂ ಕೂಡ ನಿರ್ಲಕ್ಷ್ಯವಹಿಸಿದರೆ, ಹಸಿರು ಭೂಮಿಗಳು ಮರುಭೂಮಿಗಳಾಗುತ್ತದೆ. ಆದರೆ, ಇಂತಹ ಸಮಸ್ಯೆಗಳ ವಿರುದ್ಧ ಹೋರಾಡುವವರು ಯಾರು? ನೀರಿನ ಪ್ರಾಮುಖ್ಯತೆ ಕುರಿತು ಜನರ ಗಮನ ಸೆಳೆಯುವವರು ಯಾರು ಎಂಬ ಪ್ರಶ್ನೆಗಳು ಮೂಡುತ್ತದೆ. ಇಂತಹ ಕಾರ್ಯಗಳು ಜನರ ಮಧ್ಯೆ ಸದ್ದಿಲ್ಲದೇ, ಕೆಲವೊಬ್ಬರು ನಡೆಸುತ್ತಿದ್ದಾರೆ.
ಇದರಲ್ಲಿ ಮಿನಗುಲಿ ಎಂಬ ಮಹಿಳೆ ಕೂಡ ಎಲ್ಲರ ಗಮನ ಸೆಳೆದಿದ್ದಾರೆ. ಇವರು ಇದೇ ಗುರಿಯೊಂದಿಗೆ ಜಗತ್ತಿನಾದ್ಯಂತ ಅರಿವು ಮೂಡಿಸಲು ಮುಂದಾಗಿದ್ದು, 200 ಮ್ಯಾರಾಥಾನ್ ಮೂಲಕ ಗಮನ ಸಳೆದಿದ್ದಾರೆ. ಅರಣ್ಯ ಉಳಿವಿಗಾಗಿ ಧ್ವನಿ ಎತ್ತುವ ನಾವು ಯಾಕೆ ನೀರಿನ ಬಗ್ಗೆ ಮಾತನಾಡುವುದಿಲ್ಲ ಎಂಬುದು ಮಿನಗುಲಿ ಅವರ ಪ್ರಶ್ನೆ. ಹವಾಮಾನ ಬದಲಾವಣೆಯಿಂದ ಬಿಸಿಲಿನ ಪ್ರಕರತೆ ಹೆಚ್ಚುತ್ತಿದ್ದು, ಎಲ್ಲ ನೀರು ಆವಿಯಾಗುತ್ತಿದೆ.
ನೀರು ಇಲ್ಲದಿದ್ದರೆ, ಅರಣ್ಯಗಳೂ ಇಲ್ಲದಾಗುತ್ತವೆ. ಭವಿಷ್ಯದಲ್ಲಿ ಜನರು ಹಸಿವೆ, ಬಾಯಾರಿಕೆಯಿಂದ ಬಳಲಬೇಕಾಗುತ್ತದೆ. ನೀರಿನ ರಕ್ಷಣೆ ಮಾಡುವುದು ಜನರ ಜವಾಬ್ದಾರಿಯಾಗಿದೆ. ಇದೆ ಕಾರಣಕ್ಕೆ ಮರುಭೂಮಿ ಮತ್ತು ನೀರಿನ ಅಭಾವ ಇರುವ ಪ್ರಪಂಚ ಪ್ರದೇಶಗಳನ್ನು ಗುರಿಯಾಗಿಸಲಾಗುತ್ತದೆ. ಪ್ರತಿಯೊಬ್ಬರು ಈ ಬಗ್ಗೆ ಗಮನ ಹರಿಸುತ್ತಾರೆ ಎಂಬ ಭರವಸೆ ಇದೆ ಎನ್ನುತ್ತಾರೆ ಮಿನಗುಲಿ.
ಸಾಮಾಜಿಕ ಕಳೆಕಳೆಯ ಈ ಮಹಿಳೆಯ ಹಿನ್ನೆಲೆ ಏನು?:ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ವಕೀಲೆಯಾಗಿ ವೃತ್ತಿ ಆರಂಭಿಸಿದ ಇವರು, ಥಸ್ಟ್ ಎಂಬ ಸಂಘಟನೆ ಶುರುಮಾಡಿದರು. ಇದರ ಗುರು ಶುದ್ದ ನೀರನ್ನು ಕಾಪಾಡುವುದು. ನೀರಿನ ಅಭಾವ ಎದುರಿಸುತ್ತಿರುವ 17 ದೇಶಗಳಲ್ಲಿ ಮ್ಯಾರಾಥಾನ್ ನಡೆಸುವ ಮೂಲಕ ನೀರಿನ ಸಂರಕ್ಷಣೆಯ ಮಹತ್ವ ಸಾರಿದ್ದಾರೆ.
ಇದುವರೆಗೆ 17 ದೇಶಗಳಾಗಿವೆ. ಇನ್ನು 40 ದೇಶಗಳು ನೀರಿನ ಅಭಾವದಿಂದ ನಲುಗುತ್ತಿದ್ದು, ಮರುಭೂಮಿಯಾಗಲು ಸಿದ್ದವಾಗಿದೆ. ಕೆಲವು ದೆಶದಲ್ಲಿ ಜನರಿಗೆ ಶುದ್ಧ ನೀರು ಪೂರೈಕೆಗೆ ಟ್ಯಾಪ್ ಮತ್ತು ಪೈಪ್ಲೈನ್ ಅಳವಡಿಸಿಲ್ಲ. ಪರಿಣಾಮವಾಗಿ, ಅಲ್ಲಿನ ಐದು ವರ್ಷದ 800 ಮಕ್ಕಳು ನಿತ್ಯ ಡೈರಿಯಾದಂತಹ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ನಮ್ಮ ಬಹುತೇಕ ನೀರುಗಳನ್ನು ಕಾರ್ಪೋರೇಟ್ ಕಂಪನಿಗಳು ಅವರ ಅವಶ್ಯಕತೆಗೆ ಬಳಕೆ ಮಾಡುತ್ತಿದ್ದಾರೆ. ಇದರ ಪರಿಹಾರ ಕೂಡ ಅಲ್ಲಿಂದಲೇ ಬರಬೇಕಿದೆ ಎನ್ನುತ್ತಾರೆ ಮಿನಗುಲಿ.
155 ದೇಶಗಳಲ್ಲಿ ಮ್ಯಾರಾಥಾನ್ ಮುಗಿಸಿದ ಮಿನಗುಲಿ:ಇಲ್ಲಿಯವರೆಗೆ ಇವರು, ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಏಷ್ಯಾದಲ್ಲಿ 155 ಮ್ಯಾರಾಥಾನ್ ಮುಗಿಸಿದ್ದಾರೆ. ಅಮೆರಿಕದಲ್ಲಿ ಈ ವರ್ಷ ಆರಂಭವಾಗಲಿರುವ ವರ್ಲ್ಡ್ ವಾಟರ್ ಕಾನ್ಫರೆನ್ಸ್ಗೆ ಮುನ್ನ ಎಷ್ಟು ಸಾಧ್ಯವೋ ಅಷ್ಟು ಮ್ಯಾರಾಥಾನ್ ನಡೆಸಿ, ಅಲ್ಟ್ರಾಮ್ಯಾರಾಥಾನ್ ರನ್ನರ್ ಆಗಬೇಕು ಎಂಬುದು ಇವರ ಹೆಗ್ಗುರಿ ಆಗಿದೆ.
ಇಲ್ಲಿಯವರೆಗೆ ನಾನು 8 ಸಾವಿರ ಕಿ. ಮೀ ಓಡಿದ್ದೇನೆ. ಜೊತೆಗೆ ನಾನು ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದೇನೆ. ನಾನು ಚಿಕ್ಕವಳಾಗಿದ್ದಾಗ, ಶಾಲೆಯಲ್ಲಿ ಯಾರು ಕೂಡ ಅವರ ಗುಂಪಿನಲ್ಲಿ ನನ್ನನ್ನು ಸೇರಿಸುತ್ತಿರಲಿಲ್ಲ. ನಾನು ತುಂಬಾ ದುರ್ಬಲವಾಗಿದ್ದೇನೆ. ಮ್ಯಾರಾಥಾನ್ ಮಧ್ಯದಲ್ಲಿ ಸ್ನಾಯುಗಳು ನೋವು ಕಾಡುತ್ತಿತ್ತು. ಇದರಿಂದ ನಾನು ಅನಾರೋಗ್ಯಕ್ಕೆ ಒಳಗಾದ ಇದು ನನನ್ನು ನಿಲ್ಲಿಸಲಿಲ್ಲ.
ನೀರು ಒಂದೇ ನನ್ನನ್ನು ಓಡುವಂತೆ ಪ್ರೇರೇಪಿಸಿತು. ನನ್ನ ಗುರಿ ಸಾಧ್ಯವಾದಷ್ಟು ಮ್ಯಾರಾಥಾನ್ ನಡೆಸುವುದು. ನೀವೂ ಈ ಬ್ಲೂ ರನ್ ಚಾಲೆಂಜ್ ನಲ್ಲಿ ಭಾಗವಹಿಸಬಹುದು. ನಾವು ಒಟ್ಟಾಗಿ ಸೇರಿ ನೀರನ್ನು ಉಳಿಸಬಹುದು ಎನ್ನುತ್ತಾರೆ ಮಿನಗುಲಿ.
ಇದನ್ನೂ ಓದಿ:ಸ್ಪೂರ್ತಿದಾಯಕ ಕಥೆ: ಅಂದು ಮಧ್ಯಮ ವರ್ಗದ ಯುವತಿ..ಇಂದು ₹ 30 ಕೋಟಿ ವಹಿವಾಟು ಕಂಪನಿ ಒಡತಿ!