ಸೊಮಾಲಿಯಾ:ಸೊಮಾಲಿಯಾದಲ್ಲಿ ಕ್ರೂರ ಕೃತ್ಯವೊಂದು ನಡೆದಿದೆ. ಅಲ್ ಖೈದಾ ಬೆಂಬಲಿತ ಅಲ್ ಶಬಾಬ್ ದಾಳಿಕೋರರು ಮೊಗಾದಿಶುವಿನಲ್ಲಿನ ಹೋಟೆಲ್ ಮೇಲೆ ಕಾರ್ ಬಾಂಬ್ ಸ್ಫೋಟಿಸಿ, ಬಳಿಕ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ 8 ಮಂದಿ ಹತರಾದರೆ, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಸಾವು ನೋವುಗಳು ಸಂಭವಿಸುವ ಸಾಧ್ಯತೆ ಇದೆ.
ಮೊಗಾದಿಶುವಿನ ಹಯಾತ್ ಹೋಟೆಲ್ ಮೇಲೆ ದಾಳಿ ನಡೆಸಿದ ಉಗ್ರರು ಎರಡು ಕಾರುಗಳಲ್ಲಿ ಬಾಂಬ್ ಇರಿಸಿ ಸ್ಫೋಟಿಸಿದ್ದಾರೆ. ಸ್ಫೋಟದ ತೀವ್ರತೆ ಅಧಿಕವಾಗಿತ್ತು ಎಂದು ಹೇಳಲಾಗಿದೆ. ಹೋಟೆಲ್ನಲ್ಲಿ ಜನರು ಹೆಚ್ಚಿದ್ದ ವೇಳೆ ಈ ದಾಳಿ ನಡೆದಿದೆ. ಘಟನೆಯಲ್ಲಿ 8 ಮಂದಿ ಸ್ಥಳದಲ್ಲೇ ಬಲಿಯಾಗಿದ್ದಾರೆ.