ಕರ್ನಾಟಕ

karnataka

ಮೆಕ್ಸಿಕೋದಲ್ಲಿ ಭೀಕರ ದಾಳಿ.. ಗುಂಡೇಟಿಗೆ ಮೇಯರ್​, ಪೊಲೀಸ್​ ಅಧಿಕಾರಿಗಳು ಸೇರಿ 18 ಮಂದಿ ಸಾವು

ಮೆಕ್ಸಿಕೋದಲ್ಲಿ ಅಪರಿಚಿತ ವ್ಯಕ್ತಿಯ ಗುಂಡಿನ ಮೊರೆತಕ್ಕೆ 18 ಮಂದಿ ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಕೋರ ಯಾವುದೋ ಸಂಘಟನೆಗೆ ಸೇರಿದ್ದಾಗಿ ತಿಳಿದುಬಂದಿದೆ.

By

Published : Oct 6, 2022, 9:05 AM IST

Published : Oct 6, 2022, 9:05 AM IST

mexico-firing
ಮೆಕ್ಸಿಕೋದಲ್ಲಿ ಭೀಕರ ದಾಳಿ

ಮೆಕ್ಸಿಕೋ:ಅಮೆರಿಕದಲ್ಲಿ ನಡೆಯುವ ಗುಂಡಿನ ದಾಳಿ ಪ್ರಕರಣಗಳು ಈಗ ನೆರೆಯ ರಾಷ್ಟ್ರಗಳಿಗೂ ಹಬ್ಬಿದೆ. ಕೆನಡಾದಲ್ಲಿ ಇತ್ತೀಚೆಗಷ್ಟೇ ಫೈರಿಂಗ್​ ನಡೆದಿತ್ತು. ಈಗ ಮೆಕ್ಸಿಕೋಗೂ ಅದು ಕಾಲಿಟ್ಟಿದ್ದು, ಮೇಯರ್​, ಪೊಲೀಸ್​ ಅಧಿಕಾರಿಗಳು ಸೇರಿದಂತೆ 18 ಮಂದಿ ದಾರುಣವಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಮೆಕ್ಸಿಕೋದ ಮೆಕ್ಸಿಕನ್ ಸಿಟಿ ಹಾಲ್‌ನಲ್ಲಿ ಗುರುವಾರ ಬೆಳಗ್ಗೆ ಕಾರ್ಯಕ್ರಮವೊಂದು ಆಯೋಜಿಸಲಾಗಿತ್ತು. ಈ ವೇಳೆ ಅಪರಿಚಿತ ದಾಳಿಕೋರ ಇಲ್ಲಿಗೆ ಆಗಮಿಸಿ ಏಕಾಏಕಿ ಬಂದೂಕಿನಿಂದ ಗುಂಡಿನ ಮಳೆಗರೆದಿದ್ದಾರೆ.

ಈ ಭೀಕರ ಗುಂಡಿನ ದಾಳಿಯಲ್ಲಿ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರಲ್ಲಿ ಮೇಯರ್, ಅವರ ತಂದೆ ಮತ್ತು ಅನೇಕ ಪೊಲೀಸ್‌ ಅಧಿಕಾರಿಗಳು ಇದ್ದಾರೆ. ತೀವ್ರ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ 8 ಮಂದಿ ಅಸುನೀಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಸಂಘಟನೆಯ ಕೃತ್ಯ:ಈ ಗುಂಡಿನ ದಾಳಿಯ ಹೊಣೆಯನ್ನು ಸಂಘಟನೆಯೊಂದು ಹೊತ್ತುಕೊಂಡಿದೆ. ಆದರೆ, ಯಾಕೆ ಈ ದಾಳಿ ನಡೆಸಿದೆ ಎಂಬ ಬಗ್ಗೆ ಸುಳಿವು ನೀಡಿಲ್ಲ. ದಾಳಿ ಮಾಡುತ್ತಿರುವ ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಚಿತ್ರದಲ್ಲಿ ಇರುವಂತೆ ದಾಳಿಕೋರ ಮೊದಲು ಗೋಡೆಯ ಮೇಲೆ ಸುಮಾರು 30- 35 ಸುತ್ತು ಗುಂಡು ಹಾರಿಸಿದ್ದಾನೆ. ಬಳಿಕ ಜನರ ಮೇಲೆ ದಾಳಿ ಮಾಡಿದ್ದಾನೆ. ಇನ್ನೊಂದು ವಿಡಿಯೋದಲ್ಲಿ ದುಷ್ಕರ್ಮಿಯನ್ನು ಪೊಲೀಸರು ಬಂಧಿಸುತ್ತಿರುವುದು ಕಾಣಬಹುದು.

ಸಾಮೂಹಿಕ ಗುಂಡಿನ ದಾಳಿಯ ಘಟನೆಗಳಿಂದ ಅಮೆರಿಕ ಹೆಚ್ಚು ತೊಂದರೆಗೊಳಗಾಗಿದೆ. ಇಲ್ಲಿ ಹಲವು ಬಾರಿ ದಾಳಿಗಳು ನಡೆದು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕಾಗಿ ಸರ್ಕಾರ ಬಂದೂಕು ಪರವಾನಗಿಯನ್ನೇ ರದ್ದು ಮಾಡಿದೆ. ಸಾರ್ವಜನಿಕರು ಬಂದೂಕು ಹೊಂದುವಂತಿಲ್ಲ ಎಂಬ ಕಾನೂನು ತಂದಿದೆ. ಇದಕ್ಕೆ ಅಧ್ಯಕ್ಷ ಜೋ ಬಿಡೆನ್​ ಅಂಕಿತ ಹಾಕಿದ್ದಾರೆ.

ಓದಿ:ಭಾರತ ಮೂಲದ ಕಾಫ್​ ಸಿರಪ್​ ಕುಡಿದು ಆಫ್ರಿಕಾದ 66 ಮಕ್ಕಳು ಸಾವು: ತನಿಖೆಗೆ WHO ಸೂಚನೆ

ABOUT THE AUTHOR

...view details