ಕರ್ನಾಟಕ

karnataka

ETV Bharat / international

ಹಿಜ್ಬುಲ್ಲಾ-ಹಮಾಸ್-ಜಿಹಾದ್ ನಾಯಕರ ಸಭೆ; ಇಸ್ರೇಲ್ ವಿರುದ್ಧ ಮುಂದಿನ ಕ್ರಮದ ಚರ್ಚೆ - ಹಿಜ್ಬುಲ್ಲಾ ಗುಂಪಿನ ನಾಯಕ ಹಸನ್ ನಸ್ರಲ್ಲಾ

ಇಸ್ರೇಲ್ ವಿರುದ್ಧ ಸಂಚು ರೂಪಿಸುತ್ತಿರುವ ಮೂರು ಪ್ರಮುಖ ಉಗ್ರಗಾಮಿ ಸಂಘಟನೆಗಳ ನಾಯಕರು ಬೈರುತ್​ನಲ್ಲಿ ಒಟ್ಟಾಗಿ ಸಭೆ ನಡೆಸಿದ್ದಾರೆ.

Meeting of Hezbollah Hamas Islamic Jihad leaders Discussion on the next steps
Meeting of Hezbollah Hamas Islamic Jihad leaders Discussion on the next steps

By ETV Bharat Karnataka Team

Published : Oct 25, 2023, 3:38 PM IST

Updated : Oct 25, 2023, 6:09 PM IST

ಬೈರುತ್ (ಲೆಬನಾನ್):ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವ ಮಧ್ಯೆ ಹಿಜ್ಬುಲ್ಲಾ ಗುಂಪಿನ ನಾಯಕ ಬುಧವಾರ ಹಿರಿಯ ಹಮಾಸ್ ಮತ್ತು ಪ್ಯಾಲೆಸ್ಟೈನ್ ನಾಯಕರೊಂದಿಗೆ ಮಾತುಕತೆ ನಡೆಸಿದರು. ಇಸ್ರೇಲ್ ವಿರೋಧಿ ಮೂರು ಉಗ್ರಗಾಮಿ ಗುಂಪಿನ ನಾಯಕರ ಮಾತುಕತೆ ಪ್ರಾಮುಖ್ಯತೆ ಪಡೆದಿದೆ.

ಈ ನಿರ್ಣಾಯಕ ಹಂತದಲ್ಲಿ ತಾವು ಮೂರು ಗುಂಪುಗಳು ಇತರ ಇರಾನ್ ಬೆಂಬಲಿತ ಉಗ್ರವಾದಿ ಗುಂಪುಗಳೊಂದಿಗೆ ಸೇರಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಿಜ್ಬುಲ್ಲಾ ಗುಂಪಿನ ನಾಯಕ ಹಸನ್ ನಸ್ರಲ್ಲಾ ಅವರ ಅಭಿಪ್ರಾಯಕ್ಕೆ ಹಮಾಸ್ ನಾಯಕ ಸಾಲೇಹ್ ಅಲ್-ಅರೌರಿ ಮತ್ತು ಇಸ್ಲಾಮಿಕ್ ಜಿಹಾದ್ ನಾಯಕ ಜಿಯಾದ್ ಅಲ್-ನಖ್ಲೆ ಅವರು ಸಹಮತಿ ವ್ಯಕ್ತಪಡಿಸಿದರು ಎಂದು ಸಭೆಯ ನಂತರ ಹೊರಡಿಸಲಾದ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹಿಜ್ಬುಲ್ಲಾ ನಿಯಂತ್ರಣದಲ್ಲಿರುವ ಲೆಬನಾನ್ ಸರ್ಕಾರಿ ಮಾಧ್ಯಮದ ಪ್ರಕಾರ- ಗಾಜಾ ಹಾಗೂ ಪಶ್ಚಿಮ ದಂಡೆಯಲ್ಲಿರುವ ತುಳಿತಕ್ಕೊಳಗಾದ ನಮ್ಮ ಜನರ ವಿರುದ್ಧ ಇಸ್ರೇಲ್‌ನ ವಿಶ್ವಾಸಘಾತುಕ ಮತ್ತು ಕ್ರೂರ ಆಕ್ರಮಣವನ್ನು ನಿಲ್ಲಿಸಲು ಗಾಜಾ ಮತ್ತು ಪ್ಯಾಲೆಸ್ಟೈನ್​ನಲ್ಲಿನ ಪ್ರತಿರೋಧಕ್ಕೆ ವಾಸ್ತವಿಕವಾದ ಗೆಲುವು ಸಾಧಿಸುವುದು ಸಭೆಯಲ್ಲಿ ಭಾಗವಹಿಸಿದ್ದ ಮೂರು ಗುಂಪಿನ ನಾಯಕರ ಉದ್ದೇಶವಾಗಿದೆ. -ಇಷ್ಟು ಬಿಟ್ಟರೆ ಲೆಬನಾನ್ ಸರ್ಕಾರಿ ಮಾಧ್ಯಮ ಸಭೆಯ ಬಗ್ಗೆ ಬೇರಾವುದೇ ಮಾಹಿತಿ ನೀಡಿಲ್ಲ.

ಲೆಬನಾನ್​ನ ಹಿಜ್ಬುಲ್ಲಾ ಒಂದು ರಾಜಕೀಯ ಪಕ್ಷ ಮತ್ತು ಲೆಬನಾನ್ ಮೂಲದ ಉಗ್ರಗಾಮಿ ಗುಂಪು ಆಗಿದೆ. ಲೆಬನಾನ್​ನಲ್ಲಿ ತನ್ನ ವ್ಯಾಪಕ ಭದ್ರತಾ ವ್ಯವಸ್ಥೆ, ರಾಜಕೀಯ ಸಂಘಟನೆ ಮತ್ತು ಸಾಮಾಜಿಕ ಸೇವೆಗಳ ಜಾಲದ ಮೂಲದ ಗುಂಪು ದೇಶದೊಳಗೆ ತನ್ನದೇ ಆದ ಪ್ರತ್ಯೇಕ ವ್ಯವಸ್ಥೆಯನ್ನು ಸೃಷ್ಟಿಸಿದೆ.

ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಇದು ಉಗ್ರಗಾಮಿ ಸಂಘನೆಯಾಗಿದ್ದು, ಇಸ್ರೇಲ್ ನಾಶಕ್ಕೆ ಬದ್ಧವಾಗಿರುವ ಇಸ್ಲಾಮಿಕ್ ಪ್ಯಾಲೆಸ್ಟೈನ್ ದೇಶವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಇದು ಗಾಜಾ ಪಟ್ಟಿ ಮತ್ತು ಪಶ್ಚಿಮ ದಂಡೆಯಲ್ಲಿನ ಎರಡನೇ ಅತಿದೊಡ್ಡ ಉಗ್ರಗಾಮಿ ಸಂಘಟನೆಯಾಗಿದೆ.

ಹರಕತ್ ಅಲ್-ಮುಕಾವಾಮಾ ಅಲ್-ಇಸ್ಲಾಮಿಯಾ (ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್​ಮೆಂಟ್​) ಎಂಬುದರ ಸಂಕ್ಷಿಪ್ತ ರೂಪವಾದ ಹಮಾಸ್ ಪ್ಯಾಲೆಸ್ಟೈನ್ ಪ್ರದೇಶಗಳಲ್ಲಿನ ಅತಿದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಉಗ್ರಗಾಮಿ ಸಂಘಟನೆಯಾಗಿದೆ. ಇದು ಪ್ರದೇಶದ ಎರಡು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಗಾಜಾ ಪಟ್ಟಿಗೆ ಇಂಧನ ಪೂರೈಸಲು ಅವಕಾಶ ನೀಡಲ್ಲ: ಇಸ್ರೇಲ್ ಮಿಲಿಟರಿ

Last Updated : Oct 25, 2023, 6:09 PM IST

ABOUT THE AUTHOR

...view details