ಕರ್ನಾಟಕ

karnataka

ETV Bharat / international

ಕೆನಡಾದಲ್ಲಿ ಸಾಮೂಹಿಕ ಚಾಕು ಇರಿತ: 10 ಜನರು ದುರ್ಮರಣ, 15 ಮಂದಿಗೆ ಗಾಯ

ಕೆನಡಾದಲ್ಲಿ ಇಬ್ಬರು ದುಷ್ಕರ್ಮಿಗಳು ಸಿಕ್ಕಸಿಕ್ಕವರ ಮೇಲೆ ಚಾಕುವಿನಿಂದ ದಾಳಿ ನಡೆಸಿದ ಘಟನೆ ನಡೆದಿದೆ.

Mass stabbing in Canada
Mass stabbing in Canada

By

Published : Sep 5, 2022, 8:51 AM IST

ಒಟ್ಟಾವಾ(ಕೆನಡಾ): ಕೆನಡಾದಲ್ಲಿ ನಡೆದಿರುವ ಸಾಮೂಹಿಕ ಚಾಕು ಇರಿತ ಪ್ರಕರಣದಲ್ಲಿ 10 ಜನರು ದುರ್ಮರಣಕ್ಕೀಡಾಗಿದ್ದಾರೆ. 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಧುನಿಕ ಕೆನಡಾ ಇತಿಹಾಸದಲ್ಲಿ ನಡೆದ ಅತ್ಯಂತ ಭೀಕರ ಮಾರಣಾಂತಿಕ ಸಾಮೂಹಿಕ ಹತ್ಯೆ ಇದಾಗಿದೆ.

ಸಸ್ಕತ್​​​ಚೆವನ್​ ಪ್ರಾಂತ್ಯದಲ್ಲಿ ಘಟನೆ ನಡೆದಿದೆ. ಇಬ್ಬರು ಸರಣಿ ಹಂತಕರಿಗೋಸ್ಕರ ಪೊಲೀಸರು ತೀವ್ರ ಹುಡುಕಾಟ ಶುರು ಮಾಡಿದ್ದಾರೆ. ಕೆಲವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಮತ್ತೆ ಕೆಲವರ ಮೇಲೆ ಬೇಕಾಬಿಟ್ಟಿ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ಈ ದಾಳಿ ನಡೆದಿದೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:ಬೆಳಗಾವಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರ ಹತ್ಯೆ

ಘಟನೆಗೆ ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೊ ಸಂತಾಪ ಸೂಚಿಸಿದ್ದು, ಕೆನಡಾದ ಸಸ್ಕತ್​​ಚೆವನ್​​ ಪ್ರಾಂತ್ಯದಲ್ಲಿ ನಡೆದ ದಾಳಿ ಭಯಾನಕ ಹಾಗೂ ಹೃದಯವಿದ್ರಾವಕವಾಗಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರು ಮತ್ತು ಗಾಯಗೊಂಡವರ ಬಗ್ಗೆ ನನಗೆ ನೋವಿದೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

ಘಟನಾ ಪ್ರದೇಶದಲ್ಲಿ ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಗಾಯಗೊಂಡಿರುವ ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ದಾಳಿ ನಡೆಸಿರುವ ಶಂಕಿತರ ಗುರುತು ಪತ್ತೆಯಾಗಿದ್ದು, ಅವರಿಗೋಸ್ಕರ ಶೋಧಕಾರ್ಯ ಮುಂದುವರೆದಿದೆ.

ABOUT THE AUTHOR

...view details