ಕರ್ನಾಟಕ

karnataka

ETV Bharat / international

ಇಂಧನ ಡಿಪೋದಲ್ಲಿ ಭಾರೀ ಬೆಂಕಿ.. 16 ಜನ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ - ಬೆಂಕಿಯಿಂದ ಇಂಧನ ಪೂರೈಕೆಗೆ ಅಡ್ಡಿ ಇಲ್ಲ

ಇಂಡೋನೇಷ್ಯಾದ ರಾಜಧಾನಿಯಲ್ಲಿ ದುರಂತ.. ಇಂಧನ ಸಂಗ್ರಹಣಾ ಡಿಪೋದಲ್ಲಿ ಭಾರಿ ಬೆಂಕಿ.. ಕನಿಷ್ಠ 16 ಜನರು ಸಾವು, ಹತ್ತಾರು ಜನರಿಗೆ ಗಾಯ

Many persons Killed In Fire  Fire At Indonesia Fuel Storage Depot  Indonesia Fuel Storage Depot  ಇಂಡೋನೇಷ್ಯಾದ ರಾಜಧಾನಿಯಲ್ಲಿ ದುರಂತ  ಇಂಧನ ಸಂಗ್ರಹಣಾ ಡಿಪೋದಲ್ಲಿ ಭಾರಿ ಬೆಂಕಿ  ಘಟನೆಯಲ್ಲಿ ಹತ್ತಾರು ಜನರು ಗಾಯ  ಇಂಧನ ಅಗತ್ಯಗಳ 25 ಪ್ರತಿಶತ ಪೂರೈಕೆ  ಘಟನಾ ಸ್ಥಳದಲ್ಲಿ ನೂರಾರು ಅಗ್ನಿಶಾಮಕ  ಬೆಂಕಿ ಕಂಡು ಓಡುತ್ತಿರುವ ಜನ  ಬೆಂಕಿಯಿಂದ ಇಂಧನ ಪೂರೈಕೆಗೆ ಅಡ್ಡಿ ಇಲ್ಲ  ಇಂಧನ ಡಿಪೋದಲ್ಲಿ ಭಾರೀ ಬೆಂಕಿ
ಇಂಧನ ಡಿಪೋದಲ್ಲಿ ಭಾರೀ ಬೆಂಕಿ

By

Published : Mar 4, 2023, 8:05 AM IST

ಜಕಾರ್ತಾ(ಇಂಡೋನೇಷ್ಯಾ):ರಾಜಧಾನಿಯಲ್ಲಿನ ಇಂಧನ ಸಂಗ್ರಹಣಾ ಡಿಪೋದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 16 ಜನರು ಸಾವನ್ನಪ್ಪಿದ್ದು, ಈ ಘಟನೆಯಲ್ಲಿ ಹತ್ತಾರು ಜನರು ಗಾಯಗೊಂಡಿರುವುದು ಬೆಳಕಿಗೆ ಬಂದಿದೆ. ಬೆಂಕಿ ಕಾಣಿಸಿಕೊಂಡ ನಂತರ ಸಮೀಪದ ಸಾವಿರಾರು ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂಧನ ಅಗತ್ಯಗಳ 25 ಪ್ರತಿಶತ ಪೂರೈಕೆ:ಅಲ್ಲಿನ ಮಾಧ್ಯಮಗಳ ಮಾಹಿತಿಯ ಪ್ರಕಾರ, ಈ ಇಂಧನ ಶೇಖರಣಾ ಕೇಂದ್ರವು ಸರ್ಕಾರಿ ಚಾಲಿತ ತೈಲ ಮತ್ತು ಅನಿಲ ಕಂಪನಿ ಪರ್ಟಮಿನಾದಿಂದ ನಿರ್ವಹಿಸಲ್ಪಡುತ್ತದೆ. ಇದು ಉತ್ತರ ಜಕಾರ್ತಾದ ತನಾಹ್ ಮೆರಾಹ್ ನೆರೆಹೊರೆಯಲ್ಲಿ ಜನನಿಬಿಡ ಪ್ರದೇಶದ ಸಮೀಪದಲ್ಲಿದೆ. ಇಂಡೋನೇಷ್ಯಾ ದೇಶದ ಇಂಧನ ಅಗತ್ಯಗಳ 25 ಪ್ರತಿಶತವನ್ನು ಇದು ಪೂರೈಸುತ್ತದೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳದಲ್ಲಿ ನೂರಾರು ಅಗ್ನಿಶಾಮಕ ಸಿಬ್ಬಂದಿ: ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ತೈಲ ಡಿಪೋಗೆ ಹೊತ್ತಿಕೊಂಡ ಬೆಂಕಿಯನ್ನು ನಂದಿಸಲು ಕನಿಷ್ಠ 180 ಅಗ್ನಿಶಾಮಕ ಸಿಬ್ಬಂದಿ ಮತ್ತು 37 ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ:ಎನ್‌ಡಬ್ಲ್ಯೂಕೆಆರ್‌ಟಿಸಿ ಕಾರ್ಯಾಗಾರದಲ್ಲಿ ಅಗ್ನಿ ಅವಘಡ: ತನಿಖೆಗೆ ಆದೇಶಿಸಿದ ಎಂಡಿ

ಬೆಂಕಿ ಕಂಡು ಓಡುತ್ತಿರುವ ಜನ:ಸ್ಥಳೀಯ ಟಿವಿ ಚಾನಲ್‌ಗಳಲ್ಲಿ ತೋರಿಸಲಾದ ಘಟನೆಯ ವಿಡಿಯೋಗಳಲ್ಲಿ ನೂರಾರು ಜನರು ಗಾಬರಿಯಿಂದ ಓಡುತ್ತಿರುವುದನ್ನು ಗಮನಿಸಬಹುದಾಗಿದೆ. ಇಡೀ ಆಕಾಶದಲ್ಲಿ ದಟ್ಟವಾದ ಬೆಂಕಿ ಮತ್ತು ಕಪ್ಪು ಹೊಗೆಯಿಂದ ಕೂಡಿದ ಮೋಡಗಳು ಕಾಣಿಸಿಕೊಂಡವು. ಪರ್ಟಮಿನಾ ಏರಿಯಾ ಮ್ಯಾನೇಜರ್ ಎಕೊ ಕ್ರಿಸ್ಟಿಯಾವಾನ್ ಮಾತನಾಡಿ, ತೈಲ ಪೈಪ್‌ಲೈನ್ ಒಡೆದು ಬೆಂಕಿ ಹೊತ್ತಿಕೊಂಡಿರುವುದು ಪ್ರಾಥಮಿಕ ತನಿಖೆಯ ಮೂಲಕ ತಿಳಿದಿದೆ ಎಂದು ಹೇಳಿದರು.

ಬೆಂಕಿಯಿಂದ ಇಂಧನ ಪೂರೈಕೆಗೆ ಅಡ್ಡಿ ಇಲ್ಲ:ಜಕಾರ್ತಾದ ಅಗ್ನಿಶಾಮಕ ಮತ್ತು ರಕ್ಷಣಾ ವಿಭಾಗದ ಮುಖ್ಯಸ್ಥ ಸತ್ರಿಯಾಡಿ ಗುನ್ವಾನ್ ಈ ಬಗ್ಗೆ ಮಾತನಾಡಿ, ಬೆಂಕಿಯಿಂದ ದೇಶದ ಇಂಧನ ಪೂರೈಕೆಗೆ ಅಡ್ಡಿಯಾಗುವುದಿಲ್ಲ. ವಸತಿ ಪ್ರದೇಶದಲ್ಲಿ ವಾಸಿಸುವ ಜನರನ್ನು ಇನ್ನೂ ಸ್ಥಳಾಂತರಿಸಲಾಗುತ್ತಿದೆ. ಅವರಿಗಾಗಿ ಹತ್ತಿರದ ಹಳ್ಳಿಯಲ್ಲಿರುವ ಹಾಲ್ ಮತ್ತು ಮಸೀದಿಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ 16 ಮಂದಿ ಸಾವು: ಬೆಂಕಿಯಿಂದ ಡಿಪೋದಲ್ಲಿ ಅನೇಕ ಸ್ಫೋಟಗಳು ಆಗಿವೆ. ನೋಡ ನೋಡುತ್ತಿದ್ದಂತೆ ಬೆಂಕಿ ವಸತಿ ಮನೆಗಳಿಗೂ ಹರಡಿತು ಎಂದು ಗುಣವನ್ ಹೇಳಿದರು. ಇನ್ನು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಡುಡುಂಗ್ ಅಬ್ದುರ್ಚಮನ್, ಈ ದುರಂತದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಮತ್ತು 42ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವರು ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಈ ಘಟನೆ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಓದಿ:ಮೈಸೂರು: ಹುಲ್ಲಿನ ಬಣೆಗೆ ಕಿಡಿಗೇಡಿಗಳಿಂದ ಬೆಂಕಿ

ABOUT THE AUTHOR

...view details