ವಿಶ್ವಸಂಸ್ಥೆ:ರಷ್ಯಾ ದಾಳಿಯಿಂದ ನಲುಗಿರುವ, ತೀವ್ರ ಆಹಾರ ಕೊರತೆ ಎದುರಿಸುತ್ತಿರುವ ಉಕ್ರೇನ್ಗೆ ವಿವಿಧ ದೇಶಗಳು ಬೆನ್ನಿಗೆ ನಿಂತಿವೆ. ಇಸ್ತಾನ್ಬುಲ್ನಲ್ಲಿ ನಿನ್ನೆ ನಡೆದ ವರ್ಚುಯಲ್ ಮಾತುಕತೆಯಲ್ಲಿ ಆ ದೇಶಕ್ಕೆ ಆಹಾರ ಸರಕುಗಳನ್ನು ಸಾಗಿಸಲು ಕೆಲ ದೇಶಗಳು ಮುಂದಾಗಿವೆ. ಇದರಿಂದ ಉಕ್ರೇನ್ ಆಹಾರ ಘಟಕದಲ್ಲಿ ಆಹಾರ ಸಂಗ್ರಹಣೆ ಹೆಚ್ಚಳ ಕಾಣಲಿದೆ.
ಅಗತ್ಯ ಧಾನ್ಯಗಳ ಸಾಗಣೆಯು ಮುಂದಿನ ದಿನಗಳಲ್ಲಿ ಉಕ್ರೇನ್ ಬಂದರಿಗೆ ಬರಲಿದೆ. ಸರಕುಗಳ ಆಗಮನದಿಂದ ಅಲ್ಪಮಟ್ಟಿನ ಕೊರತೆ ನೀಗಲಿದೆ ಎಂದು ಊಹಿಸಲಾಗಿದೆ. ರಷ್ಯಾ ದಾಳಿಗೀಡಾದ ಉಕ್ರೇನ್ ಹಲವು ಬಾರಿ ಆಹಾರ ಸಾಮಗ್ರಿಗಳನ್ನು ರಫ್ತು ಮಾಡಲು ಪರಿಪರಿಯಾಗಿ ಕೇಳಿಕೊಂಡಿತ್ತು. ಇದೀಗ ಒಪ್ಪಂದದ ಅಡಿಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳು ನೆರವಿಗೆ ಧಾವಿಸಿದ್ದು, ಸಹಾಯಹಸ್ತ ಚಾಚಿವೆ.