ಕರ್ನಾಟಕ

karnataka

ETV Bharat / international

ಮಾಲ್ಡೀವ್ಸ್​ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಭರ್ಜರಿ ಮತ ಪಡೆದು ಮಹಮದ್ ಮುಯಿಝು ಗೆಲುವು.. ಪ್ರಧಾನಿ ಮೋದಿ ಅಭಿನಂದನೆ - ಮಾಲೆ

ಮಾಲ್ಡೀವ್ಸ್​ನಲ್ಲಿ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಭ್ಯರ್ಥಿ ಮಹಮದ್ ಮುಯಿಝು 18,000 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಮಹಮದ್ ಮುಯಿಝು
ಮಹಮದ್ ಮುಯಿಝು

By ETV Bharat Karnataka Team

Published : Oct 1, 2023, 9:56 AM IST

ಮಾಲೆ(ಮಾಲ್ಡೀವ್ಸ್):ಮಾಲ್ಡೀವ್ಸ್​ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷದ ಅಭ್ಯರ್ಥಿ ಮಹಮದ್ ಮುಯಿಝು ಶೇಕಡಾ 53 ಕ್ಕೂ ಅಧಿಕ ಮತ ಪಡೆದು ಗೆಲುವು ಸಾಧಿಸಿದ್ದಾರೆ.ಶನಿವಾರ ನಡೆದ ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಶೇ.46 ಮತಗಳನ್ನು ಪಡೆದಿದ್ದು, ಕಡಿಮೆ ಅಂತರದಲ್ಲಿ ಸೊಲುಂಡಿದ್ದಾರೆ. ಮತ್ತು ಮುಯಿಝು 18,000 ಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಮಾಲ್ಡೀವ್ಸ್​​ ಸಂವಿಧಾನದ ಪ್ರಕಾರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿ ಶೇಕಡಾ 50 ಕ್ಕಿಂತ ಅಧಿಕ ಮತ ಪಡೆದುಕೊಳ್ಳಬೇಕು.

ಅಧ್ಯಕ್ಷ ಮುಯಿಝು ಪ್ರತಿಕ್ರಿಯೆ:ಗೆಲುವಿನ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಮುಯಿಝು, ಇಂದಿನ ಫಲಿತಾಂಶದಿಂದ ದೇಶದ ಭವಿಷ್ಯವನ್ನು ಕಟ್ಟುವ ಅವಕಾಶ ಸಿಕ್ಕಿದೆ. ಮಾಲ್ಡೀವ್ಸ್‌ನ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸುವ ಶಕ್ತಿ ದೊರಕಿದೆ ಎಂದು ಸಂತಸ ವ್ಯಕ್ತಪಡಿಸಿದರು. ಜತೆಗೆ ನಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡುವ ಸಮಯ ಬಂದಿದೆ. ನಾವು ಶಾಂತಿಯುತರಾಗಬೇಕು. ಸಮಾಜ ಶಾಂತಿಯಿಂದ ನೆಲಸಬೇಕು ಎಂದಿದ್ದಾರೆ. ಹಾಗೆ ಸೋಲಿಹ್ ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರನ್ನು ಜೈಲಿನಿಂದ ಗೃಹಬಂಧನಕ್ಕೆ ವರ್ಗಾಯಿಸಬೇಕೆಂದು ಮುಯಿಝು ವಿನಂತಿಸಿದ್ದಾರೆ.

ಮುಂದುವರೆದು, ಮುಯಿಝು ಪಕ್ಷದ ಉನ್ನತ ಅಧಿಕಾರಿ ಮೊಹಮ್ಮದ್ ಶರೀಫ್ ಈ ಗೆಲುವಿನ ಬಗ್ಗೆ, ಇಂದಿನ ಫಲಿತಾಂಶ ನಮ್ಮ ಜನರ ದೇಶಪ್ರೇಮದ ಪ್ರತಿಬಿಂಬವಾಗಿದೆ. ನಮ್ಮ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವವನ್ನು ಸಂಪೂರ್ಣವಾಗಿ ಗೌರವಿಸಲು ನಮ್ಮ ಎಲ್ಲಾ ನೆರೆಹೊರೆಯವರು ಮತ್ತು ದ್ವಿಪಕ್ಷೀಯ ಪಾಲುದಾರರಿಗೆ ಇದು ಕರೆಯಾಗಿದೆ ಎಂದು ಹೇಳಿದರು.

ಇನ್ನು ಇಂಜಿನಿಯರ್ ಆಗಿರುವ ಮುಯಿಝು 7 ವರ್ಷಗಳ ಕಾಲ ವಸತಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಆಯ್ಕೆಯಾದಾಗ ರಾಜಧಾನಿಯಾದ ಮಾಲೆಯ ಮೇಯರ್ ಆಗಿದ್ದರು. ಹಾಗೆ ಇದೇ ಸೆಪ್ಟೆಂಬರ್ 9ರಂದು ಮೊದಲ ಸುತ್ತಿನ ಮತದಾನ ನಡೆದಿತ್ತು. ಅದರಲ್ಲಿ ಮಹಮದ್​ ಮುಯಿಝು ಶೇ.46ರಷ್ಟು ಮತಗಳನ್ನು ಪಡೆದಿದ್ದರು.

ಪ್ರಧಾನಿ ಮೋದಿಯಿಂದ ಅಭಿನಂದನೆ:ಮಹಮದ್ ಮುಯಿಝು ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್​ನಲ್ಲಿ, "ಮಾಲ್ಡೀವ್ಸ್ ಅಧ್ಯಕ್ಷರಾಗಿ ಆಯ್ಕೆಯಾದ ಮಹಮದ್ ಮುಯಿಝು ಅವರಿಗೆ ಅಭಿನಂದನೆಗಳು, ಶುಭಾಶಯಗಳು. ಸಮಯ-ಪರೀಕ್ಷಿತ ಭಾರತ-ಮಾಲ್ಡೀವ್ಸ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಮತ್ತು ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಮ್ಮ ಒಟ್ಟಾರೆ ಸಹಕಾರವನ್ನು ಹೆಚ್ಚಿಸಲು ಭಾರತವು ಬದ್ಧವಾಗಿದೆ" ಎಂದಿದ್ದಾರೆ.

ಇದನ್ನೂ ಓದಿ;ಅಮೆರಿಕದಲ್ಲಿ ಸಾಂಸ್ಕೃತಿಕ ಉತ್ಸವದ ವೈಭವ: ರವಿಶಂಕರ್​ ಗುರೂಜಿ, ವಿದೇಶಾಂಗ ಸಚಿವ ಜೈಶಂಕರ್ ಭಾಗಿ

ABOUT THE AUTHOR

...view details