ಕರ್ನಾಟಕ

karnataka

ETV Bharat / international

ಮಾಲ್ಡೀವ್ಸ್ ಭೀಕರ​​ ಅಗ್ನಿ ದುರಂತ: 8 ಭಾರತೀಯರು ಸೇರಿ 11 ಮಂದಿ ಸಾವು

ವಿದೇಶಿ ಕಾರ್ಮಿಕರನ್ನು ಹೊಂದಿದ್ದ ಮಾಲ್ಡೀವ್ಸ್‌ ದೇಶದ ಮಾಲೆಯ ಗ್ಯಾರೇಜ್‌ ಒಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಭಾರತೀಯರೂ ಸೇರಿ 11 ಮಂದಿ ಸಾವನ್ನಪ್ಪಿದ್ದಾರೆ.

Maldives fire accident
ಮಾಲ್ಡೀವ್ಸ್​​ ಅಗ್ನಿ ದುರಂತ

By

Published : Nov 10, 2022, 1:56 PM IST

ಮಾಲ್ಡೀವ್ಸ್​​: ಇಂದು ಮುಂಜಾನೆ ಮಾಲ್ಡೀವ್ಸ್​ ರಾಜಧಾನಿ ಮಾಲೆಯಲ್ಲಿ ವಿದೇಶಿ ಕಾರ್ಮಿಕರನ್ನು ಹೊಂದಿರುವ ಗ್ಯಾರೇಜ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಭಾರತೀಯ ಪ್ರಜೆಗಳೇ ಹೆಚ್ಚಿದ್ದಾರೆ ಎಂದು ವರದಿಯಾಗಿದೆ.

ಭಾರತೀಯ ಹೈಕಮಿಷನ್ ಟ್ವೀಟ್‌ನಲ್ಲಿ, "ಇಂದು ಸಂಭವಿಸಿದ ಅಗ್ನಿ ದುರಂತದಲ್ಲಿ ಭಾರತೀಯ ಪ್ರಜೆಗಳು ಸೇರಿ ಅಪಾರ ಜೀವಹಾನಿ ಆಗಿದೆ. ನಾವು ಮಾಲ್ಡೀವ್ಸ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ" ಎಂದು ಹೇಳಿದೆ. ಮಾಹಿತಿ ಪ್ರಕಾರ, ಗ್ಯಾರೇಜ್‌ ಬಹಳ ಇಕ್ಕಟ್ಟಾದ ಪ್ರದೇಶದಲ್ಲಿತ್ತು. ಮಾವೆಯೊ ಮಸೀದಿ ಬಳಿಯ ಎಂ. ನಿರುಫೆಹಿ ಎಂಬ ಪ್ರದೇಶದಲ್ಲಿ ಮಧ್ಯರಾತ್ರಿ 12:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಳಗಿನ ಜಾವ 4:34ಕ್ಕೆ ಬೆಂಕಿ ನಂದಿಸಲಾಗಿದೆ.

ಗ್ಯಾರೇಜ್ ನೆಲ ಮಹಡಿಯಲ್ಲಿತ್ತು. ಮೊದಲ ಮಹಡಿಯಲ್ಲಿ ವಲಸೆ ಕಾರ್ಮಿಕರಿದ್ದರು. ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ, ಅಗ್ನಿಶಾಮಕ ದಳ ಈಗಾಗಲೇ 28ಕ್ಕೂ ಹೆಚ್ಚು ಜನರನ್ನು ಕಟ್ಟಡದಿಂದ ಸ್ಥಳಾಂತರಿಸಿದೆ. ಒಂಭತ್ತು ಜನರು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಅರುಣಾಚಲ ಪ್ರದೇಶದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ: ಆತಂಕದಲ್ಲಿ ಜನತೆ

ಅಗ್ನಿಶಾಮಕ ದಳದವರು ಕಟ್ಟಡದಿಂದ 11 ಶವಗಳನ್ನು ಈಗಾಗಲೇ ಹೊರತೆಗೆದಿದ್ದಾರೆ. ಕಾರ್ಮಿಕರ ಪೈಕಿ, ಹೆಚ್ಚಿನವರು ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಬಂದವರಾಗಿದ್ದಾರೆ.

ABOUT THE AUTHOR

...view details