ಲಂಡನ್ (ಯುಕೆ):ಲಂಡನ್ ಮೇಯರ್ ಸಾದಿಕ್ ಖಾನ್ ಭಾನುವಾರ ಟ್ರಾಫಲ್ಗರ್ ಸ್ಕ್ವೇರ್‌ನಲ್ಲಿ ವಾರ್ಷಿಕ ದೀಪಾವಳಿ ಆಚರಣೆ ಆಯೋಜಿಸಿದ್ದಾರೆ. ನಿನ್ನೆ (ಭಾನುವಾರ) ಮಧ್ಯಾಹ್ನ 1ರಿಂದ ಸಂಜೆ 7 ರವರೆಗೆ (ಸ್ಥಳೀಯ ಕಾಲಮಾನ) ನಡೆದ ಉಚಿತ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾರತೀಯ ಸಾಂಪ್ರದಾಯಿಕ ನೃತ್ಯಗಳು, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಭಾರತದ ವಿವಿಧ ಭಾಗಗಳ ಖಾದ್ಯಗಳು ಹಬ್ಬದ ಮೆರಗನ್ನು ಹೆಚ್ಚಿಸಿದವು.
ಗಮನಸೆಳೆದ ವಿವಿಧ ಪ್ರದರ್ಶನಗಳು: ಲಂಡನ್‌ನ ಹಿಂದೂ, ಸಿಖ್ ಮತ್ತು ಜೈನ ಸಮುದಾಯವರಿಂದ ನಡೆದ ವಿವಿಧ ಪ್ರದರ್ಶನಗಳು ಗಮನ ಸೆಳೆದವು. ಯೋಗ ಕಾರ್ಯಾಗಾರಗಳು, ಬೊಂಬೆ ಪ್ರದರ್ಶನಗಳನ್ನು ವೀಕ್ಷಿಸಿದ ಜನರು ಸಂತಸಪಟ್ಟರು. ಸಾದಿಕ್ ಖಾನ್ ಅವರು ಈ ಕಾರ್ಯಕ್ರಮವನ್ನು ದೀಪಾವಳಿಯ ಸಾಂಕೇತಿಕವಾಗಿ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಾಕಾರಗೊಳಿಸಿದ್ದಾರೆ ಎಂದು ಭಾಗವಹಿಸಿದ್ದ ಜನರು ಶ್ಲಾಘಿಸಿದ್ದಾರೆ.
ಸ್ಥಳೀಯ ನಿವಾಸಿ, ಶಿಕ್ಷಕ ಜೇಮ್ಸ್ ಅವರು ಮೊದಲ ಬಾರಿಗೆ ದೀಪಾವಳಿಯನ್ನು ಆಚರಿಸಿದರು. ''ದೀಪಾವಳಿಯನ್ನು ಅದ್ಭುತವಾದ ಹಬ್ಬ ಎಂದು ಕರೆದಿದ್ದಾರೆ. "ದೀಪಾವಳಿ ಹಬ್ಬವು ವಿಭಿನ್ನ ಅನುಭವವನ್ನು ನೀಡಿದೆ. ಲಂಡನ್‌ನಲ್ಲಿರುವ ಪ್ರತಿಯೊಬ್ಬರೂ ಈ ಅದ್ಭುತ ಹಬ್ಬವನ್ನು ಆಚರಿಸಲು ಒಗ್ಗೂಡಿದ್ದಾರೆ. ನಾನು ನೃತ್ಯವನ್ನು ಪ್ರೀತಿಸುತ್ತೇನೆ. ರಾಮ ಮತ್ತು ಸೀತೆಯ ಕಥೆಯ ಮರು ನಿರ್ಮಾಣಗಳನ್ನು ಸಹ ಇಷ್ಟಪಡುತ್ತೇನೆ. ಒಂದು ಜಾಗತಿಕ ಸಮುದಾಯವಾಗಿ ಒಟ್ಟಿಗೆ ಹಬ್ಬದ ಕ್ಷಣವನ್ನು ಅನುಭವಿಸುವುದು ತುಂಬಾ ಸುಂದರವಾಗಿದೆ" ಎಂದು ಅವರು ತಿಳಿಸಿದ್ದಾರೆ.
ಕಲಾವಿದರು ಜಾನಪದ ಹಾಡುಗಳನ್ನು ಜನ ಮನ ಸಳೆದರು. ಬಾಲಿವುಡ್ ಹಾಡುಗಳಾದ 'ಜೈ ಹೋ' ಮತ್ತು 'ಜೋ ಹೈ ಅಲ್ಬೆಲಾ' ಹಾಡುಗಳಿಗೆ ನೃತ್ಯ ಮಾಡಿದರು. ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದ ಜನರು ಭಾರತೀಯ ಆಹಾರ ಸವಿದು ಖುಷಿಪಟ್ಟಿದ್ದಾರೆ.