ಲಂಡನ್: ಬ್ರಿಟನ್ ಪ್ರಧಾನಿ ಹುದ್ದೆಗೇರಿದ ಕೇವಲ 45 ದಿನಗಳಲ್ಲೇ ಲಿಜ್ ಟ್ರಸ್ ತಮ್ಮ ಹುದ್ದೆಗೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಲಿಜ್ ಟ್ರಸ್ ಅವರು ರಿಷಿ ಸುನಕ್ ಅವರನ್ನು ಸೋಲಿಸಿ ಪ್ರಧಾನಿ ಪಟ್ಟ ಅಲಂಕರಿಸಿದ್ದರು.
ಲಿಜ್ ಟ್ರಸ್ ಅವರು ಸಿರಿವಂತರ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದಾಗಿ ಚುನಾವಣೆಗೂ ಮೊದಲು ಘೋಷಿಸಿದ್ದರು. ಆದರೆ, ಪ್ರಧಾನಿ ಹುದ್ದೆಗೇರಿದ ಬಳಿಕ ಇದನ್ನು ಪಾಲಿಸದೇ ಇರುವ ಕಾರಣ ಆಡಳಿತ ವಿರೋಧಿ ಅಲೆ ಉಂಟಾಗಿತ್ತು.
ಅಲ್ಲದೇ, ಸಂಪುಟ ಸದಸ್ಯರಿಂದಲೇ ಲಿಜ್ ಟ್ರಸ್ ಬಂಡಾಯದ ಬಿಸಿ ಎದುರಿಸಿದ್ದರು. ಇತ್ತೀಚೆಗೆ ಗೃಹ ಸಚಿವೆ, ಭಾರತೀಯ ಮೂಲದ ಸುಯೆಲ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ಮುಖ್ಯ ಸಚೇತಕ ವೆಂಡಿ ಮಾರ್ಟನ್ ಕೂಡಾ ರಾಜೀನಾಮೆ ಸಲ್ಲಿಸಿದ್ದರು.
ಈ ಬೆಳವಣಿಗೆಯಿಂದ ಕಂಗೆಟ್ಟಿರುವ ಲಿಜ್ ಟ್ರಸ್ ಇದೀಗ ಪ್ರಧಾನಿ ಹುದ್ದೆ ತೊರೆದಿದ್ದಾರೆ. ಇದರಿಂದ ಬ್ರಿಟನ್ ರಾಜಕೀಯದಲ್ಲಿ ಅನಿಶ್ಚಿತತೆ ಉಂಟಾಗಿದ್ದು ರಿಷಿ ಸುನಕ್ ಅವರಿಗೆ ಪ್ರಧಾನಿ ಹುದ್ದೆ ಒಲಿಯುವುದೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ಗೆ ಮತ್ತೆ ಶಾಕ್..ಗೃಹ ಸಚಿವೆ ಬಳಿಕ ಮುಖ್ಯ ಸಚೇತಕರ ರಾಜೀನಾಮೆ