ನ್ಯೂಯಾರ್ಕ್:ಲಿಥಿಯಂ-ಐಯಾನ್ ಬ್ಯಾಟರಿಯ ಪ್ರವರ್ತಕ ಜಾನ್ ಬಿ ಗುಡ್ನೊಫ್ ನಿಧನರಾಗಿದ್ದಾರೆ. ಜಾನ್ ಗುಡ್ನೊಫ್ ಅವರು ತಮ್ಮ 100 ನೇ ವಯಸ್ಸಿನಲ್ಲಿ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಟೆಕ್ಸಾಸ್ ವಿಶ್ವವಿದ್ಯಾಲಯವು ಅವರ ಮರಣವನ್ನು ಖಚಿತಪಡಿಸಿದೆ.
ವಿದೇಶಿ ಮಾಧ್ಯಮಗಳ ಪ್ರಕಾರ, ಲಿಥಿಯಂ-ಐಯಾನ್ ಬ್ಯಾಟರಿಯ ರಚನೆಗಾಗಿ ಗುಡ್ನೊಫ್ ಅವರಿಗೆ ರಸಾಯನಶಾಸ್ತ್ರದಲ್ಲಿ ಹಂಚಿಕೆಯ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಬ್ಯಾಟರಿಗಳನ್ನು ಆಧುನಿಕ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ವಿದ್ಯುತ್ ಹಾಗು ಹೈಬ್ರಿಡ್ ಕಾರುಗಳಲ್ಲಿ ಬಳಸಲಾಗುತ್ತದೆ.
ಇನ್ನು ಜಾನ್ ಗುಡ್ನೊಫ್ ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎಂಜಿನಿಯರಿಂಗ್ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಇದಕ್ಕೂ ಮೊದಲು ಜಾನ್ ಗುಡ್ನೋಫ್ ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲ್ಯಾಬ್ ಅನ್ನು ಸ್ಥಾಪಿಸಿದರು. ಇದು 1980 ರಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್ ಕಂಪ್ಯೂಟರ್‌ಗಳ ಅಭಿವೃದ್ಧಿಗೆ ಅವಕಾಶ ಮಾಡಿಕೊಟ್ಟಿತು.
ಇದರ ಜೊತೆಗೆ, ಲಿಥಿಯಂ ಬ್ಯಾಟರಿಗಳನ್ನು ಟೆಸ್ಲಾ ಸೇರಿದಂತೆ ಅನೇಕ ಕ್ಲೀನ್, ಮೂಕ ಪ್ಲಗ್-ಇನ್ ವಾಹನಗಳಲ್ಲಿ ಬಳಸಲಾಗುತ್ತದೆ. ದೀರ್ಘ ಪ್ರಯಾಣಕ್ಕೆ ಲಿಥಿಯಂ ಬ್ಯಾಟರಿಗಳು ಉತ್ತಮ ಆಯ್ಕೆಯಾಗಿದೆ. ಹವಾಮಾನ ಬದಲಾವಣೆ ಕಡಿಮೆ ಮಾಡಲು ಬ್ಯಾಟರಿ ಸಹಕಾರಿಯಾಗಿದೆ. ಒಂದು ದಿನ ಲಿಥಿಯಂ ಗ್ಯಾಸೋಲಿನ್ ಚಾಲಿತ ಕಾರುಗಳು ಮತ್ತು ಟ್ರಕ್‌ಗಳನ್ನು ಬದಲಾಯಿಸಬಹುದು ಎಂದು ಹೇಳಲಾಗುತ್ತದೆ. ಇದಲ್ಲದೆ, ಲಿಥಿಯಂ ಬ್ಯಾಟರಿಗಳನ್ನು ಕಾರ್ಡಿಯಾಕ್ ಡಿಫಿಬ್ರಿಲೇಟರ್‌ಗಳಂತಹ ವೈದ್ಯಕೀಯ ಸಾಧನಗಳಲ್ಲಿಯೂ ಬಳಸಲಾಗುತ್ತದೆ.
ಓದಿ:ಭಾರತಕ್ಕೆ ಸೂಕ್ತ ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳ ಅಭಿವೃದ್ಧಿ: CSE, DST ಸಹಕಾರ