ಕೇಪ್ ಕೆನವೆರಲ್(ಯುಎಸ್‌ಎ):ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣ ನಾಳೆ ಸಂಭವಿಸುತ್ತಿದೆ. ಇದು ಸಂಪೂರ್ಣ ಚಂದ್ರಗ್ರಹಣವಾಗಿದೆ. ವಿಶೇಷ ಅಂದ್ರೆ (2025) ಮುಂದಿನ ಮೂರು ವರ್ಷಗಳವರೆಗೆ ಇಂತಹ ಗ್ರಹಣ ಸಂಭವಿಸುವುದಿಲ್ಲ.
ಸಂಪೂರ್ಣ ಚಂದ್ರ ಗ್ರಹಣವು ಉತ್ತರ ಅಮೆರಿಕದಾದ್ಯಂತ ಮುಂಜಾನೆ ಗೋಚರಿಸುತ್ತದೆ. ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ, ಉತ್ತರ ಅಟ್ಲಾಂಟಿಕ್ ಮಹಾಸಾಗರ, ಪೆಸಿಫಿಕ್ ಮಹಾಸಾಗರದ ಸಮೀಪದಲ್ಲಿ ಜನರು ತಮ್ಮ ಕಣ್ಣುಗಳಿಂದ ನೇರವಾಗಿ ಈ ಆಕಾಶ ವಿದ್ಯಮಾನವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.
ಬೆಳಗ್ಗೆ 5:16 ನಿಂದ 6:41 ವರೆಗೆ ಒಟ್ಟು ಒಂದೂವರೆ ಗಂಟೆಗಳವರೆಗೆ ಗ್ರಹಣ ಇರುತ್ತದೆ. ರಕ್ತ ಚಂದ್ರ ಎಂದು ಕರೆಯಲ್ಪಡುವ ಈ ಗ್ರಹಣವು, ಭೂಮಿಯ ಸೂರ್ಯಾಸ್ತ ಮತ್ತು ಸೂರ್ಯೋದಯಗಳ ಬೆಳಕಿನಿಂದ ಕೆಂಪು, ಕಿತ್ತಳೆ ಬಣ್ಣದಲ್ಲಿ ಕಾಣಿಸುತ್ತದೆ. ಕಳೆದ 3 ವರ್ಷದ ಹಿಂದೆ ಸಹ ಸಂಪೂರ್ಣ ಚಂದ್ರಗ್ರಹಣ ಸಂಭವಿಸಿತ್ತು.