ಕರ್ನಾಟಕ

karnataka

ETV Bharat / international

ಭೂಕಬಳಿಕೆ ಪ್ರಕರಣ: ಪಾಕ್ ಮಾಜಿ ಪ್ರಧಾನಿ ಇಮ್ರಾನ್, ಸಹೋದರಿಗೆ ಸಮನ್ಸ್​ - ಪಾಕ್ ಮಾಜಿ ಪ್ರಧಾನಿ ಇಮ್ರಾನ್

ಭೂಕಬಳಿಕೆ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪಾಕಿಸ್ತಾನದ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್​ ಅವರಿಗೆ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಸಮನ್ಸ್​ ಜಾರಿ ಮಾಡಿದೆ.

Imran Khan, sister summoned in land corruption scandal
Imran Khan, sister summoned in land corruption scandal

By

Published : Jun 18, 2023, 4:22 PM IST

ಲಾಹೋರ್ (ಪಾಕಿಸ್ತಾನ): ಲಯ್ಯಾಹ್ ಭೂ ಭ್ರಷ್ಟಾಚಾರ ಪ್ರಕರಣದಲ್ಲಿ (Layyah land corruption case) ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ (ಎಸಿಇ)ಯು ಪಾಕಿಸ್ತಾನ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್, ಅವರ ಸಹೋದರಿ ಉಜ್ಮಾ ಖಾನ್ ಮತ್ತು ಅವರ ಪತಿ ಅಹದ್ ಮಜೀದ್ ಅವರಿಗೆ ಸಮನ್ಸ್ ನೀಡಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವಕ್ತಾರರು ಹೊರಡಿಸಿದ ಅಧಿಸೂಚನೆಯ ಪ್ರಕಾರ, ಜೂನ್ 19 ರಂದು ಎಸಿಇ ಪ್ರಧಾನ ಕಚೇರಿಯಲ್ಲಿ ಹಾಜರಾಗುವಂತೆ ಮಾಜಿ ಪ್ರಧಾನಿ ಇಮ್ರಾನ್ ಖಾನ್​ರಿಗೆ ತಿಳಿಸಲಾಗಿದೆ. ಆದರೆ ಉಜ್ಮಾ ಮತ್ತು ಅವರ ಪತಿಗೆ ಎಸಿಇ ಮಹಾನಿರ್ದೇಶಕರ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ. ಇದಕ್ಕೂ ಮುನ್ನ ಜೂನ್ 16ರಂದು ಇಮ್ರಾನ್‌ಗೆ ಎಸಿಇ ಸಮನ್ಸ್ ನೀಡಿದ್ದರೂ ಅವರು ಹಾಜರಾಗಿರಲಿಲ್ಲ. ಇಮ್ರಾನ್ ಅವರ ಲಾಹೋರ್ ಜಮಾನ್ ಪಾರ್ಕ್ ನಿವಾಸದಲ್ಲಿ ಸಮನ್ಸ್ ಅಂಟಿಸಲಾಗಿದೆ.

ಲಯ್ಯಾಹ್ ಭ್ರಷ್ಟಾಚಾರ ಹಗರಣದಲ್ಲಿ ಇಮ್ರಾನ್ ಭಾಗಿಯಾಗಿರುವ ಬಗ್ಗೆ ಎಸಿಇ ಬಳಿ ಸ್ಪಷ್ಟ ಪುರಾವೆಗಳಿವೆ ಎಂದು ವಕ್ತಾರರು ಸಮರ್ಥಿಸಿಕೊಂಡಿದ್ದಾರೆ. ಅಕ್ರಮವಾಗಿ ಭೂಮಿ ವರ್ಗಾವಣೆ ಮಾಡುವಂತೆ ಇಸ್ಲಾಮಾಬಾದ್‌ನಲ್ಲಿರುವ ಇಮ್ರಾನ್ ನಿವಾಸದ ಬನಿ ಗಾಲಾದಿಂದ ಕಂದಾಯ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ವರದಿಗಳು ತಿಳಿಸಿವೆ. ಉಜ್ಮಾ ಅವರು ಲಯ್ಯಾಹ್ ಜಿಲ್ಲೆಯಲ್ಲಿ ನೂರಾರು ಕೋಟಿ ಬೆಲೆ ಬಾಳುವ 5,261 ಕನಾಲ್ ಭೂಮಿಯನ್ನು ಕೇವಲ 130 ಮಿಲಿಯನ್ ರೂಪಾಯಿಗಳಿಗೆ ಖರೀದಿಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದಂಪತಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಎಸಿಇ ತಿಳಿಸಿದೆ.

2021-22 ರಲ್ಲಿ ಭೂಮಿಯನ್ನು ವಂಚನೆಯ ಮೂಲಕ ಖರೀದಿಸಲಾಗಿದೆ. ಉಜ್ಮಾ ಮತ್ತು ಮಜೀದ್ ತಮ್ಮ ಹೆಸರಿಗೆ ಭೂಮಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ವಕ್ತಾರರು ಹೇಳಿದರು. ಈ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 600 ಕೋಟಿ ರೂ. ಆಗಿದೆ. ಥಾಲ್ ಕಾಲುವೆಯ ಮೂಲಕ ಬಂಜರು ಭೂಮಿಗೆ ನೀರುಣಿಸುವ ಉದ್ದೇಶದ ಗ್ರೇಟರ್ ಥಾಲ್ ಕಾಲುವೆ ಯೋಜನೆಗೆ ಎಡಿಬಿ ನೆರವು ಘೋಷಿಸಿದ ಸಂದರ್ಭದಲ್ಲಿ ಈ ಭೂಮಿಯನ್ನು ಅಕ್ರಮವಾಗಿ ಖರೀದಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಉಜ್ಮಾ ಅವರಿಗೆ ಯೋಜನೆ ಜಾರಿಯಾಗುವ ಬಗ್ಗೆ ಮೊದಲೇ ತಿಳಿದಿತ್ತು. ಹೀಗಾಗಿ ದಂಪತಿಗಳು ಭೂಮಿಯನ್ನು ತಮಗೆ ಮಾರಾಟ ಮಾಡುವಂತೆ ಭೂಮಾಲೀಕರನ್ನು ಒತ್ತಾಯಿಸಿದ್ದರು. ಜಮೀನನ್ನು ಬಲವಂತವಾಗಿ ಖರೀದಿಸಿದ್ದಕ್ಕಾಗಿ ಭೂ ಮಾಲೀಕರು ಉಜ್ಮಾ ಮತ್ತು ಇತರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿ ಪದಚ್ಯುತಗೊಂಡ ನಂತರ ಅವರ ವಿರುದ್ಧದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 140 ಕ್ಕೆ ಏರಿದೆ. ಖಾನ್ ಅವರ ಮೇಲಿನ ಪ್ರಕರಣಗಳು ಹೆಚ್ಚಾಗಿ ಭಯೋತ್ಪಾದನೆಗೆ ಸಂಬಂಧಿಸಿವೆ.

ಇದನ್ನೂ ಓದಿ : Heat Wave: ಯುಪಿಯಲ್ಲಿ ಬಿಸಿಲಿನ ಹೊಡೆತ: ಹೀಟ್​ವೇವ್​ನಿಂದ 54 ಜನ ಸಾವು

ABOUT THE AUTHOR

...view details