ಕರ್ನಾಟಕ

karnataka

ETV Bharat / international

ಬ್ರಿಟನ್​ ರಾಣಿ ಅಸ್ತಂಗತ.. 73 ವರ್ಷದ ಚಾರ್ಲ್ಸ್​​​​ ಆಗಲಿದ್ದಾರೆ ಬ್ರಿಟನ್​​​​ನ ಹೊಸ ರಾಜ.. ವಿಶ್ವಾದ್ಯಂತ ಸಂತಾಪ - ರಾಣಿ ಎಲಿಜಬೆತ್ II

ಬಕಿಂಗ್​ ಹ್ಯಾಮ್​​ ಅರಮನೆ ರಾಜ ಮತ್ತು ಇತರರು ರಾಜಮನೆತನದ ಸದಸ್ಯರು ರಾಣಿಯ ಅಂತ್ಯಕ್ರಿಯೆಯ ನಂತರ ಏಳು ದಿನಗಳವರೆಗೆ ಶೋಕಾಚರಣೆ ಆಚರಿಸುತ್ತಾರೆ. ರಾಜರು ಮತ್ತು ಸರ್ಕಾರದ ಮುಖ್ಯಸ್ಥರು ಪಾಲ್ಗೊಳ್ಳುವ ಅಂತ್ಯಕ್ರಿಯೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.

King Charles III starts reign as mourning begins for late queen
73 ವರ್ಷದ ಚಾರ್ಲ್ಸ್​​​​ ಆಗಲಿದ್ದಾರೆ ಬ್ರಿಟನ್​​​​ನ ಹೊಸ ರಾಜ

By

Published : Sep 9, 2022, 9:10 PM IST

ಲಂಡನ್​:ರಾಣಿ ಎಲಿಜಬೆತ್ II ಸಾವಿನಿಂದಾಗಿ ಬ್ರಿಟನ್ ಶೋಕ ಸಾಗರದಲ್ಲಿ ಮುಳುಗಿದೆ. ಕಿಂಗ್ ಚಾರ್ಲ್ಸ್ III ಬ್ರಿಟನ್​​​ ರಾಜನಾಗಲಿದ್ದಾರೆ. ಇದೇ ಗಳಿಗೆಯಲ್ಲಿ ಚಾರ್ಲ್ಸ್​​ ತಮ್ಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ರಾಣಿಯ 70 ವರ್ಷಗಳ ಆಳ್ವಿಕೆಯನ್ನು ಅವರು ಕೊಂಡಾಡಿದ್ದಾರೆ. ವ್ಯಾಪಕವಾಗಿ ಅವರಿಗಿದ್ದ ಗೌರವ ಮತ್ತು ಆಳವಾದ ಪ್ರೀತಿಯನ್ನು ಹಾಗೆಯೇ ಕಾಪಾಡಿಕೊಳ್ಳಲಾಗುವುದು ಎಂದು ಚಾರ್ಲ್ಸ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಬ್ರಿಟನ್​​ ರಾಜನಾಗಿ 73 ವರ್ಷದ ಚಾರ್ಲ್ಸ್​​ ಬಾಲ್ಮೋರಲ್‌ನಿಂದ ಲಂಡನ್‌ಗೆ ಮರಳುತ್ತಿದ್ದಾರೆ. ರಾಣಿಯ ಅಂತ್ಯಕ್ರಿಯೆಗೂ ಮೊದಲು ಅವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಕಿಂಗ್​ ಹ್ಯಾಮ್​​ ಅರಮನೆ ರಾಜ ಮತ್ತು ಇತರರು ರಾಜಮನೆತನದ ಸದಸ್ಯರು ರಾಣಿಯ ಅಂತ್ಯಕ್ರಿಯೆಯ ನಂತರ ಏಳು ದಿನಗಳವರೆಗೆ ವಿಸ್ತೃತ ಶೋಕಾಚರಣೆ ಆಚರಿಸುತ್ತಾರೆ.

ರಾಜರು ಮತ್ತು ಸರ್ಕಾರದ ಮುಖ್ಯಸ್ಥರು ಪಾಲ್ಗೊಳ್ಳುವ ಅಂತ್ಯಕ್ರಿಯೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಸೆಪ್ಟೆಂಬರ್ 19 ಸೋಮವಾರದಂದು ರಾಣಿಯ ಅಂತ್ಯ ಕ್ರಿಯೆಯ ದಿನಾಂಕ ಘೋಷಣೆ ಆಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ವಿಶ್ವಾದ್ಯಂತ ರಾಣಿಯ ಸ್ಮರಣೆ ಗೌರವ ಸಲ್ಲಿಕೆ: ರಷ್ಯಾ ಮತ್ತು ಚೀನಾ ಸೇರಿದಂತೆ ಎಲ್ಲಡೆಯಿಂದ ರಾಣಿಗೆ ಗೌರವ ಸಿಕ್ಕಿದೆ. ನ್ಯೂಯಾರ್ಕ್‌ನ ಎಂಪೈರ್ ಸ್ಟೇಟ್ ಕಟ್ಟಡವು ಸೂರ್ಯಾಸ್ತದ ನಂತರ ಬೆಳ್ಳಿ ಮತ್ತು ರಾಯಲ್ ಕೆನ್ನೇರಳೆ ಬಣ್ಣದಲ್ಲಿ ಪ್ರಕಾಶಿಸುವ ಮೂಲಕ ರಾಣಿ ಅಗಲಿಕೆಗೆ ನಮನ ಸಲ್ಲಿಕೆ ಮಾಡಲಾಗಿದೆ.

ಇನ್ನು ಪ್ಯಾರಿಸ್‌ನ ಐಫೆಲ್ ಟವರ್​​ನಲ್ಲಿ ರಾಣಿ ನಿಧನರಾಗಿರುವ ಹಿನ್ನೆಲೆ ಅವರ ಗೌರವಾರ್ಥವಾಗಿ ದೀಪಗಳನ್ನು ಮಂದಗೊಳಿಸಿ ಮೌನಾಚರಣೆ ಮಾಡಲಾಯಿತು . ಯುಎಸ್ ಅಧ್ಯಕ್ಷ ಜೋ ಬೈಡನ್​​ ಅವರು ಕಳೆದ ವರ್ಷ ವಿಂಡ್ಸರ್ ಕ್ಯಾಸಲ್‌ನಲ್ಲಿ ಚಹಾಕೂಟ ಆಯೋಜಿಸಿದ್ದನ್ನು ಸ್ಮರಿಸಿದರು. ಅವರೊಬ್ಬ"ರಾಜಕೀಯ ಮಹಿಳೆ" ಎಂದು ಬಣ್ಣಿಸಿದರು. ಸೆಪ್ಟೆಂಬರ್ 11, 2001 ರ ದಾಳಿಯ ನಂತರ ಅಮೆರಿಕ ಶೋಕ ಸಾಗರದಲ್ಲಿ ಮುಳುಗಿದ್ದಾಗ ಅವರು ನೀಡಿದ ಬೆಂಬಲ, ಸಾಂತ್ವನದ ರೀತಿಯನ್ನು ಸ್ಮರಿಸಿದರು.

ರಾಣಿಗೆ ವಿವಿಧ ಪತ್ರಿಕೆಗಳಿಂದ ಶೀರ್ಷಿಕೆ ನಮನ: ಡೇಲಿ ಟೆಲಿಗ್ರಾಫ್ ಪತ್ರಿಕೆ ತನ್ನ ಮುಖಪುಟದ ಶೀರ್ಷಿಕೆಗಾಗಿ ಅಂದು ಅವರು ಆಡಿದ್ದ ಪದಗಳನ್ನು ಆಯ್ಕೆ ಮಾಡಿದೆ: ದುಃಖವು ನಾವು ಪ್ರೀತಿಗೆ ಪಾವತಿಸುವ ಬೆಲೆ ಎಂಬ ಶೀರ್ಷಿಕೆ ನೀಡುವ ಮೂಲಕ ರಾಣಿಗೆ ವಿಶೇಷ ನಮನ ಸಲ್ಲಿಸಿದೆ.

ಇತರ ಬ್ರಿಟಿಷ್ ಪತ್ರಿಕೆಗಳು ಸಹ ವಿಶೇಷ ಆವೃತ್ತಿಗಳನ್ನು ಮುದ್ರಿಸಿವೆ. "ನಮ್ಮ ಹೃದಯಗಳು ಮುರಿದು ಹೋಗಿವೆ" ಎಂಬ ಶೀರ್ಷಿಕೆಯನ್ನು ಜನಪ್ರಿಯ ಟ್ಯಾಬ್ಲಾಯ್ಡ್ ಡೈಲಿ ಮೇಲ್ ನೀಡಿದೆ. ಇನ್ನು ಮಿರರ್ ಧನ್ಯವಾದಗಳು ಎಂಬ ಸರಳ ಹೆಡ್​ಲೈನ್​ ನೀಡಿ ರಾಣಿಗೆ ಅಂತಿಮ ವಿದಾಯ ಹೇಳಿದೆ.

ರಾಜ ಚಾರ್ಲ್ಸ್​ ಅವರ ಮುಂದಿನ ಕೆಲಸವೇನು?; ಚಾರ್ಲ್ಸ್ ಅವರು ವಿಂಡ್ಸರ್ ಕ್ಯಾಸಲ್‌ನಲ್ಲಿರುವ ಕಿಂಗ್ ಜಾರ್ಜ್ VI ಸ್ಮಾರಕ ಪ್ರಾರ್ಥನಾ ಮಂದಿರದಲ್ಲಿ ಅಂತ್ಯಕ್ರಿಯೆ ನೆರವೇರಿಸುವ ಮೊದಲು ಆ ಬಗೆಗಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಗನ್ ಸೆಲ್ಯೂಟ್‌: ರಾಣಿಯ ಜೀವನದ ಪ್ರತಿ ವರ್ಷಕ್ಕೆ ಒಂದು ಸುತ್ತು ಗುಂಡುಗಳನ್ನು ಹಾರಿಸುವ ಮೂಲಕ ಅಂತಿಮ ನಮನ ಸಲ್ಲಿಸಲಾಗುತ್ತದೆ. ರಾಣಿಯ ನಿಧನದ ಹಿನ್ನೆಯಲ್ಲಿ ಬ್ರಿಟನಾದ್ಯಂತ ಅರ್ಧ-ಮಟ್ಟದಲ್ಲಿ ಧ್ವಜ ಹಾರಿಸುವ ಮೂಲಕ ಗೌರವ ಸಲ್ಲಿಕೆ ಮಾಡಲಾಗಿದೆ. ಬ್ರಿಟನ್​ ಸಂಸತ್​ನಲ್ಲಿ ಎರಡು ದಿನ ವಿಶೇಷ ಅಧಿವೇಶನ ನಡೆಯಲಿದ್ದು ರಾಣಿಗೆ ನಮನ ಸಲ್ಲಿಕೆ ಮಾಡಲಾಗುತ್ತದೆ.

ಇದನ್ನು ಓದಿ:ಸುದೀರ್ಘ ಅವಧಿಗೆ ಬ್ರಿಟನ್ ಆಳಿದ​ ರಾಣಿ ಎಲಿಜಬೆತ್​ II ನಿಧನ

ABOUT THE AUTHOR

...view details