ಕರ್ನಾಟಕ

karnataka

ETV Bharat / international

ದಕ್ಷಿಣ ಕೊರಿಯಾಕ್ಕೆ ಪರಮಾಣು ಶಸ್ತ್ರಾಸ್ತ್ರದ ಬೆದರಿಕೆ ಹಾಕಿದ ಕಿಮ್ ಜಾಂಗ್ ಉನ್ ಸಹೋದರಿ - ದಕ್ಷಿಣ ಕೊರಿಯಾಕ್ಕೆ ಪರಮಾಣು ಶಸ್ತ್ರಾಸ್ತ್ರದ ಬೆದರಿಕೆ ಹಾಕಿದ ಕಿಮ್ ಜಾಂಗ್ ಉನ್ ಸಹೋದರಿ

ದಕ್ಷಿಣ ಕೊರಿಯಾದ ಕಡೆಗೆ ನಾವು ಒಂದೇ ಒಂದು ಬುಲೆಟ್ ಅಥವಾ ಶೆಲ್ ಅನ್ನು ಸಹ ಹಾರಿಸುವುದಿಲ್ಲ. ಏಕೆಂದರೆ ನಾವು ಅದನ್ನು ನಮ್ಮ ಸಶಸ್ತ್ರ ಪಡೆಗಳಿಗೆ ಸರಿಸಾಟಿ ಎಂದು ಎಂದಿಗೂ ಪರಿಗಣಿಸುವುದಿಲ್ಲ ಎಂದು ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೊ ಜೊಂಗ್ ಹೇಳಿದ್ದಾರೆ.

ದಕ್ಷಿಣ ಕೊರಿಯಾಕ್ಕೆ ಪರಮಾಣು ಶಸ್ತ್ರಾಸ್ತ್ರದ ಬೆದರಿಕೆ ಹಾಕಿದ ಕಿಮ್ ಜಾಂಗ್ ಉನ್ ಸಹೋದರಿ
ದಕ್ಷಿಣ ಕೊರಿಯಾಕ್ಕೆ ಪರಮಾಣು ಶಸ್ತ್ರಾಸ್ತ್ರದ ಬೆದರಿಕೆ ಹಾಕಿದ ಕಿಮ್ ಜಾಂಗ್ ಉನ್ ಸಹೋದರಿ

By

Published : Apr 5, 2022, 4:40 PM IST

ಪ್ಯೊಂಗ್‌ಯಾಂಗ್ (ಉತ್ತರ ಕೊರಿಯಾ): ದಕ್ಷಿಣ ಕೊರಿಯಾ ಮಿಲಿಟರಿ ಘರ್ಷಣೆಯನ್ನು ಪ್ರಾರಂಭಿಸಿದರೆ ತನ್ನ ದೇಶವು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ ಎಂದು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಸಹೋದರಿ ಕಿಮ್ ಯೊ ಜೊಂಗ್ ಹೇಳಿದ್ದಾರೆ ಎಂದು ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ (ಕೆಸಿಎನ್‌ಎ) ವರದಿ ಮಾಡಿದೆ. ದಕ್ಷಿಣ ಕೊರಿಯಾ ಮಿಲಿಟರಿ ಮುಖಾಮುಖಿಯಲ್ಲಿ ತೊಡಗಿದರೆ, ನಮ್ಮ ಯುದ್ಧ ಪರಮಾಣು ಪಡೆಗಳು ಅನಿವಾರ್ಯವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾಗುತ್ತದೆ ಎಂದು ಜೊಂಗ್ ಎಚ್ಚರಿಕೆ ರವಾನಿಸಿದ್ದಾರೆ.

ದಕ್ಷಿಣ ಕೊರಿಯಾದ ಕಡೆಗೆ ನಾವು ಒಂದೇ ಒಂದು ಬುಲೆಟ್ ಅಥವಾ ಶೆಲ್ ಅನ್ನು ಸಹ ಹಾರಿಸುವುದಿಲ್ಲ. ಏಕೆಂದರೆ ನಾವು ಅದನ್ನು ನಮ್ಮ ಸಶಸ್ತ್ರ ಪಡೆಗಳಿಗೆ ಸರಿಸಾಟಿ ಎಂದು ಎಂದಿಗೂ ಪರಿಗಣಿಸುವುದಿಲ್ಲ. ನಮ್ಮನ್ನು ಪ್ರಚೋದಿಸದಿದ್ದರೆ, ಮುಂಚಿತವಾಗಿ ನಾವು ಎಂದಿಗೂ ದಾಳಿ ಮಾಡುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ದಕ್ಷಿಣ ಕೊರಿಯಾದ ಸೇನೆಯು ನಮ್ಮ ವಿರುದ್ಧ ಯಾವುದೇ ಮಿಲಿಟರಿ ಕ್ರಮ ತೆಗೆದುಕೊಳ್ಳದ ಹೊರತು, ನಾವು ಇದನ್ನು ನಮ್ಮ ದಾಳಿಯ ಗುರಿಯಾಗಿ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿರುವುದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: ಸಂಸದೀಯ ಸಭೆ ನಡೆಸಿದ ಮೋದಿ : ನಾಯಕರಿಗೆ ನೀಡಿದ ಸೂಚನೆಗಳಿವು!

ಖಂಡಾಂತರ ಕ್ಷಿಪಣಿಗಳನ್ನು ಪೂರ್ಣ ಪ್ರಮಾಣದಲ್ಲಿ ಕಳೆದ ತಿಂಗಳು ಉಡಾವಣೆ ಮಾಡುವ ಮೂಲಕ ಶಸ್ತ್ರಾಸ್ತ್ರ ಪರೀಕ್ಷೆಯ ಮೇಲೆ ನಿರ್ಬಂಧಗಳನ್ನು ಉತ್ತರ ಕೊರಿಯಾ ಉಲ್ಲಂಘನೆ ಮಾಡಿತ್ತು. ಅದರ ಬೆನ್ನಲ್ಲೇ ಎರಡೂ ನೆರೆಯ ದೇಶಗಳ ನಡುವೆ ಮತ್ತೆ ಉದ್ವಿಗ್ನತೆ ನಿರ್ಮಾಣವಾಗಿದೆ.

ABOUT THE AUTHOR

...view details