ಸಿಯೋಲ್:ನೌಕಾಪಡೆಯ ಹಡಗಿನಿಂದ ಕಾರ್ಯತಂತ್ರದ ಕ್ರೂಸ್ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆಯನ್ನು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ವೀಕ್ಷಿಸಿದರು ಎಂದು ರಾಜ್ಯ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
ದಕ್ಷಿಣ ಕೊರಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಜಂಟಿ ಮಿಲಿಟರಿ ಅಭ್ಯಾಸದ ಆರಂಭಕ್ಕೆ ಮುಂಚಿತವಾಗಿ ಕಿಮ್ ಕ್ಷಿಪಣಿ ಪರೀಕ್ಷೆಯ ಮೇಲ್ವಿಚಾರಣೆ ಮಾಡಿದರು. ಉತ್ತರ ಕೊರಿಯಾ ಇದನ್ನು ಆಕ್ರಮಣ ಪೂರ್ವಾಭ್ಯಾಸವೆಂದು ಹೇಳಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್ ನಾಯಕರು ತಮ್ಮ ಭದ್ರತೆ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸಲು ಒಪ್ಪಿಕೊಂಡ ಮೂರು ದಿನಗಳ ನಂತರ ಕ್ಷಿಪಣಿ ಪರೀಕ್ಷೆಗಳ ಕುರಿತು ಉತ್ತರ ಕೋರಿಯಾದಿಂದ ವರದಿ ಬಂದಿದೆ.
ಜಪಾನ್ ಸಮುದ್ರ ಎಂದೂ ಕರೆಯಲ್ಪಡುವ ಪೂರ್ವ ಸಮುದ್ರದಲ್ಲಿ ಕಿಮ್ "ಸ್ಟ್ರಾಟೆಜಿಕ್ ಕ್ರೂಸ್ ಕ್ಷಿಪಣಿಗಳನ್ನು" ಉಡಾವಣೆ ಮಾಡುವ ಡ್ರಿಲ್ ಅನ್ನು ಕಿಮ್ ವೀಕ್ಷಿಸಿದರು ಎಂದು ದೇಶದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪೂರ್ವ ಕರಾವಳಿಯಲ್ಲಿ ನೌಕಾಪಡೆಯ ಫ್ಲೋಟಿಲ್ಲಾದ ತಪಾಸಣೆ ಭೇಟಿಯ ಸಂದರ್ಭದಲ್ಲಿ, ಕಿಮ್ ಶಸ್ತ್ರಾಸ್ತ್ರಗಳು ಮತ್ತು ಯುದ್ಧದ ಸಿದ್ಧತೆಗಳನ್ನು ಪರಿಶೀಲಿಸಲು ಗಸ್ತು ದೋಣಿ ಏರಿದರು. ನಂತರ ಅವರು ಅದರ ನಾವಿಕರೊಂದಿಗೆ ಕಾರ್ಯತಂತ್ರದ ಕ್ರೂಸ್ ಕ್ಷಿಪಣಿಗಳನ್ನು ಉಡಾವಣೆ ಮಾಡುವ ಪರೀಕ್ಷಾರ್ಥ ಪ್ರಯೋಗದ ಸಿದ್ಧತೆಯನ್ನು ವೀಕ್ಷಿಸಿದರು ಎಂದು ಅಧಿಕೃತ ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರದ ನೌಕಾಪಡೆಗಾಗಿ ಶಕ್ತಿಯುತ ಯುದ್ಧನೌಕೆಗಳನ್ನು ನಿರ್ಮಿಸಲು ಮತ್ತು ಹಡಗು ಬೋರ್ಡ್ ಮತ್ತು ನೀರೊಳಗಿನ ಶಸ್ತ್ರಾಸ್ತ್ರಗಳ ವ್ಯವಸ್ಥೆಯನ್ನು ಆಧುನೀಕರಿಸುವ ಪ್ರಯತ್ನಗಳನ್ನು ಉತ್ತೇಜಿಸುವುದಾಗಿ ಕಿಮ್ ಹೇಳಿದರು. ಶಸ್ತ್ರಾಸ್ತ್ರಗಳ ಸಂಖ್ಯಾತ್ಮಕ ಅಥವಾ ತಾಂತ್ರಿಕ ಶ್ರೇಷ್ಠತೆಗಿಂತ ಇದು ಮುಖ್ಯವಾಗಿದೆ ಎಂದು ಅವರು ದೇಶದ ನಾವಿಕರಿಗೆ ಕಿಮ್ ಇದೇ ವೇಳೆ ಕರೆ ನೀಡಿದರು.
ಅಮೆರಿಕ -ದಕ್ಷಿಣ ಕೊರಿಯಾದ ಮಿಲಿಟರಿ ತರಬೇತಿಗೆ ಪ್ರತಿಕ್ರಿಯೆಯಾಗಿ ಉತ್ತರ ಕೊರಿಯಾ ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ಪುನರಾರಂಭಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ದಕ್ಷಿಣ ಕೊರಿಯಾದ ಮಿಲಿಟರಿಗಳು ದೊಡ್ಡ ಪ್ರಮಾಣದ ಫೀಲ್ಡ್ ಅಭ್ಯಾಸ ನಡೆಸಲು ಯೋಜಿಸುತ್ತಿವೆ. ಕೊರಿಯಾದ ಅಧಿಕಾರಿಗಳು ಈ ಅಭ್ಯಾಸ ರಕ್ಷಣಾತ್ಮಕವಾಗಿವೆ ಮತ್ತು ಉತ್ತರದ ಮೇಲೆ ದಾಳಿ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ತಿಳಿಸಿವೆ.
100ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳ ಪರೀಕ್ಷೆ:2022ರ ಪ್ರಾರಂಭದಿಂದ, ಉತ್ತರ ಕೊರಿಯಾ 100ಕ್ಕೂ ಹೆಚ್ಚು ಶಸ್ತ್ರಾಸ್ತ್ರ ಪರೀಕ್ಷೆಗಳನ್ನು ನಡೆಸಿತು. ಅವುಗಳಲ್ಲಿ ಕೆಲವು ಪರಮಾಣು-ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಯುಎಸ್ ಮುಖ್ಯ ಭೂಭಾಗ ಮತ್ತು ಅದರ ಮಿತ್ರರಾಷ್ಟ್ರಗಳಾದ ದಕ್ಷಿಣ ಕೊರಿಯಾ ಮತ್ತು ಜಪಾನ್ ಅನ್ನು ಹೊಡೆಯಲು ವಿನ್ಯಾಸಗೊಳಿಸಲಾಗಿದೆ ಎನ್ನಲಾಗಿತ್ತು.
ಕ್ಯಾಂಪ್ ಡೇವಿಡ್‌ನಲ್ಲಿ ನಡೆದ ಶೃಂಗಸಭೆಯಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಮತ್ತು ಜಪಾನಿನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರು ಉತ್ತರ ಕೊರಿಯಾದ ಮೇಲಿನ ಕ್ಷಿಪಣಿ ಎಚ್ಚರಿಕೆಯ ದತ್ತಾಂಶಗಳ ಹಂಚಿಕೆಯನ್ನು ವರ್ಷಾಂತ್ಯದೊಳಗೆ ಕಾರ್ಯಗತಗೊಳಿಸಲು ಮತ್ತು ವಾರ್ಷಿಕ ತ್ರಿಪಕ್ಷೀಯ ಸಭೆ ನಡೆಸಲು ಉದ್ದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದು ಮೂರು ದೇಶಗಳು ನಡೆಸಿದ ಮೊಟ್ಟಮೊದಲ ಅದ್ವಿತೀಯ ಶೃಂಗಸಭೆಯಾಗಿದೆ ಮತ್ತು ಉತ್ತರ ಕೊರಿಯಾದ ಪರಮಾಣು ಮತ್ತು ಕ್ಷಿಪಣಿ ಬೆದರಿಕೆಗಳನ್ನು ಎದುರಿಸಲು ವರ್ಧಿತ ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ಸಹಕಾರವನ್ನು ಮುಂದುವರಿಸಲು ಬದ್ಧರಾಗಿದ್ದೇವೆ ಎಂದು ನಾಯಕರು ಈ ಸಭೆಯಲ್ಲಿ ಹೇಳಿದ್ದರು. ತಮ್ಮ ಭದ್ರತಾ ಸಹಕಾರವನ್ನು ಬಲಪಡಿಸಲು ಮೂರು ದೇಶಗಳ ಒತ್ತಡವು ತನ್ನದೇ ಆದ ಮಿಲಿಟರಿ ಸಾಮರ್ಥ್ಯವನ್ನು ಬಲಪಡಿಸಲು ಒತ್ತಾಯಿಸುತ್ತಿದೆ ಎಂದು ಉತ್ತರ ಕೊರಿಯಾ ಹೇಳಿದೆ.
ಇದನ್ನೂ ಓದಿ:ಉತ್ತರ ಕೊರಿಯಾ ದಾಳಿಗೆ ದಕ್ಷಿಣ ಕೊರಿಯಾ ವಾರ್ನಿಂಗ್