ಸಿಯೋಲ್ : ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್-ಉನ್ ಅವರು ರಷ್ಯಾದೊಂದಿಗೆ ನಿಕಟವಾದ ಕಾರ್ಯತಂತ್ರದ ನಿಮಿತ್ತ ಬಾಂಧವ್ಯ ಹೊಂದುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಕೊರಿಯಾದ ಸರ್ಕಾರಿ ಮಾಧ್ಯಮ ಸೋಮವಾರ ತಿಳಿಸಿದೆ. ರಷ್ಯಾ ದಿನಾಚರಣೆಯ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕಳುಹಿಸಿದ ಅಭಿನಂದನಾ ಸಂದೇಶದಲ್ಲಿ ಕಿಮ್ ಜೊಂಗ್-ಉನ್ ರಷ್ಯಾದೊಂದಿಗೆ ನಿಕಟ ಸಂಬಂಧ ಏರ್ಪಡಿಸುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ರಷ್ಯಾ ದಿನದ ಸಂದರ್ಭದಲ್ಲಿ ಕಳುಹಿಸಿದ ಸಂದೇಶದಲ್ಲಿ, ಉತ್ತರ ಕೊರಿಯಾ ಮತ್ತು ರಷ್ಯಾದ ನಡುವಿನ ಸ್ನೇಹ ಸಂಬಂಧವು ಅಮೂಲ್ಯವಾದ ಕಾರ್ಯತಂತ್ರದ ಭಾಗವಾಗಿದೆ ಮತ್ತು ಅಂಥ ಸಹಕಾರ ಸಂಬಂಧಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಲು ನಮ್ಮ ದೇಶವು ಪ್ರಯತ್ನಗಳನ್ನು ಮಾಡುತ್ತದೆ ಎಂದು ಕಿಮ್ ಹೇಳಿದ್ದಾರೆ. 1990 ರಲ್ಲಿ ರಷ್ಯಾದ ಸೋವಿಯತ್ ಫೆಡರೇಟಿವ್ ಸಮಾಜವಾದಿ ಗಣರಾಜ್ಯದ ಸಾರ್ವಭೌಮತ್ವದ ಘೋಷಣೆಯ ಅಂಗೀಕಾರದ ದಿನವಾಗಿ ಜೂನ್ 12 ರಂದು ರಷ್ಯಾ ದಿನವನ್ನು ಆಚರಿಸಲಾಗುತ್ತದೆ.
ಮಾಸ್ಕೋ ಸಾರ್ವಭೌಮತ್ವ ಮತ್ತು ಭದ್ರತೆಯನ್ನು ಕಸಿದುಕೊಳ್ಳುವ ವಿರೋಧಿ ಪಡೆಗಳನ್ನು ಎದುರಿಸುವ ರಷ್ಯಾ ಜನರ ಹೋರಾಟವು ಹೊಸ ನಿರ್ಣಾಯಕ ಹಂತದಲ್ಲಿದೆ ಮತ್ತು ಈ ಸಂದರ್ಭದಲ್ಲಿ ತಮ್ಮ ದೇಶವು ರಷ್ಯಾಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಒಗ್ಗಟ್ಟಾಗಿ ನಿಲ್ಲಲಿದೆ ಎಂದು ಕಿಮ್ ಹೇಳಿದರು. ರಷ್ಯಾ ಮತ್ತು ಉಕ್ರೇನ್ ಮಧ್ಯದ ಸಮರದ ಈ ಸಂದರ್ಭದಲ್ಲಿ ಕಿಮ್ ರಷ್ಯಾದ ಪರವಾಗಿ ನಿಂತಿರುವುದು ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ಯುದ್ಧದಲ್ಲಿ ಬಳಸಲು ಮಾಸ್ಕೋಗೆ ಪ್ಯೊಂಗ್ಯಾಂಗ್ ಶಸ್ತ್ರಾಸ್ತ್ರಗಳನ್ನು ಒದಗಿಸಿದೆ ಎಂಬ ಆರೋಪದ ನಡುವೆ, ಯುದ್ಧದ ಬಗ್ಗೆ ಅಂತಾರಾಷ್ಟ್ರೀಯ ಖಂಡನೆಗಳ ಹೊರತಾಗಿಯೂ ಉತ್ತರ ಕೊರಿಯಾವು ರಷ್ಯಾದೊಂದಿಗೆ ತನ್ನ ನಿಕಟ ಸಂಬಂಧವನ್ನು ಬಲಪಡಿಸುತ್ತಿದೆ.