ಕರ್ನಾಟಕ

karnataka

ETV Bharat / international

ರಷ್ಯಾಗೆ ತೆರಳಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ - ಕಿಮ್ ಜಾಂಗ್ ಉನ್

ಕಿಮ್ ಜಾಂಗ್ ಉನ್ ಮತ್ತು ವ್ಲಾಡಿಮಿರ್ ಪುಟಿನ್ ರಷ್ಯಾದಲ್ಲಿ ಸಭೆ ನಡೆಸಲು ಸಜ್ಜಾಗಿದ್ದಾರೆ ಎಂದು ಉಭಯ ರಾಷ್ಟ್ರಗಳು ಹೇಳಿಕೆಯಲ್ಲಿ ತಿಳಿಸಿವೆ.

Kim Jong un
ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್

By ETV Bharat Karnataka Team

Published : Sep 12, 2023, 1:25 PM IST

ಸಿಯೋಲ್:ಮಹತ್ವದ ಬೆಳವಣಿಗೆಯಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಸುವ ನಿರೀಕ್ಷೆ ಇದೆ. ಈ ಭೇಟಿಯ ಮೂಲಕ ರಷ್ಯಾದೊಂದಿಗೆ ಸಂಭವನೀಯ ಶಸ್ತ್ರಾಸ್ತ್ರ ಒಪ್ಪಂದ ಏರ್ಪಡುವ ಕುರಿತು ಪಾಶ್ಚಿಮಾತ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ.

ಉತ್ತರ ಕೊರಿಯಾದ ಅಧಿಕೃತ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್‌ಎ) ಮಂಗಳವಾರ ಮುಂಜಾನೆ ಕಿಮ್ ಅವರು ಉತ್ತರದ ಆಡಳಿತ ಪಕ್ಷ ಮತ್ತು ಸಶಸ್ತ್ರ ಪಡೆಗಳ ಪ್ರಮುಖ ಅಧಿಕಾರಿಗಳೊಂದಿಗೆ ರಾಜಧಾನಿ ಪ್ಯೊಂಗ್ಯಾಂಗ್‌ನಿಂದ ರೈಲಿನಲ್ಲಿ ರಷ್ಯಾಕ್ಕೆ ತೆರಳಿದ್ದಾರೆ ಎಂದು ಖಚಿತಪಡಿಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ಸರ್ಕಾರಿ ಒಡೆತನದ ಮಾಧ್ಯಮ ಫೋಟೋಗಳು, ಕಿಮ್ ಗೌರವ ಸಿಬ್ಬಂದಿ ಮತ್ತು ನಾಗರಿಕರ ಗುಂಪಿನ ಹಿಂದೆ ರಾಷ್ಟ್ರೀಯ ಧ್ವಜ ಮತ್ತು ಹೂವುಗಳನ್ನು ಹಿಡಿದುಕೊಂಡು ಪ್ಯೊಂಗ್ಯಾಂಗ್‌ನಲ್ಲಿ ನಿಲ್ದಾಣದಿಂದ ಹೊರಡುವ ಮುನ್ನ, ಹಸಿರು ಮತ್ತು ಹಳದಿ ಶಸ್ತ್ರಸಜ್ಜಿತ ರೈಲಿನಿಂದ ಕೈ ಬೀಸುತ್ತಿರುವುದನ್ನು ತೋರಿಸಿದೆ.

ರಷ್ಯಾದ ಸುದ್ದಿ ಸಂಸ್ಥೆಯ ಪ್ರಕಾರ, ಪುಟಿನ್ ಆಹ್ವಾನದ ಮೇರೆಗೆ ಕಿಮ್ ರಷ್ಯಾಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಉತ್ತರ ಕೊರಿಯಾದ ರಾಜ್ಯ ಮಾಧ್ಯಮವು ಬಿಡುಗಡೆ ಮಾಡಿದ ಫೋಟೋಗಳು ಕಿಮ್ ಅವರೊಂದಿಗೆ ಪ್ಯೊಂಗ್ಯಾಂಗ್‌ನ ವಿದೇಶಾಂಗ ಸಚಿವ ಚೋ ಸೋನ್-ಹುಯಿ ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳಾದ ರಿ ಪ್ಯೊಂಗ್-ಚೋಲ್ ಮತ್ತು ಪಾಕ್ ಜೊಂಗ್-ಚೋನ್ ಜೊತೆಯಲ್ಲಿದ್ದಾರೆ.

ಪುಟಿನ್ ಮತ್ತು ಕಿಮ್ ತಮ್ಮ ನಿಯೋಗಗಳೊಂದಿಗೆ ಮಾತುಕತೆ ನಡೆಸುತ್ತಾರೆ. ಅಗತ್ಯವಿದ್ದರೆ ಒಬ್ಬರನ್ನೊಬ್ಬರು ಭೇಟಿ ಮಾಡಬಹುದು. ಕಿಮ್‌ಗಾಗಿ ಪುಟಿನ್ ಅಧಿಕೃತ ಭೋಜನ ಕೂಟ ಆಯೋಜಿಸಲಿದ್ದಾರೆ. ಮಾತುಕತೆಗಳು ದ್ವಿಪಕ್ಷೀಯ ಸಂಬಂಧಗಳ ಮೇಲೆ ಕೇಂದ್ರೀಕರಿಸುತ್ತವೆ. ನಮ್ಮ ನೆರೆಹೊರೆಯವರಂತೆ, ನಾವು ಉತ್ತಮ, ಪರಸ್ಪರ ಪ್ರಯೋಜನಕಾರಿ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಬಾಧ್ಯತೆ ಹೊಂದಿದ್ದೇವೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.

ರಷ್ಯಾದ ಸುದ್ದಿ ಸಂಸ್ಥೆಯ ಪ್ರಕಾರ, ಬುಧವಾರದವರೆಗೆ ನಡೆಯುವ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಸೋಮವಾರ ಪೂರ್ವ ರಷ್ಯಾದ ವ್ಲಾಡಿವೋಸ್ಟಾಕ್ ನಗರಕ್ಕೆ ಆಗಮಿಸಿದ್ದಾರೆ. ಪ್ಯೊಂಗ್ಯಾಂಗ್‌ ಉತ್ತರಕ್ಕೆ ಸುಮಾರು 425 ಮೈಲಿ ದೂರ (680 ಕಿಲೋಮೀಟರ್) ಇರುವ ಈ ನಗರ 2019ರಲ್ಲಿ ಕಿಮ್‌ ಅವರೊಂದಿಗೆ ಪುಟಿನ್ ಅವರ ಮೊದಲ ಭೇಟಿಯ ಸ್ಥಳವಾಗಿದೆ.

ಇನ್ನು ಕಿಮ್ ಜಾಂಗ್ ಉನ್ ವಿದೇಶ ಪ್ರಯಣ ಕೈಗೊಳ್ಳುವುದು ಅತ್ಯಂತ ವಿರಳ. ತನ್ನ 12 ವರ್ಷಗಳ ಅಧಿಕಾರದ ಅವಧಿಯಲ್ಲಿ ಅವರು ಕೇವಲ 7 ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಅದರಲ್ಲಿ 4 ಬಾರಿ ತನ್ನ ರಾಜಕೀಯ ಮಿತ್ರ ರಾಷ್ಟ್ರ ಚೀನಾಗೆ ಪ್ರವಾಸ ಕೈಗೊಂಡಿದ್ದಾರೆ. ಕಳೆದ 4 ವರ್ಷಗಳ ಬಳಿಕ ಅಂದರೆ ಸಾಂಕ್ರಾಮಿಕ ರೋಗದ ನಂತರ ಕಿಮ್ ಜಾಂಗ್ ಉನ್‌ನ ಮೊದಲ ವಿದೇಶಿ ಪ್ರವಾಸ ಇದಾಗಿದೆ.

ಕಿಮ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿಂದಿನ ಸಭೆಗಳಿಗೆ ಅವರು ತಮ್ಮ ವೈಯಕ್ತಿಕ ರೈಲನ್ನು ಬಳಸಿದ್ದಾರೆ. ಏಕೆಂದರೆ ಕಿಮ್ ವಿಮಾನ ಪ್ರಯಾಣದ ಬಗ್ಗೆ ಭಯಪಡುತ್ತಾರೆ ಎನ್ನಲಾಗಿದೆ. ಅವರು ಹೆಚ್ಚಾಗಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಈ ರೈಲನ್ನು ಸ್ಟಾಲಿನ್ ಅವರು ಕಿಮ್ ಅವರ ಅಜ್ಜ ಕಿಮ್ ಇಲ್ ಸುಂಗ್ ಅವರಿಗೆ 1949ರಲ್ಲಿ ಉಡುಗೊರೆಯಾಗಿ ನೀಡಿದರು. ಇದು ಅನೇಕ ಕೋಚ್‌ಗಳನ್ನು ಹೊಂದಿರುವ ಅಂತರ-ಸಂಪರ್ಕ ರೈಲು. ಅಲ್ಲದೇ ಅವರ ಕುಟುಂಬದ ರಾಜವಂಶದ ಆಡಳಿತದ ಸಂಕೇತವಾಗಿದೆ.

ಇದನ್ನೂ ಓದಿ:ಉತ್ತರ ಕೊರಿಯಾ ಸ್ವಾತಂತ್ರ್ಯೋತ್ಸವಕ್ಕೆ ಚೀನಾ, ರಷ್ಯಾ ಪ್ರತಿನಿಧಿಗಳಿಗೆ ಆಹ್ವಾನ, ಪಾಶ್ಚಾತ್ಯ ರಾಷ್ಟ್ರಗಳಿಗೆ ಸಡ್ಡು?

ABOUT THE AUTHOR

...view details