ಕರ್ನಾಟಕ

karnataka

ETV Bharat / international

Khalistan radicals: ಅಮೆರಿಕದ ಭಾರತೀಯ ಕಾನ್ಸುಲೇಟ್‌ ಕಚೇರಿಗೆ ಬೆಂಕಿ ಹಚ್ಚಿದ ಖಲಿಸ್ತಾನಿ ಉಗ್ರರು: ವಿಡಿಯೋ - Indian Consulate in San Francisco

ಅಮೆರಿಕದಲ್ಲಿರುವ ಭಾರತೀಯ ಕಾನ್ಸುಲೇಟ್‌ಗೆ ಖಲಿಸ್ತಾನಿ ಉಗ್ರರು ಬೆಂಕಿ ಹಚ್ಚಿ ಉದ್ಧಟತನ ಮೆರೆದಿದ್ದಾರೆ. ಜೋ ಬೈಡನ್​ ಸರ್ಕಾರ ಘಟನೆಯನ್ನು ಖಂಡಿಸಿದ್ದು ತನಿಖೆಯ ಭರವಸೆ ನೀಡಿದೆ.

ಧೂತಾವಾಸಕ್ಕೆ ಬೆಂಕಿ ಹಚ್ಚಿದ ಖಲಿಸ್ತಾನಿ ಉಗ್ರರು
ಧೂತಾವಾಸಕ್ಕೆ ಬೆಂಕಿ ಹಚ್ಚಿದ ಖಲಿಸ್ತಾನಿ ಉಗ್ರರು

By

Published : Jul 4, 2023, 10:37 AM IST

ನವದೆಹಲಿ:ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್‌ ಕಚೇರಿಗೆ ಖಲಿಸ್ತಾನಿ ಬೆಂಬಲಿಗರು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಇದನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಮಧ್ಯರಾತ್ರಿ ಕಚೇರಿಗೆ ನುಗ್ಗಿದ ಖಲಿಸ್ತಾನಿಗಳು ಬೆಂಕಿ ಹಚ್ಚಿದ್ದಾರೆ. ಇದರ ವಿಡಿಯೋ ಸಹ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಜ್ವಾಲೆ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯವಾಗಿಲ್ಲ. ಇದು ಕಳೆದ 5 ತಿಂಗಳಲ್ಲಿ ನಡೆದ ಎರಡನೇ ಘಟನೆ. ಈ ಹಿಂದೆಯೂ ಕಟ್ಟಡಕ್ಕೆ ನುಗ್ಗಿದ್ದ ಖಲಿಸ್ತಾನಿಗಳು ಧ್ವಂಸ ಮಾಡಿ ದಾಂಧಲೆ ಎಬ್ಬಿಸಿದ್ದರು.

ಎಚ್ಚರಿಕೆ ನೀಡಿದ್ದ ಸಿಖ್​ ಸಂಘ:ಇದಕ್ಕೂ ಮೊದಲು ಖಲಿಸ್ತಾನಿ ಹೋರಾಟಗಾರರ ಸಂಘವಾದ ಸಿಖ್​ ಫಾರ್​ ಜಸ್ಟೀಸ್​ನ ಗುರುಪತ್ವಂತ್​ ಸಿಂಗ್​ ಪನ್ನು ಎಂಬಾತ ಈ ಹಿಂದೆಯೇ ಭಾರತೀಯ ಕಾನ್ಸುಲೇಟ್‌ ಕಚೇರಿಗೆ ಬೆಂಕಿ ಹಚ್ಚಲಾಗುವುದು ಎಂದು ಜೂನ್​ 30ರಂದು ಬೆದರಿಕೆ ಸಂದೇಶ ಕಳುಹಿಸಿದ್ದ.ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದೂ ಹೇಳಿದ್ದ. ಅದರಂತೆ ಘೋಷಿಸಿದ ಮರುದಿನವೇ ಅಂದರೆ, ಜುಲೈ 1ರಂದು ಮಧ್ಯರಾತ್ರಿ ಬೆಂಕಿ ಹಚ್ಚಿದ್ದಾರೆ.

ಬೆಂಕಿ ಹಚ್ಚಿದ ವಿಡಿಯೋ ಬಿಡುಗಡೆ:ಖಲಿಸ್ತಾನಿ ಬೆಂಬಲಿಗರು ಬೆಂಕಿ ಹಚ್ಚಿದ ವಿಡಿಯೋವನ್ನೂ ಬಿಡುಗಡೆ ಮಾಡಿದ್ದಾರೆ. ಕಳೆದ ತಿಂಗಳು ಕೆನಡಾದಲ್ಲಿ ಹತ್ಯೆಗೀಡಾದ ಭಯೋತ್ಪಾದಕ ಹರ್​​ದೀಪ್​ ಸಿಂಗ್ ನಿಜಾರ್ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ವಿಡಿಯೋದಲ್ಲಿ ಹೇಳಲಾಗಿದೆ. ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತ ಯುವಕರು ಖಲಿಸ್ತಾನಿ ಉಗ್ರ ನಿಜಾರ್‌ನನ್ನು ಗುಂಡಿಕ್ಕಿ ಕೊಂದಿದ್ದರು.

ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಖಲಿಸ್ತಾನಿ ಉಗ್ರ ಗುರುಪತ್ವಂತ್​ ಸಿಂಗ್ ಪನ್ನು ವಿಡಿಯೋ ಬಿಡುಗಡೆ ಮಾಡಿ, ಜುಲೈ 8ರಂದು ಕೆನಡಾ, ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಯುರೋಪ್ ದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ಹೊರಗೆ ತೀವ್ರ ಹೋರಾಟ ನಡೆಸಲಾಗುವುದು. ಅಷ್ಟೇ ಅಲ್ಲದೇ, ಈ ಹೋರಾಟಕ್ಕೆ ‘ಕಿಲ್ ಇಂಡಿಯಾ’ ಎಂದು ಹೆಸರಿಡಲಾಗಿದೆ. ಭಾರತೀಯ ರಾಯಭಾರಿ ಕಚೇರಿಗಳ ಹೊರಗೆ ಪ್ರತಿಭಟನೆ ಮತ್ತು ತ್ರಿವರ್ಣ ಧ್ವಜವನ್ನು ಅವಮಾನಿಸುವುದು ಉದ್ದೇಶವಾಗಿತ್ತು. ಬೆದರಿಕೆ ಬೆನ್ನಲ್ಲೇ ಭಾರತೀಯ ತನಿಖಾ ಸಂಸ್ಥೆಗಳು ಅಲರ್ಟ್ ಆಗಿದ್ದವು.

ಅಮೆರಿಕ ಖಂಡನೆ:ಕಾನ್ಸುಲೇಟ್‌ ಕಚೇರಿಗೆ ಬೆಂಕಿ ಹಚ್ಚಿದ ಘಟನೆಯನ್ನು ಅಮೆರಿಕ ಖಂಡಿಸಿದೆ. ಅಮೆರಿಕ ಸರ್ಕಾರದ ವಕ್ತಾರ ಮ್ಯಾಥ್ಯೂ ಮಿಲ್ಲರ್ ಮಂಗಳವಾರ ಟ್ವೀಟ್​ ಮಾಡಿದ್ದು, 'ಘಟನೆಯ ಬಗ್ಗೆ ಫೆಡರಲ್ ಬ್ಯೂರೋ ಮೂಲಕ ತನಿಖೆ ನಡೆಸಲಾಗುತ್ತಿದೆ' ಎಂದು ತಿಳಿಸಿದ್ದಾರೆ. 5 ತಿಂಗಳಲ್ಲಿ ಇದು ಎರಡನೇ ಘಟನೆಯಾಗಿದೆ. ಅಮೃತಪಾಲ್ ಬಿಡುಗಡೆಗೆ ಒತ್ತಾಯಿಸಿ ಖಲಿಸ್ತಾನ್ ಬೆಂಬಲಿಗರು ಮಾರ್ಚ್‌ನಲ್ಲಿ ಕಾನ್ಸುಲೇಟ್‌ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇದಾದ ಬಳಿಕ ಕಚೇರಿಗೆ ಭದ್ರತೆ ನೀಡಲಾಗುವುದು ಎಂದು ಅಭಯ ನೀಡಿತ್ತು.

ಇದನ್ನೂ ಓದಿ:Balasore train tragedy: ಬಾಲಸೋರ್‌ ತ್ರಿವಳಿ ರೈಲು ದುರಂತಕ್ಕೆ 'ಮಾನವ ಲೋಪ'ವೇ ಕಾರಣ!- ತನಿಖಾ ವರದಿ

ABOUT THE AUTHOR

...view details