ವಾಷಿಂಗ್ಟನ್:ಏಷ್ಯನ್ ಅಮೆರಿಕನ್ನರ ಪ್ರಭಾವ ಅಮೆರಿಕ ರಾಜಕೀಯದ ಮೇಲೆ ಬೀರುವ ಪರಿಣಾಮ ಹಾಗೂ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಅಧ್ಯಕ್ಷ ಜೋ ಬೈಡನ್ ಅವರ ಭಾಷಣವನ್ನು ಹಿಂದಿ ಮತ್ತು ಇತರ ಭಾಷೆಗಳಿಗೆ ಭಾಷಾಂತರಿಸಲು ಅಧ್ಯಕ್ಷೀಯ ಆಯೋಗವು ಶ್ವೇತಭವನವನ್ನು ಒತ್ತಾಯಿಸಿದೆ.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮಾಡಿದ ಭಾಷಣಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿರುತ್ತವೆ. 25.1 ಮಿಲಿಯನ್ ಜನರಿಗೆ ಇಂಗ್ಲಿಷ್ ಪ್ರಾವೀಣ್ಯತೆ ಇಲ್ಲದಿರುವುದರಿಂದ ಭಾಷಾಂತರಿಸಲು ಚಿಂತನೆ ಮಾಡಲಾಗಿದೆ.
ಏಷ್ಯನ್ ಅಮೆರಿಕನ್ನರು, ನೇಟಿವ್ ಹವಾಯನ್ಗಳು ಮತ್ತು ಪೆಸಿಫಿಕ್ ಐಲ್ಯಾಂಡರ್ಸ್ ಮೇಲಿನ ಅಧ್ಯಕ್ಷರ ಸಲಹಾ ಆಯೋಗವು ಈ ವಾರದ ಸಭೆಯಲ್ಲಿ ಶಿಫಾರಸು ಮಾಡಿದೆ. ಸಭೆಯಲ್ಲಿ ಭಾರತೀಯ ಅಮೆರಿಕನ್ ಸಮುದಾಯದ ನಾಯಕ ಅಜಯ್ ಜೈನ್ ಭುಟೋರಿಯಾ ಅವರು ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಆಯೋಗವು ಅದನ್ನು ಅಂಗೀಕರಿಸಿದೆ.