ಕರ್ನಾಟಕ

karnataka

ETV Bharat / international

ಸೈಕಲ್ ಸವಾರಿ ವೇಳೆ ಆಯತಪ್ಪಿ ಬಿದ್ದ ಜೋ ಬೈಡನ್ - ಸೈಕಲ್ ಸವಾರಿ ವೇಳೆ ಬಿದ್ದ ಜೋ ಬೈಡನ್

ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೈಕಲ್ ಸವಾರಿ ಮಾಡುವ ಸಂದರ್ಭ ಆಯತಪ್ಪಿ ಬಿದ್ದಿದ್ದಾರೆ.

JOE BIDEN FALLS TO THE GROUND DURING A BIKE RIDE IN DELAWARE
ಸೈಕಲ್​ ಸವಾರಿ ವೇಳೆ ಬಿದ್ದ ಜೋ ಬೈಡನ್

By

Published : Jun 19, 2022, 2:55 PM IST

ವಾಷಿಂಗ್ಟನ್​(ಅಮೆರಿಕ): ನಿನ್ನೆ ಬೆಳಗ್ಗೆ ಡೆಲವೇರ್‌ ರಾಜ್ಯದ ರೆಹೋಬೋತ್ ಬೀಚ್ ಬಳಿ ಸೈಕಲ್ ಸವಾರಿ ಮಾಡುತ್ತಿದ್ದ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬಿದ್ದಿದ್ದಾರೆ.

ಸೈಕಲ್​ನಿಂದ ಆಯತಪ್ಪಿ ಬಿದ್ದ ಜೋ ಬೈಡನ್

ಡೆಲವೇರ್‌ನ ರೆಹೋಬೋತ್ ಬೀಚ್‌ನಲ್ಲಿರುವ ಅವರ ಮನೆಯ ಬಳಿಯ ಸ್ಟೇಟ್ ಪಾರ್ಕ್‌ನಲ್ಲಿ ಪತ್ನಿ ಜಿಲ್ ಬೈಡನ್ ರೊಂದಿಗೆ ಸೈಕಲ್ ಸವಾರಿ ಮಾಡುತ್ತಿದ್ದರು. ಈ ವೇಳೆ ಪಕ್ಕದಲ್ಲಿದ್ದವರನ್ನ ಮಾತನಾಡಿಸಲು ಹೋಗಿ ಆಯತಪ್ಪಿ ಬಿದ್ದಿದ್ದಾರೆ. ಬೈಡನ್ ಸೈಕಲ್‌ನಿಂದ ಬೀಳುವುದನ್ನ ಅಲ್ಲೇ ಇದ್ದ ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಸೈಕಲ್​ನಿಂದ ಆಯತಪ್ಪಿ ಬಿದ್ದ ಜೋ ಬೈಡನ್

ಘಟನೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೇನೂ ಆಗಿಲ್ಲ, ಚೆನ್ನಾಗೇ ಇದ್ದೇನೆ ಎಂದು ಉತ್ತರಿಸಿದ್ದಾರೆ.

ಸೈಕಲ್​ನಿಂದ ಎಡವಿ ಬಿದ್ದ ಜೋ ಬೈಡನ್

ಇದನ್ನೂ ಓದಿ:ಕಾಬೂಲ್ ಗುರುದ್ವಾರದ ಮೇಲೆ ಉಗ್ರರ ದಾಳಿ: ಒಬ್ಬನ ಸಾವು

ABOUT THE AUTHOR

...view details