ಕರ್ನಾಟಕ

karnataka

ETV Bharat / international

ರಹಸ್ಯ ಸೇವೆಯ ಉದ್ಯೋಗಿಗೆ ಕಚ್ಚಿದ ಅಮೆರಿಕ ಅಧ್ಯಕ್ಷ ಬೈಡನ್ ಅವರ ಜರ್ಮನ್ ಶೆಫರ್ಡ್‌ ಶ್ವಾನ​; ಇದು 11ನೇ ಪ್ರಕರಣ! - ರಹಸ್ಯ ಸೇವೆಯ ಸಮವಸ್ತ್ರ ವಿಭಾಗದ ಪೊಲೀಸ್​ ಅಧಿಕಾರಿ

ಕಮಾಂಡರ್ ಎಂಬ ಹೆಸರಿನ ಈ ಶ್ವಾನ​ ಸೀಕ್ರೆಟ್​ ಸರ್ವಿಸ್​ ಸಿಬ್ಬಂದಿಗೆ ಕಚ್ಚಿದ 11 ಪ್ರಕರಣ ಇದಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Joe Biden Commander Bites Another Secret Service Employee
ಮತ್ತೊಬ್ಬ ರಹಸ್ಯ ಸೇವೆಯ ಉದ್ಯೋಗಿಗೆ ಕಚ್ಚಿದ ಜೋ ಬೈಡೆನ್ ನಾಯಿ​ ಕಮಾಂಡರ್​

By PTI

Published : Sep 27, 2023, 1:01 PM IST

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ​ 2 ವರ್ಷದ ಜರ್ಮನ್​ ಶೆಫರ್ಡ್​ ನಾಯಿ, ಕಮಾಂಡರ್​ ಶ್ವೇತಭವನದ ಮೈದಾನದಲ್ಲಿ ಮತ್ತೊಬ್ಬ ರಹಸ್ಯ ಸೇವೆಯ ಉದ್ಯೋಗಿಗೆ ಕಚ್ಚಿದೆ. ಶ್ವೇತಭವನದಲ್ಲಿ ರಹಸ್ಯ ಸೇವಾ ಸಿಬ್ಬಂದಿಯನ್ನು ಕಚ್ಚಿದ ಘಟನೆಗಳಲ್ಲಿ ಇದು 11ನೇ ಪ್ರಕರಣ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸೋಮವಾರ ರಾತ್ರಿ 8 ಗಂಟೆಯ ಸುಮಾರಿಗೆ ರಹಸ್ಯ ಸೇವೆಯ ಸಮವಸ್ತ್ರ ವಿಭಾಗದ ಪೊಲೀಸ್​ ಅಧಿಕಾರಿಯೊಬ್ಬರು, ಬೈಡನ್​ ಅವರ ಸಾಕು ನಾಯಿ ಕಮಾಂಡರ್​ ಸಮೀಪ ಬಂದಿದ್ದಾರೆ. ಆ ವೇಳೆ ನಾಯಿ ಕಚ್ಚಿದೆ. ತಕ್ಷಣವೇ ಸ್ಥಳದಲ್ಲೇ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಸದ್ಯ ಅಧಿಕಾರಿ ಆರೋಗ್ಯವಾಗಿದ್ದಾರೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್​ ವಕ್ತಾರರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಅಧಿಕಾರಿಗೆ ನಾಯಿ ಕಚ್ಚಲು ಕಾರಣ ಹಾಗೂ ಘಟನೆಯ ಬಗ್ಗೆ ಸೀಕ್ರೆಟ್​ ಸರ್ವಿಸ್​ ಅಥವಾ ಶ್ವೇತಭವನವಾಗಲಿ ಯಾವುದೇ ಹೆಚ್ಚಿನ ವಿವರ ನೀಡಿಲ್ಲ.

ಕಮಾಂಡರ್, ಇದುವರೆಗೆ 10 ಸೀಕ್ರೆಟ್​ ಸರ್ವಿಸ್​ ಸಿಬ್ಬಂದಿಗೆ ಕಚ್ಚಿರುವುದು ಈ ಹಿಂದೆ ವರದಿಯಾಗಿತ್ತು. ಅದರಲ್ಲೊಂದು ಗಂಭೀರ ಸ್ವರೂಪದ ಘಟನೆ ನಡೆದಿತ್ತು. 2022ರ ನವೆಂಬರ್​ನಲ್ಲಿ ರಹಸ್ಯ ಸೇವಾ ಏಜೆಂಟ್​ ಒಬ್ಬನ ತೊಡೆ ಹಾಗೂ ತೋಳಿಗೆ ಕಚ್ಚಿ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜೋ ಬೈಡನ್​ ಅವರ ಹಿಂದಿನ ನಾಯಿ ಮೇಜರ್,​ ಸೀಕ್ರೆಟ್​ ಸರ್ವಿಸ್​ ಹಾಗೂ ಶ್ವೇತಭವನ ಸಿಬ್ಬಂದಿಯನ್ನು ಕಚ್ಚುವುದು ಮತ್ತು ಆಕ್ರಮಣಕಾರಿಯಾಗಿ ವರ್ತಿಸಿದ ಕಾರಣ, ಅದನ್ನು ಕಳುಹಿಸಿ, ನಂತರ ಕಮಾಂಡರ್​ ಅನ್ನು ಕರೆತಂದಿದ್ದರು. ಆದರೆ ಎರಡು ವರ್ಷದ ಈ ಕಮಾಂಡರ್​ ಕೂಡ 2021ರಲ್ಲಿ ಶ್ವೇತಭವನಕ್ಕೆ ಆಗಮಿಸಿದಾಗಿನಿಂದ ರಹಸ್ಯ ಸೇವೆಯ ಹಲವಾರು ಸಿಬ್ಬಂದಿಯನ್ನು ಕಚ್ಚಿದೆ. 2021 ಜೋ ಬೈಡನ್‌​ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೊತ್ತಿಗೆ, ಈ ಕಮಾಂಡರ್​ ನಾಯಿಯನ್ನು ತಮ್ಮ ಸಹೋದರ ಜೇಮ್ಸ್​ ಅವರು ಉಡುಗೊರೆಯಾಗಿ ನೀಡಿದ್ದರು.

ಸೀಕ್ರೆಟ್​ ಸರ್ವಿಸ್​ ಸಿಬ್ಬಂದಿ ಅಮೆರಿಕ ಅಧ್ಯಕ್ಷ ಹಾಗೂ ಅವರ ಕುಟಂಬಕ್ಕೆ ಭದ್ರತಾ ರಕ್ಷಣೆಯನ್ನು ನೀಡುತ್ತಾರೆ. ಇದರಲ್ಲಿ ಹಲವಾರು ಅಧಿಕಾರಿಗಳನ್ನು ಕಾರ್ಯನಿರ್ವಾಹಕ ಕಟ್ಟಡ ಹಾಗೂ ಅದರ ವಿಸ್ತಾರವಾದ ಮೈದಾನದ ಸುತ್ತ ನಿಯೋಜಿಸಲಾಗುತ್ತದೆ.

ಇದನ್ನೂ ಓದಿ:ಆಡಳಿತದ ಪ್ರಮುಖ ಹುದ್ದೆಗಳಿಗೆ ಭಾರತೀಯ-ಅಮೆರಿಕನ್‌ ಮೂಲದವರಿಗೆ ಮಣೆ ಹಾಕಿದ ಬೈಡನ್‌

ABOUT THE AUTHOR

...view details