ಕರ್ನಾಟಕ

karnataka

ETV Bharat / international

ಜರ್ಮನ್ ಮಾಧ್ಯಮ ಸಂಸ್ಥೆ ಆಕ್ಸೆಲ್ ಸ್ಪ್ರಿಂಗರ್​ನಲ್ಲಿ ಶೇ 20ರಷ್ಟು ಉದ್ಯೋಗ ಕಡಿತ: ಮಾನವರ ಬದಲು AI ನಿಂದ ಕೆಲಸ!

ಎಐ ತಂತ್ರಜ್ಞಾನವು ಹಲವಾರು ಕ್ಷೇತ್ರಗಳಲ್ಲಿನ ಉದ್ಯೋಗಗಳಿಗೆ ಕುತ್ತು ತರಲಿದೆ ಎಂಬುದು ನಿಜವಾಗುತ್ತಿದೆ. ಜರ್ಮನಿಯ ಪ್ರಖ್ಯಾತ ಮಾಧ್ಯಮ ಸಂಸ್ಥೆಯೊಂದು ಕೆಲ ಉದ್ಯೋಗಿಗಳನ್ನು ವಜಾಗೊಳಿಸಿ, ಆ ಕೆಲಸಕ್ಕೆ ಎಐ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿದೆ.

Germany's top newspaper slashing 20% of jobs, replacing workers with AI
Germany's top newspaper slashing 20% of jobs, replacing workers with AI

By

Published : Jun 22, 2023, 4:39 PM IST

ಲಂಡನ್: ಜರ್ಮನಿಯ ಪ್ರಖ್ಯಾತ ಮಾಧ್ಯಮ ಸಂಸ್ಥೆ ಆಕ್ಸೆಲ್ ಸ್ಪ್ರಿಂಗರ್ ತನ್ನ ಶೇ 20 ರಷ್ಟು ಸುದ್ದಿಮನೆಯ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದೆ. ಅಲ್ಲದೆ ಸಂಸ್ಥೆಯಲ್ಲಿನ ಕೆಲ ಉದ್ಯೋಗಗಳಿಗೆ ಆರ್ಟಿಶಿಫಿಯಲ್ ಇಂಟೆಲಿಜೆನ್ಸ್​ ತಂತ್ರಜ್ಞಾನವನ್ನು ನೇಮಕ ಮಾಡುವುದಾಗಿ ತಿಳಿಸಿದೆ. ಪತ್ರಿಕೆಯ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಂಪಾದಕರು, ಫೋಟೋ ಸಂಪಾದಕರು, ಪ್ರೂಫ್ ರೀಡರ್‌ಗಳು ಮತ್ತು ಇತರ ಉದ್ಯೋಗಿಗಳ ಪಾತ್ರಗಳು ಇನ್ನು ಮುಂದೆ ಇರುವುದಿಲ್ಲ ಎಂದು ಸಂಸ್ಥೆ ತನ್ನ ಉದ್ಯೋಗಿಗಳಿಗೆ ನೀಡಿದ ಮೆಮೊದಲ್ಲಿ ಹೇಳಿದೆ.

ಆಕ್ಸೆಲ್ ಸ್ಪ್ರಿಂಗರ್ ಮಾಧ್ಯಮ ಸಂಸ್ಥೆ ಹಲವಾರು ಮಲ್ಟಿಮೀಡಿಯಾ ಸುದ್ದಿ ಬ್ರ್ಯಾಂಡ್‌ಗಳನ್ನು ಹೊಂದಿದೆ. ಉದಾಹರಣೆಗೆ, ಜರ್ಮನ್ ಸುದ್ದಿ ಮಾಧ್ಯಮವಾದ ಬಿಲ್ಡ್ ಆ್ಯಂಡ್ ವೆಲ್ಟ್, ಅಮೆರಿಕದ ಸುದ್ದಿ ವೆಬ್​ಸೈಟ್​ಗಳಾದ ಪೊಲಿಟಿಕೊ ಮತ್ತು ಮಚ್ ಆಫ್ ಇನ್ಸೈಡರ್​ಗಳ ಒಡೆತನವನ್ನು ಕಂಪನಿ ಹೊಂದಿದೆ. AI ಮತ್ತು / ಸ್ವಯಂಚಾಲಿತ ತಂತ್ರಜ್ಞಾನದಿಂದ ಮಾಡಬಹುದಾದ ಡಿಜಿಟಲ್ ವಿಭಾಗದಲ್ಲಿ ಕೆಲಸದಲ್ಲಿದ್ದ ಉದ್ಯೋಗಿಗಳನ್ನು ನಾವು ದುರದೃಷ್ಟವಶಾತ್ ಕೆಲಸದಿಂದ ವಜಾ ಮಾಡುತ್ತಿದ್ದೇವೆ ಆಕ್ಸೆಲ್ ಸ್ಪ್ರಿಂಗರ್ ತನ್ನ ಉದ್ಯೋಗಿಗಳಿಗೆ ತಿಳಿಸಿದೆ.

ಉದ್ಯೋಗ ಕಡಿತದಿಂದ Bild ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 1,000 ಉದ್ಯೋಗಿಗಳ ಪೈಕಿ ಸುಮಾರು 200 ಜನ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಉದ್ಯೋಗ ಕಡಿತಕ್ಕೂ AI ಗೂ ಸಂಬಂಧವಿಲ್ಲ, ಆದರೆ AI ಇದು ಸಂಪಾದಕರು ಮತ್ತು ವರದಿಗಾರರಿಗೆ ಸಮಯ ಉಳಿಸುವ ಮತ್ತು ಉಪಯುಕ್ತ ಸಾಧನವಾಗಿದೆ ಎಂದು ಬಿಲ್ಡ್ ವಕ್ತಾರರು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆಯು ಸ್ವತಂತ್ರ ಪತ್ರಿಕೋದ್ಯಮವನ್ನು ಹಿಂದೆಂದಿಗಿಂತಲೂ ಉತ್ತಮಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಅಥವಾ ಅದನ್ನು ಸರಳವಾಗಿ ಬದಲಿಸುವ ಸಾಮರ್ಥ್ಯ ಹೊಂದಿದೆ ಎಂದು ಆಕ್ಸೆಲ್ ಸ್ಪ್ರಿಂಗರ್ ಮಾಧ್ಯಮ ಸಂಸ್ಥೆಯ ಸಿಇಓ ಮಥಿಯಾಸ್ ಡಾಫ್ನರ್ ಉದ್ಯೋಗಿಗಳಿಗೆ ಇತ್ತೀಚೆಗೆ ನೀಡಿದ ಮೆಮೊದಲ್ಲಿ ತಿಳಿಸಿದ್ದಾರೆ. "ಈ ಬದಲಾವಣೆಯನ್ನು ಅರ್ಥಮಾಡಿಕೊಳ್ಳುವುದು ಮುದ್ರಣ ಮಾಧ್ಯಮ ಸಂಸ್ಥೆಯ ಭವಿಷ್ಯದ ಕಾರ್ಯಸಾಧ್ಯತೆಗೆ ಅತ್ಯಗತ್ಯ. ಉತ್ತಮ ಒರಿಜಿನಲ್ ಕಂಟೆಂಟ್​ ರಚಿಸುವವರು ಮಾತ್ರ ಇಲ್ಲಿ ಉಳಿಯಲಿದ್ದಾರೆ. AI ಶೀಘ್ರದಲ್ಲೇ ಪತ್ರಿಕೆಯೊಂದರ ವಿನ್ಯಾಸ ರಚನೆಯನ್ನು ತಾನೇ ಸಂಪೂರ್ಣವಾಗಿ ಮಾಡಲು ಸಾಧ್ಯವಾಗಲಿದೆ" ಎಂದು ಅವರು ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆಯನ್ನು ಡಿಜಿಟಲ್ ಕಂಪ್ಯೂಟರ್ ಅಥವಾ ಕಂಪ್ಯೂಟರ್ ನಿಯಂತ್ರಿತ ರೋಬೋಟ್ ಬುದ್ಧಿವಂತ ಜೀವಿಗಳೊಂದಿಗೆ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಎಂದು ವ್ಯಾಖ್ಯಾನಿಸಲಾಗಿದೆ. ದೈನಂದಿನ ಜೀವನದಲ್ಲಿ AI ಹಲವಾರು ರೂಪಗಳಲ್ಲಿ ವ್ಯಾಪಕವಾಗಿ ಲಭ್ಯವಿದೆ. ಅಲೆಕ್ಸಾ ಅಥವಾ ಗೂಗಲ್ ವಾಯ್ಸ್ ಅಸಿಸ್ಟೆಂಟ್ ಬಿಲ್ಟ್-ಇನ್‌ನೊಂದಿಗೆ ನಿಮ್ಮ ಮ್ಯಾಂಟಲ್‌ನಲ್ಲಿರುವ ಸ್ಮಾರ್ಟ್ ಸ್ಪೀಕರ್‌ಗಳು AI ಯ ಎರಡು ಉತ್ತಮ ಉದಾಹರಣೆಗಳಾಗಿವೆ. ಇತರ ಉತ್ತಮ ಉದಾಹರಣೆಗಳೆಂದರೆ- ಜನಪ್ರಿಯ AI ಚಾಟ್‌ಬಾಟ್‌ಗಳು. ಅಂದರೆ ChatGPT, ಹೊಸ Bing Chat ಮತ್ತು ಗೂಗಲ್ Bard. ಕೃತಕ ಬುದ್ಧಿಮತ್ತೆಯು ಯಂತ್ರಗಳು, ವಿಶೇಷವಾಗಿ ಕಂಪ್ಯೂಟರ್ ವ್ಯವಸ್ಥೆಗಳಿಂದ ಮಾನವ ಬುದ್ಧಿವಂತಿಕೆಯ ಪ್ರಕ್ರಿಯೆಗಳ ಅನುಕರಣೆಯಾಗಿದೆ.

ಇದನ್ನೂ ಓದಿ : ನಿಕ್​ ನೇಮ್ ಹಂಚಿಕೊಳ್ಳಲು AR lenses ಪರಿಚಯಿಸಿದ Snapchat.. ಜನಪ್ರಿಯ ನಿಕ್​​​​​​​​​​​​​​​ ನೇಮ್​ಗಳಾವವು ಗೊತ್ತೇ?

ABOUT THE AUTHOR

...view details