ಕರ್ನಾಟಕ

karnataka

ETV Bharat / international

ಪರಾಗ್ವೆಯಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಕೇಂದ್ರ ಸಚಿವ ಎಸ್ ಜೈಶಂಕರ್

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಪರಾಗ್ವೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿ, ಬಳಿಕ ಐತಿಹಾಸಿಕ ಕಾಸಾ ಡೆ ಲಾ ಇಂಡಿಪೆಂಡೆನ್ಸಿಯಾಕ್ಕೆ ಭೇಟಿ ನೀಡಿದರು.

Mahatma Gandhi bust
ಮಹಾತ್ಮ ಗಾಂಧಿ ಪ್ರತಿಮೆ

By

Published : Aug 22, 2022, 9:16 AM IST

ಅಸುನ್ಸಿಯಾನ್: ದಕ್ಷಿಣ ಅಮೆರಿಕಕ್ಕೆ ಭೇಟಿ ನೀಡಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಭಾನುವಾರ ಪರಾಗ್ವೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣಗೊಳಿಸಿದರು. ನಗರದ ಪ್ರಮುಖ ಭಾಗದಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಿರುವ ಅಸುನ್ಸಿಯಾನ್ ಪುರಸಭೆಯ ನಿರ್ಧಾರವನ್ನು ಅವರು ಶ್ಲಾಘಿಸಿದರು. ಬಳಿಕ ಎರಡು ಶತಮಾನಗಳಿಗಿಂತ ಹಿಂದೆ ಪರಾಗ್ವೆಯ ಸ್ವಾತಂತ್ರ್ಯ ಚಳುವಳಿ ಪ್ರಾರಂಭವಾದ ಐತಿಹಾಸಿಕ ಕಾಸಾ ಡೆ ಲಾ ಇಂಡಿಪೆಂಡೆನ್ಸಿಯಾಕ್ಕೂ ಭೇಟಿ ಕೊಟ್ಟರು.

ಎಸ್ ಜೈಶಂಕರ್ ಅವರು ಆಗಸ್ಟ್ 22 ರಿಂದ 27 ರವರೆಗೆ ಬ್ರೆಜಿಲ್, ಪರಾಗ್ವೆ ಮತ್ತು ಅರ್ಜೆಂಟೀನಾ ಪ್ರವಾಸದಲ್ಲಿದ್ದಾರೆ. ಈ ಭೇಟಿಯ ವೇಳೆ ಸ್ನೇಹ ಮತ್ತು ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಿಲಿದ್ದಾರೆ. ಜೊತೆಗೆ ಪರಾಗ್ವೆಯಲ್ಲಿ ಎಲ್ಲಾ ಮೂರು ದೇಶಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.

ಕಳೆದ ಶುಕ್ರವಾರ ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳ ರಾಯಭಾರಿಗಳನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಜೈಶಂಕರ್, ಉಭಯ ದೇಶಗಳ ಸಂಬಂಧ ಮತ್ತು ಸಹಕಾರವನ್ನು ಬಲಪಡಿಸುವ ಕುರಿತು ಚರ್ಚಿಸಿದ್ದರು.

ಇದನ್ನೂ ಓದಿ:ಜಗತ್ತು ಇಂದು ನಮ್ಮನ್ನು ನೋಡುವ ರೀತಿ ಬದಲಾಗಿದೆ ಎಂದ ವಿದೇಶಾಂಗ ಸಚಿವ ಜೈಶಂಕರ್

ABOUT THE AUTHOR

...view details