ಕರ್ನಾಟಕ

karnataka

By

Published : Jul 19, 2023, 5:19 PM IST

ETV Bharat / international

ಅಮೆರಿಕದಲ್ಲಿ ನುರಿತ ವೃತ್ತಿಪರರ ಕೊರತೆ ನೀಗಿಸಲು H-1B ವೀಸಾಗಳ ದ್ವಿಗುಣಕ್ಕೆ ITServe ಒತ್ತಾಯ

ಅಮೆರಿಕದ 65 ಸಾವಿರ ಹೆಚ್​1ಬಿ ವೀಸಾ (H-1B Visa)ಕೋಟಾ ದ್ವಿಗುಣಗೊಳಿಸುವಂತೆ ಭಾರತೀಯ ಅಮೆರಿಕನ್ನರ ಒಡೆತನದ ಐಟಿ ಸರ್ವ್ ಸಂಘ ಅಲ್ಲಿನ ಶಾಸಕರನ್ನು ಒತ್ತಾಯಿಸಿದೆ.

itserve-seeks-increase-in-h1b-quota-to-address-massive-shortage-of-highly-skilled-professionals-in-us
ಅಮೆರಿಕದಲ್ಲಿ ನುರಿತ ವೃತ್ತಿಪರರ ಕೊರತೆ ನೀಗಿಸಲು H-1B ವೀಸಾಗಳ ದ್ವಿಗುಣಕ್ಕೆ ITServe ಒತ್ತಾಯ

ವಾಷಿಂಗ್ಟನ್ (ಅಮೆರಿಕ):ಅಮೆರಿಕದಲ್ಲಿ ನುರಿತ ಉದ್ಯೋಗಿಗಳ ಕೊರತೆಯನ್ನು ನೀಗಿಸಲು ಪ್ರಸ್ತುತ ಇರುವ 65 ಸಾವಿರ ಹೆಚ್​1ಬಿ ವೀಸಾ (H-1B Visa)ಕೋಟಾ ದ್ವಿಗುಣಗೊಳಿಸುವಂತೆ ಭಾರತೀಯ ಅಮೆರಿಕನ್ನರ ಒಡೆತನದ ಐಟಿಸರ್ವ್​ (ITServe) ಸಂಘ ಒತ್ತಾಯಿಸಿದೆ. ಅಮೆರಿಕದಲ್ಲಿ ಭಾರತೀಯ ಅಮೆರಿಕನ್ನರ ಒಡೆತನ ಹಾಗೂ ಅವರು ನಿರ್ವಹಿಸುವ 2,100ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಗಾತ್ರದ ಐಟಿ ಕಂಪನಿಗಳನ್ನು ಈ ಸಂಘವು ಒಳಗೊಂಡಿದೆ.

ಹೆಚ್​1ಬಿ ವೀಸಾವು ವಲಸೆ ರಹಿತ ವೀಸಾ ಆಗಿವೆ. ಇದು ಅಮೆರಿಕದ ಕಂಪನಿಗಳಿಗೆ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಐಟಿ ಕಂಪನಿಗಳು ಇದೇ ಹೆಚ್​1ಬಿ ವೀಸಾವನ್ನು ಅವಲಂಬಿಸಿವೆ.

ಇದನ್ನೂ ಓದಿ:ಹೆಚ್ 1ಬಿ ವೀಸಾ ಹೊಂದಿರುವವರ ಸಂಗಾತಿಗೆ ಅಮೆರಿಕದಲ್ಲಿ ಉದ್ಯೋಗಕ್ಕೆ ಅವಕಾಶ: ಯುಎಸ್​​ ಕೋರ್ಟ್‌

ಐಟಿ ಸರ್ವ್​ ಸಂಘದ 240 ಕ್ಕೂ ಹೆಚ್ಚು ಸದಸ್ಯರು ಮಂಗಳವಾರ ಅಮೆರಿಕ ರಾಜಧಾನಿಯಲ್ಲಿ ಮೊದಲ ಬಾರಿಗೆ ಒಟ್ಟಾಗಿ ಕಾಂಗ್ರೆಸ್‌ ಮತ್ತು ಸೆನೆಟರ್‌ಗಳನ್ನು ಭೇಟಿ ಮಾಡಲು ಯೋಜಿಸಿದ್ದಾರೆ. ದೇಶದಲ್ಲಿ ಹೆಚ್ಚು ನುರಿತ ಉದ್ಯೋಗಿಗಳ ಬೃಹತ್ ಕೊರತೆ ಹಾಗೂ ಹೆಚ್ಚಿನ ಸಂಖ್ಯೆಯ ನುರಿತ ಉದ್ಯೋಗಿಗಳ ಕೊರತೆಯು ಅವರ ವ್ಯವಹಾರಗಳು ಮತ್ತು ಅಮೆರಿಕನ್ ಪ್ರಯೋಜನದ ಮೇಲೆ ಪರಿಣಾಮ ಬೀರುತ್ತಿದೆ ಎಂಬುವುದರ ಬಗ್ಗೆ ಮನವರಿಕೆ ಮಾಡಲು ಸಂಘ ನಿರ್ಧಾರ ಮಾಡಿದೆ.

ಹೆಚ್​​1ಬಿ ವೀಸಾಗಳ ಸಂಖ್ಯೆಯನ್ನು ಪ್ರಸ್ತುತ ವಾರ್ಷಿಕ 65,000ರಿಂದ 1,30,000ಕ್ಕೆ ಹೆಚ್ಚಿಸುವುದರ ಜೊತೆಗೆ ಅಮೆರಿಕದಲ್ಲಿ ಎಸ್​ಟಿಇಎಂ (STEM - Science, Technology, Engineering, and Mathematics) ಶಿಕ್ಷಣದಲ್ಲಿ ಹೂಡಿಕೆ ಹೆಚ್ಚಿಸಲು ಶಾಸಕರನ್ನು ಒತ್ತಾಯಿಸುತ್ತಿದೆ. ಅಲ್ಲದೇ, ಭಾರತೀಯ ಅಮೆರಿಕನ್Indian Americans ಕಾಂಗ್ರೆಸ್​​​​ಮನ್​ ರಾಜಾ ಕೃಷ್ಣಮೂರ್ತಿ ಮಂಗಳವಾರ ಉದ್ಯೋಗಕ್ಕಾಗಿ ಉನ್ನತ ನೈಪುಣ್ಯತೆಯ ವಲಸೆ ಸುಧಾರಣೆ (HIRE) ಕಾಯ್ದೆಯನ್ನು ಪರಿಚಯಿಸಿದ್ದಾರೆ. ಉದ್ಯೋಗದಾತರು ಭರ್ತಿ ಮಾಡಬೇಕಾದ ಉದ್ಯೋಗಗಳಿಗೆ ಅಗತ್ಯವಿರುವ ಕೌಶಲ್ಯಗಳು ಮತ್ತು ಪ್ರಸ್ತುತ ನಿರೀಕ್ಷಿತ ಉದ್ಯೋಗಿಗಳು ಹೊಂದಿರುವ ಕೌಶಲ್ಯಗಳ ನಡುವಿನ ಅಂತರವನ್ನು ಕೌಶಲ್ಯಗಳ ಅಂತರವನ್ನು ಕಡಿಮೆ ಮಾಡುವ ಮೂಲಕ ಈ ಕಾಯ್ದೆಯು ಅಮೆರಿಕದ ಸ್ಪರ್ಧಾತ್ಮಕತೆ ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

ಐಟಿಸರ್ವ್ ಅಮೆರಿಕದಲ್ಲಿರುವ 2,100ಕ್ಕೂ ಹೆಚ್ಚು ಐಟಿ ಕಂಪನಿಗಳನ್ನು ಹೆಚ್ಚು ಪ್ರತಿನಿಧಿಸುತ್ತದೆ. ನಾವು 23 ರಾಜ್ಯಗಳಲ್ಲಿ ಈ ಕಂಪನಿಗಳು ಹರಡಿದ್ದು, 1,75,000 ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುತ್ತೇವೆ. ಅಮೆರಿಕದಲ್ಲಿ ಹೆಚ್ಚಿನ ಕೌಶಲ್ಯದ ಉದ್ಯೋಗವನ್ನು ನೀಡುತ್ತೇವೆ. ಅಮೆರಿಕದ ಜಿಡಿಪಿಗೆ 12 ಶತಕೋಟಿ ಡಾಲರ್​ ಕೊಡುಗೆ ನೀಡುತ್ತೇವೆ ಎಂದು ಸಂಘವು ಹೇಳಿಕೊಂಡಿದೆ.

ಇದನ್ನೂ ಓದಿ:ಭಾರತದ ನುರಿತ ಉದ್ಯೋಗಿಗಳಿಗಾಗಿ ಸರಳ ವೀಸಾ ಯೋಜನೆ ರೂಪಿಸಲು ಮುಂದಾದ ಅಮೆರಿಕ; ಮೋದಿ ಪ್ರವಾಸದ ಇಂಪ್ಯಾಕ್ಟ್!

ABOUT THE AUTHOR

...view details