ಕರ್ನಾಟಕ

karnataka

ETV Bharat / international

ಇಸ್ರೇಲ್; ನ್ಯಾಯಾಂಗ ಸುಧಾರಣಾ ಮಸೂದೆ ವಿರೋಧಿಸಿ ಭಾರಿ ಪ್ರತಿಭಟನೆ

ಉದ್ದೇಶಿತ ನ್ಯಾಯಾಂಗ ಸುಧಾರಣಾ ಮಸೂದೆಯನ್ನು ವಿರೋಧಿಸಿ ಇಸ್ರೇಲ್​ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

Protest against judicial reform swell in Israel
Protest against judicial reform swell in Israel

By

Published : Jul 23, 2023, 7:28 PM IST

ಜೆರುಸಲೇಂ :ನ್ಯಾಯಾಂಗ ಸುಧಾರಣೆ ಮಸೂದೆ ಜಾರಿ ವಿರೋಧಿಸಿ ಇಸ್ರೇಲ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತಾರಕಕ್ಕೇರಿವೆ. ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಪ್ರತಿಭಟನಾಕಾರರು ವೆಸ್ಟರ್ನ್ ವಾಲ್ ಪ್ರದೇಶದಿಂದ ಸಂಸತ್ತಿನವರೆಗೂ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಲ್ಲಿ ಅಧಿಕಾರದಲ್ಲಿರುವ ಬಲಪಂಥೀಯ ಸಮ್ಮಿಶ್ರ ಸರ್ಕಾರವು ನ್ಯಾಯಾಂಗ ಸುಧಾರಣಾ ಶಾಸನದ ಮೊದಲ ಭಾಗವನ್ನು ಅಂಗೀಕರಿಸಲು ಸಿದ್ಧವಾಗಿದೆ.

ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ವ್ಯಾಪಿಸಿವೆ. ಮಸೂದೆಯ ಮೇಲೆ ಸಂಸತ್ತಿನಲ್ಲಿ ಭಾನುವಾರ ಬೆಳಗ್ಗೆ ಆರಂಭವಾದ ಚರ್ಚೆ 26 ಗಂಟೆಗಳ ಕಾಲ ಮುಂದುವರಿದಿದ್ದು, ಸೋಮವಾರ ಮುಕ್ತಾಯವಾಗುವ ಸಾಧ್ಯತೆ ಇದೆ. "ದೇಶದಲ್ಲಿನ ಪ್ರಸ್ತುತ ಪರಿಸ್ಥಿತಿ ಪ್ರಜಾಪ್ರಭುತ್ವ ರೀತಿಯಲ್ಲಿ ಇಲ್ಲ, ಕಾನೂನು ಕೆಲಸ ಮಾಡುತ್ತಿಲ್ಲ" ಎಂದು ಸಂವಿಧಾನ, ಕಾನೂನು ಮತ್ತು ನ್ಯಾಯ ಸಮಿತಿಯ ಅಧ್ಯಕ್ಷ ಸಿಮ್ಚಾ ರೋಥ್‌ಮನ್ ಹೇಳಿದರು.

ಮಸೂದೆಯ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಎಂಕೆ ಯೈರ್ ಲ್ಯಾಪಿಡ್, "ನಾವು ಯುದ್ಧ ಮಾಡಲು ಪ್ರತಿಭಟನೆ ನಡೆಸುತ್ತಿಲ್ಲ, ಆದರೆ ನಮ್ಮ ಪ್ರಯತ್ನ ಯುದ್ಧ ತಡೆಯುವುದಾಗಿದೆ. ನಿಮಗೆ ಇನ್ನೂ ನ್ಯಾಯಯುತ ಪ್ರಜ್ಞೆ ಇದ್ದರೆ ಇದನ್ನು ನಿಲ್ಲಿಸಿ ಎಂಬುದನ್ನು ಸರ್ಕಾರಕ್ಕೆ ಹೇಳಲು ಪ್ರಯತ್ನಿಸುತ್ತಿದ್ದೇವೆ." ಎಂದರು. ಮಸೂದೆಯು ಪ್ರಜಾಪ್ರಭುತ್ವವನ್ನು ಬಲಪಡಿಸಲಿದೆ ಎಂದು ಸರ್ಕಾರ ವಾದಿಸುತ್ತಿದೆ. ಆದರೆ ಇದರಿಂದ ದೇಶ ಸರ್ವಾಧಿಕಾರದ ಕಡೆಗೆ ಜಾರುತ್ತಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಶನಿವಾರ ಜೆರುಸಲೆಮ್‌ನಲ್ಲಿ ಪ್ರತಿಭಟನಾಕಾರರು ಟೆಲ್ ಅವಿವ್‌ನಿಂದ ಇಸ್ರೇಲ್‌ನ ಸಂಸತ್ತಿಗೆ ನಾಲ್ಕು ದಿನಗಳ 70 ಕಿಮೀ (43 ಮೈಲುಗಳು) ಟ್ರೆಕ್‌ನ ಕೊನೆಯ ಹಂತವನ್ನು ಪೂರ್ಣಗೊಳಿಸಿದರು. ನಗರದ ಮುಖ್ಯ ಪ್ರವೇಶದ್ವಾರದಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದು, ಇಡೀ ನಗರ ನೀಲಿ ಮತ್ತು ಬಿಳಿ ಇಸ್ರೇಲಿ ಧ್ವಜಗಳ ಸಮುದ್ರದಂತೆ ಕಾಣಿಸುತ್ತಿದೆ.

ವಿವಾದಾತ್ಮಕ ಮಸೂದೆಯು ಸುಪ್ರೀಂ ಕೋರ್ಟ್‌ನ ಕೆಲ ಅಧಿಕಾರಗಳನ್ನು ರದ್ದುಗೊಳಿಸುವ ಉದ್ದೇಶ ಹೊಂದಿದೆ. ಸಂಸತ್ತು ತನ್ನ ಬೇಸಿಗೆಯ ಬಿಡುವಿಗಾಗಿ ಜುಲೈ 30 ರಂದು ಮುಂದೂಡಲ್ಪಡುವ ಮೊದಲು ಶಾಸನವನ್ನು ಅಂಗೀಕರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಯೋಜಿತ ನ್ಯಾಯಾಂಗ ಸುಧಾರಣೆ ಮಸೂದೆಯಿಂದ ಇಸ್ರೇಲ್​ನಲ್ಲಿ ವ್ಯಾಪಕ ಪ್ರಮಾಣದ ಪ್ರಕ್ಷುಬ್ಧತೆ ಉಂಟಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಾಯಕತ್ವದಲ್ಲಿ ಇಸ್ರೇಲ್‌ನ ನ್ಯಾಯಾಂಗದ ಭವಿಷ್ಯದ ಬಗ್ಗೆ ಅನೇಕರು ಕಳವಳ ಮತ್ತು ಹತಾಶೆ ವ್ಯಕ್ತಪಡಿಸಿದ್ದಾರೆ.

1980 ರ ದಶಕದ ನಂತರ ಇಸ್ರೇಲ್‌ನಲ್ಲಿ ಹಿಂದೆಂದೂ ನೋಡಿರದ ಕೆಲ ದೊಡ್ಡ ಮಟ್ಟದ ವಿರೋಧ ಪ್ರದರ್ಶನಗಳು ವ್ಯಕ್ತವಾಗುತ್ತಿವೆ. ಜನವರಿಯಲ್ಲಿ ಆಡಳಿತಾರೂಢ ಒಕ್ಕೂಟವು ಮಸೂದೆಯ ಬಗ್ಗೆ ಯೋಜನೆಯನ್ನು ಘೋಷಿಸಿದ ನಂತರ ಸತತ 28 ವಾರಗಳವರೆಗೆ ಸಾಪ್ತಾಹಿಕ ಪ್ರತಿಭಟನೆಗಳು ನಡೆದಿವೆ. ಇಸ್ರೇಲ್‌ನ ದೀರ್ಘಾವಧಿಯ ನಾಯಕ ನೆತನ್ಯಾಹು ಕಳೆದ ವರ್ಷ ಡಿಸೆಂಬರ್‌ನಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದ್ದಾರೆ. ಕಠೋರ ರಾಷ್ಟ್ರೀಯವಾದಿ ಮತ್ತು ಕಠೋರ ಧಾರ್ಮಿಕ ಪಕ್ಷಗಳನ್ನು ಒಳಗೊಂಡಿರುವ ಬಲಪಂಥೀಯ ಒಕ್ಕೂಟದ ಸರ್ಕಾರವನ್ನು ಅವರು ಮುನ್ನಡೆಸುತ್ತಿದ್ದಾರೆ. ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಅವರು ಕ್ರಿಮಿನಲ್ ವಿಚಾರಣೆ ಎದುರಿಸುತ್ತಿದ್ದಾರೆ.

ಇದನ್ನೂ ಓದಿ : 500 ಕೋಟಿ ದಾಟಿದ Social media ಬಳಕೆದಾರರ ಸಂಖ್ಯೆ: ಪ್ರತಿ ಸೆಕೆಂಡಿಗೆ 5 ಜನರ ಸೇರ್ಪಡೆ

ABOUT THE AUTHOR

...view details