ಟೆಲ್ ಅವೀವ್: ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಸೋಮವಾರ ತಿಳಿಸಿದೆ. ಹಿಜ್ಬುಲ್ಲಾ ಹಾರಿಸಿದ ರಾಕೆಟ್ಗಳು ಉತ್ತರ ಇಸ್ರೇಲ್ನ ಹಲವಾರು ಭಾಗಗಳಿಗೆ ಅಪ್ಪಳಿಸಿದ ನಂತರ ಇಸ್ರೇಲ್ ಹಿಜ್ಬುಲ್ಲಾ ಉಗ್ರರಿಗೆ ಪ್ರತ್ಯುತ್ತರ ನೀಡಿದೆ. ಹಿಜ್ಬುಲ್ಲಾ ರಾಕೆಟ್ ದಾಳಿಗೆ ಪ್ರತಿಕ್ರಿಯೆಯಾಗಿ ಫೈಟರ್ ಜೆಟ್ಗಳು ಮಿಲಿಟರಿ ಕಟ್ಟಡಗಳು, ರಾಕೆಟ್ ಲಾಂಚರ್ಗಳು ಮತ್ತು ಹಿಜ್ಬುಲ್ಲಾಗೆ ಸೇರಿದ ಇತರ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿದವು ಎಂದು ಐಡಿಎಫ್ ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರದ ಗಡಿಯಲ್ಲಿ ಇಸ್ರೇಲ್ ಪ್ರದೇಶಗಳ ಮೇಲೆ ಇರಾನ್ ಬೆಂಬಲಿತ ಹಿಜ್ಬುಲ್ಲಾ ಉಗ್ರರು ದಾಳಿ ಮಾಡುವುದನ್ನು ತಡೆಯಲು ಗಡಿಯುದ್ದಕ್ಕೂ ಹಲವಾರು ಪ್ರದೇಶಗಳಲ್ಲಿ ಗುಂಡು ಹಾರಿಸಲಾಗಿದೆ ಎಂದು ಐಡಿಎಫ್ ತಿಳಿಸಿದೆ. ಅಕ್ಟೋಬರ್ 7ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ಹಿಜ್ಬುಲ್ಲಾ ಲೆಬನಾನ್ನಿಂದ ಹಲವಾರು ಬಾರಿ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸಿದೆ ಎಂದು ಇಸ್ರೇಲ್ ಆರೋಪಿಸಿದೆ.
ಇಸ್ರೇಲ್ ಷರತ್ತು ಒಪ್ಪಲ್ಲ ಎಂದ ಸಿನ್ವರ್:ಗಾಜಾದಲ್ಲಿ ಹಮಾಸ್ ಉಗ್ರ ಮತ್ತು ಅತ್ಯಂತ ಹಿಂಸಾತ್ಮಕ ರೂಪದ ಯುದ್ಧವನ್ನು ಎದುರಿಸುತ್ತಿದೆ ಎಂದು ಹಮಾಸ್ ಮಿಲಿಟರಿ ಕಮಾಂಡರ್ ಯಾಹ್ಯಾ ಸಿನ್ವರ್ ಸೋಮವಾರ ಹೇಳಿದ್ದಾರೆ. "ಹಮಾಸ್ ಇಸ್ರೇಲ್ ರಕ್ಷಣಾ ಪಡೆಗಳನ್ನು (ಐಡಿಎಫ್) ನಾಶಪಡಿಸಲಿದೆ. ಕದನ ವಿರಾಮಕ್ಕೆ ಇಸ್ರೇಲ್ನ ಷರತ್ತುಗಳನ್ನು ನಾವು ಒಪ್ಪಲ್ಲ" ಎಂದು ಸಿನ್ವರ್ ಹೇಳಿದ್ದಾರೆ. ಅಕ್ಟೋಬರ್ 7 ರ ದಾಳಿಯ ನಂತರ ಸಿನ್ವರ್ ಅವರ ಮೊದಲ ಸಾರ್ವಜನಿಕ ಹೇಳಿಕೆ ಇದಾಗಿದೆ.
"ಅಲ್-ಕಸಾಮ್ ಬ್ರಿಗೇಡ್ನ ಹೋರಾಟಗಾರರು 5,000 ಕ್ಕೂ ಹೆಚ್ಚು ಇಸ್ರೇಲಿ ಸೈನಿಕರು ಮತ್ತು ಅಧಿಕಾರಿಗಳನ್ನು ಕೊಂದಿದ್ದಾರೆ" ಎಂದು ಸಿನ್ವರ್ ಹೇಳಿದರು. ಆದಾಗ್ಯೂ ಗಾಜಾ ಯುದ್ಧದಲ್ಲಿ ತನ್ನ 153 ಸೈನಿಕರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ಐಡಿಎಫ್ ಹೇಳಿದೆ. ಸಿನ್ವರ್ ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದ ಎಂದು ಪರಿಗಣಿಸಲಾಗಿದೆ. ಶೀಘ್ರದಲ್ಲೇ ಸಿನ್ವರ್ ಅವರನ್ನು ಕೊಲ್ಲುವುದಾಗಿ ಇಸ್ರೇಲ್ ರಕ್ಷಣಾ ಸಚಿವ ಯೋವ್ ಶೌರ್ಯ್ ಹೇಳಿದ್ದಾರೆ. ಏತನ್ಮಧ್ಯೆ ಮತ್ತೋರ್ವ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಇತ್ತೀಚೆಗೆ ಕದನ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆಗಾಗಿ ಇಸ್ರೇಲ್ ಜೊತೆ ಮಾತುಕತೆ ನಡೆಸಲು ಕೈರೋಗೆ ಭೇಟಿ ನೀಡಿದ್ದರು.
ಇದನ್ನೂ ಓದಿ:2023ರಲ್ಲಿ ಪಾಕಿಸ್ತಾನದಲ್ಲಿ 29 ಆತ್ಮಾಹುತಿ ದಾಳಿ, 329 ಸಾವು; 2014ರ ನಂತರ ಅತ್ಯಧಿಕ