ವಾಷಿಂಗ್ಟನ್:ಗಾಜಾದಲ್ಲಿ ನಾಗರಿಕರ ಸಾವು - ನೋವುಗಳನ್ನು ಕಡಿಮೆ ಮಾಡಲು ಇಸ್ರೇಲ್ ನಿಸ್ಸಂಶಯವಾಗಿ ಪ್ರಯತ್ನಿಸುತ್ತಿದೆ ಎಂದು ನಾನು ಭಾವಿಸುತ್ತೇನೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ಕಳೆದ ಹಲವು ದಿನಗಳಿಂದ ನಡೆಯುತ್ತಿರುವು ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧದಲ್ಲಿ ಹಲವು ಸಾವುನೋವುಇಗಳ ಸಂಭವಿಸಿದ್ದು, ಅದನ್ನು ತಪ್ಪಿಸಲು ನಡೆಸುತ್ತಿರುವು ಪ್ರಯತ್ನಗಳ ಬಗ್ಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಾತನಾಡಿದ್ದಾರೆ. ಇಸ್ರೇಲ್ ರಕ್ಷಣಾ ಪಡೆಯ ಗುರಿ ಹಮಾಸ್ ಭಯೋತ್ಪಾದಕರನ್ನು ಹತ್ತಿಕ್ಕುವುದೇ ಹೊರತು, ನಾಗರಿಕರನ್ನು ಬಲಿ ತೆಗೆದುಕೊಳ್ಳುವುದಲ್ಲ" ಎಂದು ಹೇಳಿದ್ದಾರೆ.
ಇಸ್ರೇಲ್ ಯುದ್ಧದ ನಿಯಮಕ್ಕೆ ಬದ್ಧವಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾವಿಸುತ್ತಾರೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿ, "ಪ್ರಸ್ತುತ ಇಸ್ರೇಲ್ ನೆಲದಲ್ಲಿ ನಡೆಯುತ್ತಿರುವುದರ ಬಗ್ಗೆ ನಾವು ನೇರವಾಗಿ ಮಧ್ಯಪ್ರವೇಶ ಮಾಡಿಲ್ಲ. ಆದರೂ ನಿತಂತರವಾಗಿ ಇಸ್ರೇಲ್ ಸಹವರ್ತಿಗಳೊಂದಿಗೆ ಮಾತುಕತೆ ನಡೆಸುತ್ತಲೇ ಇದ್ದೇವೆ. ನಿನ್ನೆ ಪ್ರಧಾನಿ ಜೊತೆ ಮಾತುಕತೆ ನಡೆದಿದ್ದು, ಖಂಡಿತವಾಗಿಯೂ ಅವರು ನಾಗರಿಕರ ಸಾವುನೋವುಗಳನ್ನು ತಡೆಯುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ಭಾವಿಸುತ್ತೇನೆ" ಎಂದರು.
"ಇದರರ್ಥ ಇಸ್ರೇಲ್ನಲ್ಲಿ ದುರಂತಕರವಾಗಿ ನಾಗರಿಕರ ಸಾವುನೋವುಗಳು ಸಂಭವಿಸಿಲ್ಲ ಎಂದಲ್ಲ. ಅಲ್ಲೂ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ. ಉಕ್ರೇನ್ನಲ್ಲಿ ಪುಟಿನ್ನಂತೆ ಅಥವಾ ಅಕ್ಟೋಬರ್ 7 ರಂದು ಹಮಾಸ್ ಮಾಡಿದ್ದಕ್ಕಿಂತ ಭಿನ್ನವಾಗಿ ನಾಗರಿಕರನ್ನು ಕೊಲ್ಲುವುದು ಇಸ್ರೇಲ್ ಗುರಿಯಲ್ಲ. ಇಸ್ರೇಲ್ ರಕ್ಷಣಾ ಪಡೆಗಳು ಹಮಾಸ್ ಭಯೋತ್ಮಾದಕರನ್ನು ಹತ್ತಿಕ್ಕುವ ಪ್ರಯತ್ನದಲ್ಲಿದೆಯೇ ಹೊರತು, ಅವರಿಗೆ ಮತ್ತೆ ನಾಗರಿಕರು, ಮುಗ್ಧ ಪ್ಯಾಲೆಸ್ಟೀನಿಯರನ್ನು ಬಲಿ ಪಡೆಯುವ ಉದ್ದೇಶ ಇಲ್ಲ" ಎಂದು ಹೇಳಿದರು.
ಯಾಕೆ ಬೈಡೆನ್ ಅವರು ಅಂತಾರಾಷ್ಟ್ರೀಯ ಮಾನವೀಯ ಕಾನೂನಿಗೆ ಅನುಗುಣವಾಗಿ ಹೋರಾಡಲು ಪದೇ ಪದೇ ಕರೆ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ, "ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಮಾತುಕತೆ ಸಂದರ್ಭದಲ್ಲಿ ಗಾಜಾದಲ್ಲಿ ನಾಗರಿಕರ ಸಾವುನೋವುಗಳ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಇದು ಎರಡೂ ಪ್ರಧಾನಿಗಳ ಪ್ರಜ್ಞಾವಂತಿಕೆ, ಇಬ್ಬರೂ ನಾಯಕರು ಪ್ರಜಾಪ್ರಭತ್ವ, ಯುದ್ಧ ಕಾನೂನಿಗೆ ಬದ್ಧವಾಗಿರುವುದು, ನಾಗರಿಕರ ಸಾವುನೋವುಗಳನ್ನು ಕಡಿಮೆ ಮಾಡಿ ಮುಗ್ಧ ಜೀವಗಳನ್ನು ರಕ್ಷಿಸುವ ಪ್ರಯತ್ನಗಳು ಮುಖ್ಯ ಎಂದು ಭಾವಿಸುತ್ತಾರೆ. ನಾಗರಿಕ ಸಾವುನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವುದರ ಜೊತೆಗೆ ಮುಗ್ಧ ಜೀವಗಳನ್ನು ರಕ್ಷಿಸುವುದು ಕೂಡ ಮುಖ್ಯ. ನಮ್ಮ ಈ ಯೋಚನೆಯೇ ಹಮಾಸ್ನಂತಹ ಜನರಿಂದ ನಮ್ಮನ್ನು ಪ್ರತ್ಯೇಕಿಸುತ್ತದೆ" ಎಂದರು.
"ನಾಗರಿಕರ ಸಾವುನೋವುಗಳನ್ನು ಕಡಿಮೆ ಮಾಡಲು ಇಸ್ರೇಲ್ ಯಾವ ಪ್ರಯತ್ನಗಳನ್ನು ಮಾಡುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಅಮೆರಿಕ ಹಲವು ಮಾತುಕತೆಗಳನ್ನು ನಡೆಸಿದೆ. ಗಾಜಾಕ್ಕೆ ಮಾನವೀಯ ನೆರವು ಪಡೆಯಲು ಪ್ರಯತ್ನಿಸುವ ಪ್ರಯತ್ನವನ್ನು ಅಕ್ಷರಶಃ ಯುಎಸ್ ಮುನ್ನಡೆಸುತ್ತಿದೆ. " ಎಂದು ತಿಳಿಸಿದರು.
ಇದನ್ನೂ ಓದಿ :ಲಕ್ಷಾಂತರ ಪ್ಯಾಲೆಸ್ಟೈನಿಯನ್ನರ ಉಳಿವಿಗೆ ತುರ್ತು ಕದನ ವಿರಾಮ ಘೋಷಿಸಬೇಕಿದೆ: ವಿಶ್ವಸಂಸ್ಥೆ