ಟೆಲ್ ಅವಿವ್(ಇಸ್ರೇಲ್): "ಗಾಜಾ ಪಟ್ಟಿಯ ಮೇಲೆ ದಾಳಿಗಳನ್ನು ಮುಂದುವರೆಸಲಾಗುತ್ತಿದೆ. ಪ್ಯಾಲೆಸ್ಟೈನ್ ಪ್ರದೇಶವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದೇವೆ. ಇಸ್ರೇಲ್ ಪಡೆಗಳು ಗಾಜಾ ನಗರವನ್ನು ಸುತ್ತುವರೆದಿದ್ದು, ಈಗ ದಕ್ಷಿಣ ಗಾಜಾ ಮತ್ತು ಉತ್ತರ ಗಾಜಾ ಅಸ್ತಿತ್ವದಲ್ಲಿದೆ" ಎಂದು ಇಸ್ರೇಲ್ ಸೇನಾ ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.
ಸೇನಾ ಪಡೆಗಳು ಈಗ ಗಾಜಾದ ಕರಾವಳಿಯನ್ನು ತಲುಪಿವೆ. ಭಯೋತ್ಪಾದಕರ ಮೂಲಸೌಕರ್ಯಗಳ ಕುರಿತು ಅಲ್ಲಿನ ಜನರಿಂದಲೂ ವ್ಯಾಪಕವಾಗಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಮತ್ತೊಂದು ಹೇಳಿಕೆಯಲ್ಲಿ, ಉತ್ತರ ಕಮಾಂಡ್‌ನಲ್ಲಿ ನಡೆದ ಸಭೆಯಲ್ಲಿ ಜನರಲ್ ಸ್ಟಾಫ್ ಮುಖ್ಯಸ್ಥ ಎಲ್‌ಟಿಜಿ ಹರ್ಜಿ ಹಲೇವಿ, ಯಾವುದೇ ಕ್ಷಣದಲ್ಲಾದರೂ ಉತ್ತರ ಗಾಜಾದಲ್ಲಿ ಐಡಿಎಫ್ (ಇಸ್ರೇಲ್ ಸೇನೆ) ದಾಳಿ ಮಾಡಲು ಸಿದ್ಧವಾಗಿದೆ. ಗಾಜಾ ಪಟ್ಟಿ ಮಾತ್ರವಲ್ಲ, ನಾವು ಗಡಿಗಳಲ್ಲಿ ಉತ್ತಮ ಭದ್ರತಾ ವ್ಯವಸ್ಥೆ ಮರುಸ್ಥಾಪಿಸುವ ಸ್ಪಷ್ಟ ಗುರಿ ಹೊಂದಿದ್ದೇವೆ. ಉತ್ತರದಲ್ಲಿ ಯಾವುದೇ ಕ್ಷಣದಲ್ಲಾದರೂ ದಾಳಿ ಮಾಡಲು ಸಿದ್ಧರಿದ್ದೇವೆ" ಎಂದು ಐಡಿಎಫ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ:ಇಸ್ರೇಲ್ ದಾಳಿಗೆ ಪ್ರತಿ 10 ನಿಮಿಷಕ್ಕೆ ಒಂದು ಮಗು ಸಾವು : ಗಾಜಾ ಆರೋಗ್ಯ ಸಚಿವಾಲಯ
ಇನ್ನೊಂದೆಡೆ, ಗಾಜಾದಲ್ಲಿ ಹೆಚ್ಚುತ್ತಿರುವ ಸಾವಿನ ಸಂಖ್ಯೆಯ ಬಗ್ಗೆ ಜಾಗತಿಕವಾಗಿ ಕಳವಳ ಹೆಚ್ಚಾಗುತ್ತಿದೆ. ಆದರೆ, ಹಮಾಸ್ ಭಯೋತ್ಪಾದಕ ಗುಂಪು ತನ್ನಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ ಇಸ್ರೇಲ್ ಕದನ ವಿರಾಮಕ್ಕೆ ಒಪ್ಪುವುದಿಲ್ಲ. ನಮಗೆ ಪರ್ಯಾಯ ಮಾರ್ಗವೇ ಇಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶಪಥ ಕೈಗೊಂಡಿದ್ದಾರೆ. ಈ ಮಧ್ಯೆ, ಯುಎಸ್ನ ಇಸ್ರೇಲಿ ರಾಯಭಾರಿ ಮೈಕೆಲ್ ಹೆರ್ಜೋಗ್ ಅವರು ಗಾಜಾವನ್ನು ವಿಶ್ವದ 'ಅತಿದೊಡ್ಡ ಭಯೋತ್ಪಾದಕ ಸಂಕೀರ್ಣ' (biggest terror complex) ಎಂದು ಕರೆದಿದ್ದಾರೆ.