ನ್ಯೂಯಾರ್ಕ್(ವಿಶ್ವಸಂಸ್ಥೆ): ವಿಶ್ವಸಂಸ್ಥೆ ಇಸ್ರೇಲಿ ರಾಯಭಾರಿ ಗಿಲಾಡ್ ಎರ್ಡಾನ್, ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕರೆ ನೀಡಿದ್ದಾರೆ. ನಿಗದಿತ ದ್ವಿಪಕ್ಷೀಯ ಮಾತುಕತೆಗಾಗಿ ಇಂದು ವಿಶ್ವಸಂಸ್ಥೆಯ ಮುಖ್ಯಸ್ಥರನ್ನು ಭೇಟಿಯಾಗುವುದಿಲ್ಲ ಎಂದು ಇಸ್ರೇಲ್ ವಿದೇಶಾಂಗ ಸಚಿವ ಎಲಿ ಕೊಹೆನ್ ಹೇಳಿದ್ದಾರೆ. ಎರ್ಡಾನ್ ಈ ಸಂಬಂದ ಸಾಮಾಜಿಕ ಮಾಧ್ಯಮ ಆ್ಯಪ್ X ನಲ್ಲಿ ಪೋಸ್ಟ್ ವೊಂದನ್ನು ಹಾಕಿ ಈ ವಿಷಯ ತಿಳಿಸಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಗುಟೆರಸ್ ಮಾತು - ಯುದ್ಧದ ಬಗ್ಗೆ ಕಳವಳ:'ಹಮಾಸ್ ದಾಳಿಗಳು ನಿರ್ವಾತದಲ್ಲಿ ಸಂಭವಿಸಿಲ್ಲ' ಭದ್ರತಾ ಮಂಡಳಿ ಉದ್ದೇಶಿಸಿ ಮಾತನಾಡಿದ ಗುಟೆರೆಸ್, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಭೀಕರವಾಗುತ್ತಾ ಸಾಗಿದೆ. ಗಾಜಾದಲ್ಲಿ ಯುದ್ಧವು ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಗಾಜಾಪಟ್ಟಿ ಸುರಳಿಯಾಕಾರದ ಗಂಡಾಂತರದಲ್ಲಿದೆ ಎಂದು ಎಚ್ಚರಿಸಿದ್ದಾರೆ. ಹಮಾಸ್‌ನ ದಾಳಿಗಳು ನಿರ್ವಾತದಲ್ಲಿ ಸಂಭವಿಸಿಲ್ಲ ಎಂದು ಗುರುತಿಸುವುದು ಸಹ ಇದೇ ವೇಳೆ ಮುಖ್ಯವಾಗಿದೆ ಎಂದು ಗುಟೆರೆಸ್ ಹೇಳಿದ್ದಾರೆ.
ಗಾಜಾದ ಜನರು ಹಿಂಸಾಚಾರದಿಂದ ಬಾಧಿತರಾಗುತ್ತಿದ್ದಾರೆ. ಅವರ ಆರ್ಥಿಕತೆ ಉಸಿರುಗಟ್ಟಿಸಲ್ಪಟ್ಟಿದೆ. ಅಲ್ಲಿಂದ ಜನರನ್ನು ಸ್ಥಳಾಂತರಗೊಳಿಸಿ ಮನೆಗಳನ್ನು ನೆಲಸಮಗೊಳಿಸಲಾಗುತ್ತಿದೆ. ಅವರ ಕಷ್ಟಗಳಿಗೆ ರಾಜಕೀಯ ಪರಿಹಾರ ಮತ್ತು ಭರವಸೆಗಳು ಕಣ್ಮರೆಯಾಗುತ್ತಿವೆ ಎಂದು ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಪ್ಯಾಲೆಸ್ತೀನ್ ಜನರ ಕುಂದುಕೊರತೆಗಳೊಂದಿಗೆ ಹಮಾಸ್‌ನ ಭಯಾನಕ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ. ಆ ಭಯಾನಕ ದಾಳಿಗಳು ಪ್ಯಾಲೇಸ್ಟಿನಿಯನ್ ಜನರ ಸಾಮೂಹಿಕ ಶಿಕ್ಷೆಯನ್ನು ಸಮರ್ಥಿಸಲೂ ಆಗುತ್ತಿಲ್ಲ ಎಂದು ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿಗಳು ಹೇಳಿದ್ದಾರೆ. ಇದೇ ವೇಳೆ, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಸಭೆ ಉದ್ದೇಶಿಸಿ ಮಾತನಾಡಿದರು.
ಇಸ್ರೇಲ್ ವಿರೋಧ: ಇದೇ ವೇಳೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಗುಟೆರಸ್ ನೀಡಿದ ಹೇಳಿಕೆಯನ್ನು ಇಸ್ರೇಲ್ ರಾಯಭಾರಿ ತೀವ್ರವಾಗಿ ವಿರೋಧಿಸಿದ್ದಾರೆ. ಇದೇ ವೇಳೆ, ಇಸ್ರೇಲ್ ವಿಶ್ವಸಂಸ್ಥೆ ಮುಖ್ಯಸ್ಥರ ರಾಜೀನಾಮೆಯನ್ನು ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ. ಹಮಾಸ್ ದಾಳಿಗಳು "ನಿರ್ವಾತದಲ್ಲಿ ಸಂಭವಿಸಿಲ್ಲ" ಎಂದು ಭದ್ರತಾ ಮಂಡಳಿಯಲ್ಲಿ ಗುಟೆರೆಸ್ ಅವರ ಹೇಳಿಕೆ ಸರಿಯಾದುದಲ್ಲ. ವಿಶ್ವಸಂಸ್ಥೆ ಮುಖ್ಯಸ್ಥರು ಭಯೋತ್ಪಾದನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.