ಟೆಹರಾನ್ (ಇರಾನ್): ಇರಾನ್ ತಮ್ಮ ಜೈಲಿನಲ್ಲಿ ಇರಿಸಿಕೊಂಡಿದ್ದ ಐವರು ಅಮೆರಿಕನ್ನರನ್ನು ಬಿಡುಗಡೆ ಮಾಡಿದೆ. ಆರೋಪಿಗಳನ್ನು ತಪ್ಪು ಮಾಹಿತಿಯಿಂದ ಬಂಧಿಸಲಾಗಿತ್ತು. ಇದೀಗ ಬಿಡುಗಡೆಗೊಳಿಸಲಾಗಿದ್ದು, ವಿಮಾನದ ಮೂಲಕ ವಾಪಸಾಗುತ್ತಿದ್ದಾರೆ. ಮಹತ್ವದ ಒಪ್ಪಂದಂತೆ ಬಿಡುಗಡೆ ಪ್ರಕ್ರಿಯೆ ನಡೆದಿದೆ.
ಸೋಮವಾರ ಮಧ್ಯಾಹ್ನ ಟೆಹ್ರಾನ್ ವಿಮಾನ ನಿಲ್ದಾಣದಿಂದ ಕೈದಿಗಳನ್ನು ಕತಾರ್ ಸರ್ಕಾರಿ ಜೆಟ್ನಲ್ಲಿ ದೋಹಾಕ್ಕೆ ಕರೆದುಕೊಂಡು ಹೋಗಲಾಗಿದೆ. ವಿಮಾನದಲ್ಲಿ ಕತಾರಿ ರಾಯಭಾರಿ ಇದ್ದರು. ಕೈದಿಗಳ ಇಬ್ಬರು ಸಂಬಂಧಿಕರೂ ಜೊತೆಗಿದ್ದರು. ಅಧಿಕೃತ ಮಾಧ್ಯಮ ವರದಿ ಪ್ರಕಾರ, ಬಿಡುಗಡೆಯಾದವರಲ್ಲಿ ಎಮಾದ್ ಶಾರ್ಗಿ, ಮೊರಾದ್ ತಹಬಾಜ್ ಮತ್ತು ಸಿಯಾಮಕ್ ನಮಾಜಿ ಇದ್ದು ಇವರೆಲ್ಲರೂ ಇರಾನ್ನಲ್ಲಿ 5 ವರ್ಷ ಜೈಲುವಾಸ ಅನುಭವಿಸಿದ್ದರು.
ಸಿಯಾಮಕ್ ನಮಾಜಿಯನ್ನು 2015ರಿಂದ ಬಂಧಿಸಲಾಗಿತ್ತು. ಬಿಡುಗಡೆಯಾದ ಐವರಲ್ಲಿ ಮಾಹಿತಿ ಇರುವ ಮೂವರಲ್ಲಿ ಸಿಯಾಮಕ್ ನಮಾಜಿ ಬಿಟ್ಟರೆ ಇನ್ನಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸಿಯಾಮಕ್ ನಮಾಜಿ ಅವರ ತಾಯಿ ಎಫಿ ನಮಾಜಿ ಮತ್ತು ಮೊರಾದ್ ತಹಬಾಜ್ ಅವರ ಪತ್ನಿ ವಿದಾ ತಹಬಾಜ್ ಈ ಹಿಂದೆ ಇರಾನ್ನಿಂದ ದೋಹಾಗೆ ಹೊರಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಅವರು ತಮ್ಮ ಕುಟುಂಬದವರೊಂದಿಗೆ ಒಂದಾಗಲಿದ್ದು ಅಮೆರಿಕದ ವಾಷಿಂಗ್ಟನ್ಗೆ ಪ್ರಯಾಣಿಸುತ್ತಾರೆ. ಅಮೆರಿಕ ಪ್ರಜೆಯಾಗಿದ್ದ ಸಿಯಾಮಕ್ ನಮಾಜಿಯು ಇರಾನ್ನಲ್ಲಿ ದೀರ್ಘಾವಧಿಯಲ್ಲಿ ವ್ಯಾಪಾರದ ಪ್ರವಾಸದಲ್ಲಿದ್ದುದರಿಂದ 2015 ರಲ್ಲಿ ವೈರಿ ರಾಷ್ಟ್ರದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು.