ಟೆಹ್ರಾನ್:ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (ಐಆರ್‌ಜಿಸಿ) ಟೆಹ್ರಾನ್‌ನಲ್ಲಿ ನಡೆದ 'ಖುದ್ಸ್ಡೇ ರ್‍ಯಾಲಿ'ಯಲ್ಲಿ ಎರಡು ಹೊಸ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರದರ್ಶಿಸಿದೆ ಎಂದು ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಎಮಾಡ್-3" ಎಂದು ಕರೆಯಲ್ಪಡುವ ಕ್ಷಿಪಣಿಯನ್ನು ಶುಕ್ರವಾರ ಐಆರ್‌ಜಿಸಿ ಪ್ರದರ್ಶಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಐಆರ್‌ಜಿಸಿಯ ಏರೋಸ್ಪೇಸ್ ಫೋರ್ಸ್ ಅಭಿವೃದ್ಧಿಪಡಿಸಿದ ಎಮಾಡ್ - 3 ಇರಾನ್‌ನ ಮೊದಲ ಸಂಪೂರ್ಣ ಸ್ವದೇಶಿ ದೀರ್ಘ-ಶ್ರೇಣಿಯ ಕ್ಷಿಪಣಿಯಾಗಿದೆ. ಅದು ಗುರಿಯನ್ನು ಮುಟ್ಟುವವರೆಗೆ ಮಾರ್ಗದರ್ಶನ ಮತ್ತು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ ಎಂದು ವರದಿ ಹೇಳಿದೆ.