ಕೈರೋ:ಹಿಜಾಬ್ ವಿರೋಧಿರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಸುಳ್ಳು ಸುದ್ದಿಗಳನ್ನು ಹರಡಿಸಿದ ಆರೋಪದ ಮೇರೆಗೆ ದೇಶದ ಅತ್ಯಂತ ಪ್ರಸಿದ್ಧ ನಟಿಯೊಬ್ಬರನ್ನು ಇರಾನ್ ಅಧಿಕಾರಿಗಳು ಬಂಧಿಸಿದ್ದಾರೆ. 'ದಿ ಸೇಲ್ಸ್‌ಮ್ಯಾನ್' ಖ್ಯಾತಿಯ ಆಸ್ಕರ್ ಪ್ರಶಸ್ತಿ ವಿಜೇತ ನಟಿ ತರನೆಹ್ ಅಲಿದೋಸ್ತಿ ಬಂಧಿತೆ.
ಇತ್ತೀಚೆಗೆ ಹಿಜಾಬ್ ವಿರೋಧಿ ಪ್ರತಿಭಟನೆಯ ವೇಳೆ ಅಪರಾಧ ಕೃತ್ಯಗಳನ್ನು ಎಸಗಿದ ಆರೋಪಿಗೆ ಇಲ್ಲಿನ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆ ವ್ಯಕ್ತಿಗೆ ಬೆಂಬಲ ಸೂಚಿಸುವಂತೆ ನಟಿ ಇನ್ಸ್ಸ್ಟಾಗ್ರಾಮ್ನಲ್ಲಿ ಬರಹವೊಂದನ್ನು ಪೋಸ್ಟ್ ಮಾಡಿದ್ದರು. ಇದಾದ ಒಂದು ವಾರದ ನಂತರ ನಟಿಯನ್ನು ಬಂಧಿಸಲಾಗಿದೆ.
ನಟಿ ಬರೆದಿದ್ದೇನು?: ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಮೊಹ್ಸೆನ್ ಶೇಕರಿ ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಈ ರಕ್ತಪಾತ ನೋಡುತ್ತಿರುವ ಮತ್ತು ಕ್ರಮ ಕೈಗೊಳ್ಳದ ಪ್ರತಿಯೊಂದು ಅಂತಾರಾಷ್ಟ್ರೀಯ ಸಂಸ್ಥೆಗಳು ಮಾನವೀಯತೆಗೆ ಅವಮಾನ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: